ಹೆಬ್ಬಳ್ಳಿಯಲ್ಲಿ ಉಲ್ಲಾಸ ಕಾರ್ಯಕ್ರಮದ ಸಮೀಕ್ಷೆ ಕಾರ್ಯ ಯಶಸ್ವಿ..
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಅನಕ್ಷರಸ್ಥರ ಸಮೀಕ್ಷೆಯನ್ನು ಅಂಗನವಾಡಿ ಆಶಾ ಕಾರ್ಯಕರ್ತೆಯರ ಮೂಲಕ ಮಾಡಿ ಯಶಸ್ವಿಯಾಗಿ ಸಮೀಕ್ಷೆಯ ವರದಿಯನ್ನು ಪಡೆಯಲಾಯಿತು, ಎರಡು ಸಾವಿರಕ್ಕೂ ಅಧಿಕ ಅನಕ್ಷರಸ್ಥರು ಈ ಸಮೀಕ್ಷೆಯಲ್ಲಿ ಕಂಡು ಬಂದಿರುತ್ತಾರೆ, ಸಮೀಕ್ಷೆಯ ವರದಿಯನ್ನು ಗ್ರಾಮ ಪಂಚಾಯತಿ ಸಾಮಾಜಿಕ ನ್ಯಾಯ ಸಮಿತಿಯ ಅದ್ಯಕ್ಷ ಮಂಜುನಾಥ ವಾಸಂಬಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ವರೂರ ಅವರಿಗೆ ಹಸ್ತಾಂತರಿಸಿ, ಮಾತನಾಡಿದ ಅವರು,
ಕರ್ನಾಟಕ ಸರಕಾರ ಹಾಗೂ ಜಿಲ್ಲಾ ವಯಸ್ಕ ಶಿಕ್ಷಣ ಸಮಿತಿ ಆಶ್ರಯದಲ್ಲಿ
ಸರಕಾರದ ವಿನೂತನ ಯೋಜನೆ “ಉಲ್ಲಾಸ”ಗೆ ಚಾಲನೆ ನೀಡಲಾಯಿತು. ವಯಸ್ಕರು ಶಿಕ್ಷಿತರಾಗಳು ಜಾರಿಗೆ ತಂದಂತಹ ಯೋಜನೆಯಗಿದ್ದು ಇದಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು.ಈ ಕಲಿಕಾ ವಿಧಾನವು ವಿಶಿಷ್ಟ ರೀತಿಯದಾಗಿದ್ದು ಎಲ್ಲಾ ವರ್ಗದ ಜನರಿಗೆ ತಿಳಿದುಕೊಳ್ಳಲು ಅನುಕೂಲಕರವಾಗಿದೆ, ಇಂದಿನ ಹೊಸ ಯುಗದಲ್ಲಿ ಶಿಕ್ಷಣದ ಅವಶ್ಯಕತೆ ಎಲ್ಲರಿಗೂ ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಈ ಮೊದಲು ನಡೆಯುತ್ತಿದ್ದ ರಾತ್ರಿ ಶಾಲೆಯ ಮಾದರಿಯಲ್ಲೇ ಈ ತರಗತಿಗಳು ಇದ್ದು ಕಲಿಕೆಗೆ ಸರಳ ರೀತಿಯಲ್ಲಿ ಇವೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಶಿಕ್ಷತ ಮಹಿಳೆಯು ತನ್ನ ಮನೆಯನ್ನು ಸುಂದರವಾಗಿ ಬೆಳಗುವಳು ಕಾರಣ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಈ ಕಾರ್ಯಕ್ರಮಕ್ಕೆ ನಮ್ಮ ಪಂಚಾಯತ ವತಿಯಿಂದ ಮೂಲಕ ಸೌಕರ್ಯಗಳನ್ನು ಒದಗಿಸಲಾಗುವುದು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಯಶ್ರೀ ವರೂರ ಮಾತನಾಡಿ ಹೆಬ್ಬಳ್ಳಿ ಗ್ರಾಮದಲ್ಲಿ ಅನಕ್ಷರಸ್ಥರ ಸಮೀಕ್ಷೆಯನ್ನು ಅಂಗನವಾಡಿ, ಆಶಾ ಕಾರ್ಯಕರ್ತೆಯರು ತುಂಬಾ ಮುತುವರ್ಜಿ ವಹಿಸಿ, ಪ್ರಾಮಾಣಿಕವಾಗಿ ಅನಕ್ಷರಸ್ಥರನ್ನು ಗುರುತಿಸಿರುತ್ತಾರೆ, ಈ ಅನಕ್ಷರಸ್ಥರಿಗೆ ಕಾಲೇಜು ವಿದ್ಯಾರ್ಥಿಗಳ ಮೂಲಕ ಸಾಕ್ಷರರನ್ನಾಗಿ ಮಾಡುವ ಗುರಿ ಹೊಂದಲಾಗಿದೆ, ಗ್ರಾಮ ಪಂಚಾಯತಿ ಅದ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು, ಜಿಲ್ಲಾ ಸಂಯೋಜಕ ಎಸ್ ಆರ್ ರಾಚಣ್ಣವರ ಇದೇ ಸಂದರ್ಭದಲ್ಲಿ ಮಾದರಿ ಕಲಿಕಾ ಕೇಂದ್ರವನ್ನು ಗುರುತಿಸಿ, ಆರಂಭಿಕ ಅಕ್ಷರ ಬರಹದ ಕುರಿತು ಮಾಹಿತಿ ನೀಡಿದರು. ಇಸ್ಲಾಂ ಧರ್ಮ ಗುರು ಮೌಲಾನಾ ಶಾಕೀರಲಿ, ಜಮಾತ ಹಿರಿಯರಾದ ಮೌಲಾಸಾಬ ಸವಣೂರು ಶಿಕ್ಷಕ ಎಲ್ ಐ ಲಕ್ಕಮ್ಮನವರ ಬಿ ಎಂ ಸುತಾರ ಕೆ ಎಂ ಶಿವಳ್ಳಿ ಗ್ರಾಮದ ದಾನ ಪಟ್ಟಿ ಕಲಾವಿದರ ಸಂಘದ ಅದ್ಯಕ್ಷರಾದ ಯಲ್ಲಪ್ಪ ಸಾಲಿ ಮುಂತಾದವರು ಇದ್ದರು.