ಹುಬ್ಬಳ್ಳಿ:
ಈ ರಾಜ್ಯದ ಒಟ್ಟು ನೌಕರರಲ್ಲಿ ಶಿಕ್ಷಕರು ಶೇ.ಐವತ್ತಕ್ಕೂ ಹೆಚ್ಚು ಇದ್ದೇವೆ.ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗವು ರಚನೆಯಾಗಿ ಇದೇ ನವಂಬರ್ ಹತ್ತೊಂಭತ್ತಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ.ಈ ಹಿಂದೆ ಆರು ತಿಂಗಳೊಳಗಾಗಿ ಜಾರಿಯಾಗಬೇಕಾಗಿದ್ದ ವೇತನ ಆಯೋಗದ ವರದಿ ಅಂದಿನ ಮುಖ್ಯ ಮಂತ್ರಿಗಳು ನಾವೆಲ್ಲ ಹೋರಾಟಕ್ಕೆ ಇಳಿದ ಮೇಲೆ ತೃಪ್ತಿಕರ ಶೇ.ಹದಿನೇಳು ಮಧ್ಯಂತರ ಪರಿಹಾರ ನೀಡಿದರು. ಈ ಮಧ್ಯ ಚುನಾವಣೆ ನಿಮಿತ್ಯ ಮತ್ತೆ ಆರು ತಿಂಗಳು ಮೇ ಐದರಂದು ಮುಂದೂಡಿದರು.
ಈಗ ಮಾನ್ಯ ಮುಖ್ಯ ಮಂತ್ರಿಗಳು ಈ ಕೂಡಲೇ ಏಳನೇ ವೇತನ ಆಯೋಗದ ವರದಿಯನ್ನು ತರಿಸಿಕೊಂಡು ಯಥಾವತ್ತಾಗಿ ಜಾರಿಗೊಳಿಸಬೇಕು, ವಿಳಂಬವಾದಲ್ಲಿ ಎರಡನೇ ಬಾರಿ ಶೇ.ಮೂವತ್ತು ಮಧ್ಯಂತರ ಪರಿಹಾರ ಘೋಷಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್ ಸಜ್ಜನ ಇವರು ನಗರದ ಮಾಧ್ಯಮ ಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಪಡಕ್ಷರಿಯವರು ಸರ್ಕಾರದ ಮನವೊಲಿಸಬೇಕು, ಇಲ್ಲವಾದಲ್ಲಿ ಮತ್ತೆ ಹೋರಾಟಕ್ಕೆ ಕರೆ ಕೊಡಬೇಕೆಂದು ಹೇಳಿದರು. ನವೆಂಬರ್ 5 ರಂದು ಹುಬ್ಬಳ್ಳಿ ಮಹಾನಗರದಲ್ಲಿ ಜರುಗಿದ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ರಾಜ್ಯದ 31 ಜಿಲ್ಲೆಯ ಸಂಘದ ಪ್ರಮುಖರು ಹಾಗೂ ರಾಜ್ಯ ಸಂಘದ ಎಲ್ಲಾ ಹಂತದ ಪದಾಧಿಕಾರಿಗಳು ಪಾಲ್ಗೊಂಡು, ಮಹತ್ವದ ಏಳನೇ ವೇತನ ಜಾರಿಯಾಗಬೇಕು, ಹಳೆಯ ಪಿಂಚಣಿ ಜಾರಿಗೆಯಾಗಬೇಕು, ಅಲ್ಲದೇ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ವರ್ಗಾವಣೆ ಪ್ರತಿವರ್ಷ ಆಗಬೇಕು ಎಂದು ಕರೆ ನೀಡಿರುವ ಕುರಿತು ರಾಜ್ಯಾದ್ಯಕ್ಷರಾದ ಆಶೋಕ ಸಜ್ಜನ ವಿವರಿಸಿದರು.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಐದಾರು ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರ ನಡೆದಿದೆ ಈ ಬಾರಿ ವರ್ಗಾವಣೆ ಅಧಿನಿಯಮದ ಪ್ರಕಾರ ವಲಯ ವರ್ಗಾವಣೆ ಅಥವಾ ಕಡ್ಡಾಯ ವರ್ಗಾವಣೆ ಈ ಕೂಡಲೇ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ವರ್ಷದಲ್ಲಿ ಎರಡುಬಾರಿ ಶಿಕ್ಷಕರಿಗೆ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಶಿಕ್ಷಕರ ಹುದ್ದೆಗೆ ಪದೋನ್ನತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು, ಮುಂಬಡ್ತಿ ಪಡೆಯದೇ ಅದೆಷ್ಟೋ ನಮ್ಮ ವೃತ್ತಿ ಬಾಂಧವರು ಹಾಗೆಯೇ ನಿವೃತ್ತಿಯಾಗುತ್ತಿರುವುದ ದೇಸರದ ಸಂಗತಿಯಾಗಿದೆ ಮುಂದುವರೆದು ಈ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಎಂಭತ್ತು ಸಾವಿರ ಪದವಿಧರ ಶಿಕ್ಷಕರಿದ್ದು ಅವರಿಗೆ ಒಂದರಿಂದ ಐದು ಮಾತ್ರ ಎಂದು ಪಿ.ಎಸ್.ಟಿ. ಅಂತ ಪರಿಗಣಿಸಿದ್ದಾರೆ. ಎಂಭತ್ತು ಸಾವಿರ ಪದವಿಧರ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಆರರಿಂದ ಎಂಟಕ್ಕೆ ವಿಲೀನಗೊಳಿಸಬೇಕು. ಆರ್ಥಿಕ ಸೌಲಭ್ಯ ನೀಡಬೇಕು ಹಾಗೂ ಆರರಿಂದ ಎಂಟಕ್ಕೆ ನಿಯುಕ್ತಿಗೊಳಿಸಬೇಕು. ಹೊಸ ಪಿಂಚಣಿ ಯೋಜನೆ ಕೈ ಬಿಟ್ಟು ಹಳೆ ಪಿಂಚಣಿ ಯೋಜನೆ ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯುಸಿದರು.
ಸುದ್ದಿ ಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಆಶೋಕ ಎ. ಸಜ್ಜನ ರಾಜ್ಯ ಗೌರವಾಧ್ಯಕ್ಷ ಎಲ್.ಆಯ್ ಲಕ್ಕಮ್ಮನವರ, ಶಿಸ್ತು ಸಮಿತಿ ಅಧ್ಯಕ್ಷ ಗೋವಿಂದ ಜಜಾರೆ ಶಿಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಮೇಟಿ ಜಿಲ್ಲಾಧ್ಯಕ್ಷ ಎ. ಆಯ್, ಸೋಲಾಪೂರ ಉಪಸ್ಥಿತರಿದ್ದರು.