ಸಮಾಜ ಸೇವೆ, ಹೋರಾಟಗಾರ, ಮಹೇಶ ಹುಬ್ಬಳ್ಳಿ
ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ.ಅಂಥಹ ಸಂಘಟನಾ ಚತುರ ಹಾಗೂ ತನ್ನನ್ನು ತಾನು ಸಮಾಜ ಸೇವೆಗೆ ತೊಡಗಿಸಿಕೊಳ್ಳುವ ಸಮಾಜ ಸೇವಕರಲ್ಲಿ ಅಪರೂಪದ ಸಮಾಜ ಸೇವಕರಾದ ಶ್ರೀ ಮಹೇಶ ಹುಬ್ಬಳ್ಳಿ ಅವರ ಪರಿಚಯ ನಾನಿಂದು ಮಾಡಹೊರಟಿರುವೆ.
ಇವರ ಜನ್ಮದಿನ ನವೆಂಬರ್ 7.ಇವರು ಯುವ ಜನತೆಯ ಆಶಾ ಕಿರಣ ಎಂದರೆ ತಪ್ಪಾಗಲಿಕ್ಕಿಲ್ಲ. ಶ್ರೀಮಂತ ಮನೆತನದ ಅಪರೂಪದ ಮಗನಾಗಿ ಹುಟ್ಟಿದ ಶ್ರೀ ಮಹೇಶ್ ಹುಬ್ಬಳ್ಳಿ ಇವರು ದಿನಾಂಕ 07.11.1976 ರಲ್ಲಿ ಶ್ರೀ . ಚಂದ್ರಾಮ್ ಹುಬ್ಬಳ್ಳಿ ಹಾಗೂ ಮುಕ್ತಾಬಾಯಿ ಹುಬ್ಬಳ್ಳಿ ದಂಪತಿಯ ಹಿರಿಯಮಗನಾಗಿ ಕಲಬುರಗಿಯಲ್ಲಿ ಜನಿಸಿದರು.
ಇವರಿಗೆ ಸುಜಾತ ಸಂಗೀತಕರ, ಸವಿತಾ ಸಿಂಧೆ ಸಹೋದರಿಯರು ಹಾಗೂ ಗಣೇಶ್ ಹುಬ್ಬಳ್ಳಿ ಸಹೋದರ ಇದ್ದಾರೆ.ಇವರ ಧರ್ಮ ಪತ್ನಿ ಶ್ರೀಮತಿ ಅನಿತಾ ಹುಬ್ಬಳ್ಳಿ ,ಈ ದಾಂಪತ್ಯ ಕ್ಕೆ ಪ್ರಗತಿ ಹುಬ್ಬಳ್ಳಿ ಹಾಗೂ ಪ್ರಕೃತಿ ಹುಬ್ಬಳ್ಳಿ ಎಂಬ ಸುಂದರವಾದ ಹೆಣ್ಣು ಮಕ್ಕಳು ಇದ್ದಾರೆ.
ಶಿಕ್ಷಣ
ಇವರ ಪ್ರಾಥಮಿಕ ಶಿಕ್ಷಣ – ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಶಾಲೆ ಕಲಬುರಗಿ.ಯಲ್ಲಿ ಜರುಗಿತು ನಂತರ
ಪ್ರೌಢ ಶಿಕ್ಷಣ – ಮಿಲಿಂದ್ ಪ್ರೌಢಶಾಲೆ ಕಲಬುರಗಿಯಲ್ಲಿ ಮುಗಿಸಿ
ಪದವಿ ಪೂರ್ವ ಶಿಕ್ಷಣವನ್ನು ಅದೇ ಮಿಲಿಂದ್ ಕಾಲೇಜ್ ಆಫ್ ಸೈನ್ಸ್ ಕಲಬುರಗಿಯಲ್ಲಿ ಮುಗಿಸಿದರು. ಲ್ಯಾಬ್ ಟೇಕ್ನಿಶನ್ – ಫಾರ್ಮಸಿ ಲುಕುಮನ್ ಕಾಲೇಜ್ ಕಲಬುರಗಿ.
ಡಿಪ್ಲೋಮಾ ಇನ್ ಆಯುರ್ವೇದ ಕೇರಳ ಮುಕ್ತ ವಿಶ್ವವಿದ್ಯಾಲಯ.ದಲ್ಲಿ ಪೂರೈಸಿ ವೃತ್ತಿ ಬದುಕಿಗೆ ಕಾಲಿಟ್ಟಿರು
ಸಂಘಟನೆಯ ಜವಾಬ್ದಾರಿ
ಪ್ರೌಢ ಶಾಲೆಯ ವಿದ್ಯಾರ್ಥಿ ಇದ್ದಾಗಲೇ ಸಂಘಟನೆ ಕಟ್ಟುವ ಹುಮ್ಮಸು, ಹಾಗೂ ಸಾಮಾಜಿಕ ಸೇವೆಯತ್ತ ದಾಪುಗಾಲಿಡುವ ಇವರು,1985 ರಲ್ಲಿಯೇ ಬುದ್ಧ ಧಮ್ಮ ಜಾಗೃತಿ ಸಮಿತಿಯ ಪ್ರಚಾರ ಅಧ್ಯಕ್ಷರಾಗಿ ಸೇವೆ ಆರಂಭಿಸಿದರು ಇವರು ಸಮಾಜ ಸೇವೆ,ಹಾಗೂ ಹೋರಾಟಗಳಿಗೆ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದು, ನಾಡಿನ ಪ್ರಸಿದ್ಧ ಮಹಾನುಭಾವರ ಆಶ್ರಯ ಹಾಗೂ ಮಾರ್ಗದರ್ಶನದಲ್ಲಿ ಅನೇಕ ಯುವಕರಿಗೆ ಮಾರ್ಗದರ್ಶನ ನೀಡುವ ಜೊತೆಗೆ ಉದ್ಯೋಗದಲ್ಲಿ ಅವರಿಗೆ ಸಹಕಾರ ನೀಡಿದ್ದು, ಅನೇಕ ನಿರಾಶ್ರಿತ ಮಹಿಳೆಯರಿಗೆ ಹಾಗೂ ಬಡವರಿಗೆ ಸಹಾಯ ಮಾಡಿದ್ದು ಶ್ಲಾಘನೀಯ. ತನ್ನ ವಯಕ್ತಿಕ ಜೀವನದ ಕಡೆಗೆ ಗಮನ ಕೊಡದೆ ಸಮಾಜಮುಖಿ ಕಾರ್ಯಕ್ರಮಗಳನ್ನು,ಚಿಂತನೆಗಳನ್ನು ಮಾಡುತ್ತಾ ಬಂದಿರುವ ಇವರು ಕುಟುಂಬದ ಜವಬ್ದಾರಿಯ ಜೊತೆಗೆ ಸಾರ್ವಜನಿಕ ಹೊಣೆಗಾರಿಕೆಯನ್ನು ನಿಭಾಯಿಸತೊಡಗಿರುವರು
ವೃತ್ತಿ ಬದುಕು ಹಾಗೂ ಸಂಘಟನೆ
2016 ರಲ್ಲಿ ಇವರು ಫಾರ್ಮಸಿ ಅಧಿಕಾರಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಂದೂರ ಕಲಬುರಗಿಯಲ್ಲಿ ಸರಕಾರಿ ಸೇವೆಗೆ ಸೇರಿದರು.
ಅಲ್ಲಿ ಕೂಡಾ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೌಕರರ ಕ್ಷೇಮಾಭಿವೃದ್ಧಿ ಹಾಗೂ ಅವರ ಬೇಡಿಕೆಗಳಿಗಾಗಿ ನಡೆಯುವ ಹೋರಾಟ, ಚಳುವಳಿಗಳಲ್ಲಿ ಭಾಗವಹಿಸುವ ಮೂಲಕ, ಅನೇಕ ನೌಕರರ ಪಾಲಿನ ಆಶಾ ಕಿರಣ.ಆಗಿರುವರು.
ಸಾಮಾಜಿಕ ಸೇವೆಗೆ ತನ್ನನ್ನು ತೊಡಗಿಸಿಕೊಂಡ ಇವರು, ತನ್ನ ಸಮುದಾಯಕ್ಕೆ ಏನಾದರೂ ಸೇವೆ ಕೊಡುವ ಮಹದಾಸೆ ಹೊತ್ತಿರುವರು,1985 ರಲ್ಲಿ ಇವರ ಕುಟುಂಬದಲ್ಲಿ ಹುಟ್ಟಿದ್ದ ಸಂಘಟನೆಯ ತೇರನ್ನು ಬಲಗೊಳಿಸಿ, ಸಂಘಟಿಸಿ ಯಶಸ್ಸಿನತ್ತ ಕೊಂಡೋಯ್ಯುವ ಕನಸ್ಸು ಕಂಡ ಇವರು ಡಿಸೆಂಬರ್ 12.2022 ರಂದು ನಡೆದ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದರು. ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯಮಟ್ಟದಲ್ಲಿ ನಡೆದ ಚುನಾವಣೆಯಲ್ಲಿ ಪೈಪೋಟಿಯಲ್ಲಿ ಪ್ರಚಂಡ ಮತಗಳಿಂದ ಗೆಲುವು ಸಾಧಿಸುವ ಮೂಲಕ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ, ಕರ್ನಾಟಕದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳ ಸಂಘಟನೆಗಳ ರಚನೆ ಮಾಡುತ್ತಿದ್ದು, ಸಂಘವನ್ನು ಬಲಪಡಿಸಿ ಯಶಸ್ಸಿನತ್ತ ಸಾಗುತ್ತಿರುವುದು ಹೆಮ್ಮೆಯ ಹಾಗೂ ಸಾಹಸದ ಕೆಲಸವೇ ಸರಿ. ಪ್ರತಿಯೊಬ್ಬರನ್ನೂ ಒಗ್ಗೂಡಿಸಿ ಹಗಲು ಇರುಳೆನ್ನದೇ ಸಂಘಟನೆ ಕಾರ್ಯ ನಿರ್ವಹಿಸುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ.
ಇವರ ಸಮಾಜ ಸೇವೆ, ಸಂಘಟನೆ ಹಾಗೂ ಹೋರಾಟಗಳು ಹೀಗೆ ಮುಂದುವರಿಯಲಿ, ಸಮಾಜದ ಏಳಿಗೆಗಾಗಿ ಇವರು ಕಂಡ ಕನಸ್ಸು ನನಸಾಗಲಿ, ಇವರಿಗೂ ಇವರ ಕುಟುಂಬಕ್ಕೂ ಬುದ್ಧ ಬಸವ ಅಂಬೇಡ್ಕರ ಆಶೀರ್ವದಿಸಲಿ ಎಂದು ನನ್ನ ನುಡಿ ನಮನದ ಮೂಲಕ ಆಶಿಸುವೆನು
ನಂದಿನಿ ಸನಬಾಳ್
ಶಿಕ್ಷಕಿಯರು
ಕಲಬುರಗಿ