ಬಸವರಾಜ ಬೊಮ್ಮಾಯಿ ನೇತ್ರತ್ವದ ಬಿಜೆಪಿ ಸರ್ಕಾರ ತನ್ನ ಅವಧಿ ಮುಗಿಯುವ ಮುನ್ನ ವೇತನ ಆಯೋಗ್ ವರದಿಯನ್ನು ಸರ್ಕಾರಕ್ಕೆ ನೀಡಲು ಆರು ತಿಂಗಳು ಮೂಂದುಡಿತ್ತು..ಪ್ರಸ್ತುತ ಸಿಎಮ್ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ವೇತನ ಆಯೋಗದ ತನ್ನ ವರದಿ ನೀಡಲು ಆರು ತಿಂಗಳು ವಿಸ್ತರಿಸುತ್ತದೆ ಎಂದು ಹೇಳಲಾಗುತ್ತಿದೆ. ಆದ್ರೆ ಸರಕಾರ ವೇತನ ಆಯೋಗದ ವರದಿ ನೀಡಲು ಸಮಯವಕಾಶವನ್ನು ನೀಡಲು ಯಾವುದೇ ಅಧಿಕೃತವಾಗಿ ಆದೇಶ ಮಾಡಿಲ್ಲ…
ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ವಿಚಾರದಲ್ಲಿ ರಚನೆ ಮಾಡಿರುವ 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ 6 ತಿಂಗಳು ಕಾಲ ವಿಸ್ತರಣೆ ಮಾಡ್ತಾರೆ ಎಂಬ ಸಂದೇಶ ಹರಿದಾಡುತ್ತಿದೆ.ಈ ಒಂದು ವಿಚಾರ ಗಮನಕ್ಕೆ ಬರುತ್ತಿದ್ದಂತೆ ಇತ್ತ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ತುರ್ತಾಗಿ ಭೇಟಿಯಾಗಿ ಕೆಲವೊಂದಿಷ್ಟು ವಿಚಾರ ಗಳ ಕುರಿತಂತೆ ಚರ್ಚೆಯನ್ನು ಮಾಡಿದರು.
ಹೌದು. 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ 6 ತಿಂಗಳು ವಿಸ್ತರಣೆಯನ್ನು ಮಾಡದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರ ನೇತ್ರತ್ವದಲ್ಲಿನ ಟೀಮ್ ಈ ಒಂದು ಒತ್ತಾಯವನ್ನು ಮಾಡಿತು.ತುರ್ತಾಗಿ ರಾಜ್ಯಾಧ್ಯಕ್ಷರ ನೇತ್ರತ್ವದಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ಟೀಮ್ ಭೇಟಿಯಾಗಿ ಮಹತ್ವದ ಮಾತುಕತೆಯನ್ನು ಮಾಡಿದರು.
ಆಯೋಗದ ಅಧ್ಯಕ್ಷರಾದ ಸುಧಾಕರ್ ರಾವ್ ಭೇಟಿ
7ನೇ ವೇತನ ಆಯೋಗದ ಅವಧಿ ವಿಸ್ತರಣೆಗೆ ಅವಕಾಶ ಕೊಡದೆ ನವೆಂಬರ್ 2023ರ ಎರಡನೇ ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಿ ಎಸ್ ಷಡಾಕ್ಷರಿ ಅವರು ದಿನಾಂಕ 4-11-2023 ರಂದು ಆಯೋಗದ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸದಸ್ಯರಲ್ಲಿ ಮನವಿ ಮಾಡಿದರು. ಹಾಗೂ ಸರ್ಕಾರಿ ನೌಕರಿಗೆ ಆರ್ಥಿಕ ಅನುಕೂಲವಾಗುವ ಕೆಲವೊಂದು ಯೋಜನೆಗಳನ್ನು ಸೇರಿಸಲು ಪ್ರಸ್ತಾವನೆ ಸಲ್ಲಿಸಿದರು*