ಕಾಳಗಿ: ಸರ್ಕಾರಿ ಕರ್ತವ್ಯದ ವೇಳೆಯಲ್ಲೇ ನೌಕರರಿಗೆ ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಮಾಸಿಕ ವೇತನ ಜಮಾ ಆಗುವುದಿಲ್ಲ. ಆದರೆ ಶಿಕ್ಷಕರೊಬ್ಬರು ನಿಧನವಾಗಿ 5 ತಿಂಗಳ ಬಳಿಕವೂ ಅವರ ಖಾತೆಗೆ 2 ತಿಂಗಳ ವೇತನ ಜಮಾ ಆಗಿರುವ ಘಟನೆ ಚಿತ್ತಾಪುರ ಶೈಕ್ಷಣಿಕ ತಾಲ್ಲೂಕಿನಲ್ಲಿ ನಡೆದಿದೆ..
ಬೆಡಸೂರ ಎಂ.ತಾಂಡಾ (ಸಂಜಯನಗರ)ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ನಡ ಶಿಕ್ಷಕರಾಗಿದ್ದ, ಇತ್ತೀಚೆಗೆ ನಿಧನಾರದ ಬಸವಣಪ್ಪ ಬಂಟನೂರ ಎಂಬುವರ ಖಾತೆಗೆ ವೇತನ ಜಮಾ ಆಗಿದೆ ಎನ್ನಲಾಗಿದೆ.
ಶಿಕ್ಷಕ ಬಸವಣಪ್ಪ ಬಂಟನೂರ ಪ್ರಸ್ತುತ ಕಮಲಾಪುರ
ತಾಲ್ಲೂಕಿನ ಮಹಾಗಾಂವ್ ಕ್ರಾಸ್ ಚಂದ್ರನಗರ ಶಾಲೆಯಿಂದ
ಪರಸ್ಪರ ವರ್ಗಾವಣೆಯಲ್ಲಿ 2015ರ ಸೆಪ್ಟೆಂಬರ್ 3 ರಂದು
ಕಾಳಗಿ ತಾಲ್ಲೂಕಿನ ಬೆಡಸೂರ ಎಂ. ತಾಂಡಾದ ಶಾಲೆಗೆ
ಬಂದಿದ್ದಾರೆ.
ಅವರು ಅನಾರೋಗ್ಯದಿಂದ 2023ರ ಮಾರ್ಚ್ 10ರಂದು ನಿಧನರಾಗಿದ್ದಾರೆ. ಆದರೆ ಅವರು ನಿಧನರಾಗುವುದಕ್ಕೂ ಮುನ್ನ ಅರಣಕಲ್ ಕಿಂಡಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆ ಮೇರೆಗೆ (ಡೆಪ್ಯುಟೇಶನ್) ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಶಿಕ್ಷಕ ಬಸವಣಪ್ಪ ನಿಧನದ ಬಗ್ಗೆ ಅಲ್ಲಿಯ ಮುಖ್ಯ ಶಿಕ್ಷಕರು ಸಂಬಂಧಪಟ್ಟ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಿ, ಅದರ ಪ್ರತಿಯನ್ನು ಮಾಹಿತಿಗಾಗಿ ಬೆಡಸೂರ ಎಂ. ತಾಂಡಾದ ಮುಖ್ಯ ಶಿಕ್ಷಕರಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಆ ಬಳಿಕ ಮೃತ ಶಿಕ್ಷಕರ ಮಾಸಿಕ ವೇತನ ಶಿಕ್ಷಕ ಬಸವಣಪ್ಪ ನಿಧನದ ಬಗ್ಗೆ ಅಲ್ಲಿಯ ಮುಖ್ಯ ಶಿಕ್ಷಕರು ಸಂಬಂಧಪಟ್ಟ ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಸಲ್ಲಿಸಿ, ಅದರ ಪ್ರತಿಯನ್ನು ಮಾಹಿತಿಗಾಗಿ ಬೆಡಸೂರ ಎಂ. ತಾಂಡಾದ ಮುಖ್ಯ ಶಿಕ್ಷಕರಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಆ ಬಳಿಕ ಮೃತ ಶಿಕ್ಷಕರ ಮಾಸಿಕ ವೇತನ ಸ್ಥಗಿತಗೊಂಡಿದೆ. ಆದರೆ ಶಿಕ್ಷಕ ಮರಣಹೊಂದಿ 5 ತಿಂಗಳ ಬಳಿಕ ಇದ್ದಕ್ಕಿದ್ದಂತೆ ಆಗಸ್ಟ್ ಮತ್ತು ಸೆಪ್ಟೆಂಬರ್, ಈ ಎರಡು ತಿಂಗಳ ವೇತನ ಅವರ ಖಾತೆಗೆ (ಕೆಜಿಐಡಿ 1229437) ಜಮಾ ಆಗಿದೆ. ತಿಂಗಳ ಹಿಂದೆಯೇ ವೇತನ ಪಾವತಿಯಾಗಿದ್ದು, ಈವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ವೇತನ ಹಿಂದಕ್ಕೆ ಪಡೆದಿಲ್ಲ.