ರಾಜ್ಯ ಸರ್ಕಾರಿ ನೌಕರರಿಗೆ ಸಮಾಧಾನ ಹೇಳಿದ ಸಿ ಎಸ್ ಷಡಾಕ್ಷರಿ.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷಾರದ ಸಿ.ಎಸ್.ಷಡಾಕ್ಷರಿಯವರನ್ನು ವರ್ಗಾವಣೆ ಮಾಡಿರಿವುದರ ಹಿಂದೆ ಇದೀಗ ರಾಜಕೀಯ ಉದ್ದೇಶವಿದೆ ಎಂಬುದು ಮೆಲ್ನೋಟಕ್ಕೆ ಕಾಣುತ್ತಿದೆ..
ಹೌದು.ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಸಿ.ಎಸ್.ಷಡಾಕ್ಷರಿ, ಸಚಿವ ಮಧು ಬಂಗಾರಪ್ಪ ಬರೆದಿರುವ ಪತ್ರದ ಸಂಬಂಧಿಸಿದಂತೆ ನನಗೆ ಈಗಷ್ಷೇ ಮಾದ್ಯಮಗಳ ಮೂಲಕ ತಿಳಿದೆ..ಆದ್ರೆ ಸಚಿವರು ಪತ್ರ ಬರೆಯುವುದಕ್ಕೂ ಮೋದಲೇ ನೆರವಾಗಿ ನನ್ನ ಜೊತೆ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು..ಮೆಲ್ನೋಟಕ್ಕೆ ಇದು ರಾಜಕಿಯ ಪ್ರೇರಿತ ವರ್ಗಾವಣೆ ಎಂಬುದು ಗೊತ್ತಾಗುತ್ತದೆ ಎಂದರು..ಸಚಿವ ಮಧು ಬಂಗಾರಪ್ಪ ಅವರು ಸಚಿವರಾಗಿ ಶಿವಮೊಗ್ಗ ಜಿಲ್ಲೆಗೆ ಪ್ರಥಮವಾಗಿ ಬಂದಾಗ ಅವರ ಮನೆಗೆ ಹೋಗಿ ಶುಭಾಷಯಗಳನ್ನು ತಿಳಿಸಿದ್ದೆ,ಭೇಟಿಯಾದಾಗ ಕೂಡ ಮಾತನಾಡುತ್ತಿದೆ. ಏನಾದರೂ ವಿಷಯ ಇದ್ದರೆ ನೇರವಾಗಿ ನನ್ನ ಕೇಳಬಹುದಿತ್ತು ಎಂದರು..
ಮಾನ್ಯ ಮುಖ್ಯ ಮಂತ್ರಿಗಳು ಚಿಕ್ಕಮಗಳೂರು ಪ್ರವಾಸದಲ್ಲಿ ಇದ್ದಾರೆ.ಬೆಂಗಳೂರಿಗೆ ಬಂತ ನಂತರ ಅವರ ಜೊತೆ ಮಾತನಾಡುತ್ತೇನೆ ಎಂದರು..ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದರು.
7ನೇ ವೇತನ ಆಯೋಗದ ಅವಧಿ ವಿಸ್ತರಣೆ ಬೆನ್ನಲ್ಲೇ ಸರ್ಕಾರ ರಾಜ್ಯಾಧ್ಯಕ್ಷರನ್ನು ಕೋಲಾರಕ್ಕೆ ವರ್ಗಾವಣೆ ಮಾಡಿತ್ತು. ಸರ್ಕಾರದ ಈ ಕ್ರಮದಿಂದಾಗಿ ರಾಜ್ಯ ಸರ್ಕಾರಿ ನೌಕರರು ಆಕ್ರೋಶಗೊಂಡಿದ್ದು, ಇಂದು ಸುಮಾರು 300ಕ್ಕೂ ಹೆಚ್ಚು ನೌಕರರು ಜಿಲ್ಲೆ, ತಾಲೂಕುಗಳಿಂದ ಆಗಮಿಸಿ ಸರ್ಕಾರದ ಈ ಕ್ರಮದ ವಿರುದ್ಧ ಮುಷ್ಕರಕ್ಕೆ ಕರೆ ನೀಡಲು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು..
ನನ್ನ ವೈಯಕ್ತಿಕ ವರ್ಗಾವಣೆಯ ಕಾರಣಕ್ಕಾಗಿ ಸರ್ಕಾರಿ ನೌಕರರು ಪ್ರತಿಭಟಿಸುವುದು ನನಗೆ ಇಷ್ಟ ಇರುವುದಿಲ್ಲ ವೈಯಕ್ತಿಕವಾಗಿ ಸಂಘಟನೆಯನ್ನು ಬಳಸಿಕೊಂಡತಾಗುತ್ತದೆ
ಆದ್ದರಿಂದ ನಿಮ್ಮ ಪ್ರೀತಿ ,ವಿಶ್ವಾಸ ಅನನ್ಯವಾಗಿದ್ದು ಅದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಲ್ಲಿವರೆಗೂ ಸಹಕರಿಸಿ.*
7ನೇ ವೇತನ ಆಯೋಗದ ಜಾರಿ ಮತ್ತು NPS ರದ್ಧತಿ, ಖಾಲಿ ಹುದ್ದೆ ಭರ್ತಿ..ಪ್ರಮುಖವಾದ ಬೇಡಿಕೆಗಳು ನಮ್ಮ ಮುಂದಿದ್ದು ಈ ಸಂಬಂಧ ತುರ್ತಾಗಿ ಕಾರ್ಯಕಾರಿಣಿ ಸಭೆ ಕರೆದು ಆ ಬಗ್ಗೆ ನಿರ್ಣಯಿಸಲಾಗುವುದು
ಆ ಸಂದರ್ಭದಲ್ಲಿ ತಮ್ಮ ಸಹಕಾರ ಮತ್ತು ಪ್ರೀತಿ ಹೀಗೆ ಇರಲೆಂದು ಮನವಿ ಮಾಡಿದರು. ಇಂದು ಕಚೇರಿಗೆ ಆಗಮಿಸಿದ್ದ ಸರ್ಕಾರಿ ನೌಕರರು ವಲ್ಲದ ಮನಸ್ಸಿನಿಂದ ಸಹಕಾರ ನೀಡಿದರು.