ದೇವಗರ : ಸಂಘಟನೆಯಲ್ಲಿ ಭಾಗಿದಾರ ರಾಗಬೇಕೇ ವಿನಹ ಪಾಲುದಾರರಾಗಬಾರದೆಂದು ಅಖಿಲ ಭಾರತ ಶಿಕ್ಷಕರ ಪಡೆರೇಷನ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಕರೆ ನೀಡಿದರು. ಅವರು ಅಖಿಲ ಭಾರತ ಶಿಕ್ಷರರ ಪಡೆ ರೇಷನ ವತಿಯಿಂದ ಜಾರ್ಖಂಡ್ ರಾಜ್ಯ ದ ದೇವಗರ ದಲ್ಲಿ ಏರ್ಪಡಿಸಿದ ರಾಷ್ಟ್ರೀಯ ಮಹಿಳಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತ ನಾಡಿದರು. ಶಿಕ್ಷಕರ ಸಂಘಟನೆಗಳನ್ನು ಹುಟ್ಟು ಹಾಕಿದ್ದು ಬೇಡಿಕೆಗಳನ್ನು ಈಡೇರಿಸಿ ಕೊಳ್ಳಲು ಅಧಿಕಾರ ಪಡೆಯಲು ಅಲ್ಲಾ, ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವದರ ಮುಖಾಂತರ ಸಂಘಟನೆಗಳನ್ನು ಗಟ್ಟಿಗೊಳಿಸಿ ಇದ್ದ ಸಂಘಟನೆಯಲ್ಲಿಯೇ ಅವಕಾಶ ಪಡೆಯಬೇಕು ಈ ದಿಸೆಯಲ್ಲಿ AIPTF ಮಹಿಳಾ ವಿಭಾಗ ವನ್ನು ಸಂಘಟನೆಯ ಆರಂಭದಲ್ಲಿಯೇ ಹುಟ್ಟು ಹಾಕಿದೆ ಎಂದರು ಪುರುಷ ಮತ್ತು ಮಹಿಳೆ ಎಂಬ ಬೇದಬಾವವಿಲ್ಲದೆ ಎಲ್ಲರಿಗೂ ಅವಕಾಶ ಕಲ್ಪಿಸಿದೆ ಇನ್ನು ಮುಂದೆಯೂ ಸಹ ಶಿಕ್ಷಕಿಯರಿಗೆ ಹೆಚ್ಚಿನ ಅವಕಾಸಗಳನ್ನು ಸಂಘದ ನಿಯಮದಲ್ಲಿ ಬೈಲಾದಲ್ಲಿ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು ಏಕ್ರಿಕೃತ ಸಂಘಟನೆಗಳಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ AIPTF ರಾಷ್ಟ್ರ ಮಟ್ಟದಲ್ಲಿ ಬಲಾಡ್ಯವಾಗಿದೆ. ಹಳೆ ಪಿಂಚಣಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಕಾರ್ಯಕ್ರಮ ರೂಪಿಸಲಾಗುತ್ತದೆ. ಎಂದರು ಸಮಾರಂಭದಲ್ಲಿ ಎಸಿಯಾ ಪೆಸಿಪಿಕ್ ರಿಜಿನಲ್ ಡೈರಕ್ಟರ್ ಆನಂದ ಸಿಂಗ ಜೀ ಶ್ರೀಮತಿ ಶಶಿ ಬಾಲಸಿಂಗ್ ಜೀ AIPTF ಮಹಾ ಪ್ರಧಾನ ಕಾರ್ಯದರ್ಶಿ ಕಮಲ ಕಾಂತ ತ್ರಿಪಾಠಿ ಹರಿಗೋವಿಂದನ KSPS TA ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಶ್ರೀಮತಿ ಸೀಮಾ ಮಾತುರ ಗೀತಾ ಪಾಂಡೇ ಶ್ರೀಮತಿ ಪ್ರಭಾಕಿರಣ ಸೋನಿಯಾ ವಂದನಾ ಬಾರತಿ ಮೀನಾ ವರ್ಮಾ ಇತರರು ಭಾಗವಹಿಸಿದ್ದರು. ದೇವಗರದಲ್ಲಿ ಎರಡು ದಿವಸದ ಮಹಿಳಾ ಸಮ್ಮೇಳನ ಬಹಳ ಅದ್ದೂರಿಯಾಗಿ ಜರುಗಿತು ದೇಶದ್ಯಾಂತ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು
