ಧಾರವಾಡ:
ಉಪನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಇವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುದ್ದೇಬಿಹಾಳ ವ್ಯಾಪ್ತಿಯಲ್ಲಿನ ಶಿಕ್ಷಕರ ನಿಯಮಬಾಹಿರ ಅಮಾನತ್ತ ಹಾಗೂ ಕೆಲಸಕ್ಕೆ ಗೈರು ಉಳಿದ ಶಿಕ್ಷಕರಿಗೆ ವೇತನ ಪಾವತಿ ಮತ್ತು ನಿವೃತ್ತಿ ಹೊಂದಿದ ಶಿಕ್ಷಕರಿಗೂ ಸಹ ವೇತನ ಪಾವತಿ ಆದ ಬಗ್ಗೆ ಮಾದ್ಯಮದಲ್ಲಿ ಪ್ರಕಟವಾದ ವರದಿ ಆಧರಿಸಿ ಸದರಿ ಕಚೇರಿಯ ತಪಾಸಣೆ ನಡೆಸಿ ಶ್ರೀ ಆನಂದಗೌಡರ ಸ.ಶಿ ಸ.ಹಿ.ಪ್ರಾ.ಶಾಲೆ, ಅಡವಿ ಹುಲಗಬಾಳ ಇವರ ಅಮಾನತ್ತ ಪ್ರಕರಣ, ಶ್ರೀಮತಿ: ಜಹೀದಾಬೇಗಂ ಡಿ ಅಗ್ನಿ ಮು.ಶಿ ಸ.ಹಿ.ಪ್ರಾ.ಉರ್ದು ಶಾಲೆ ಕೊಣ್ಣೂರು, ಇವರ ಅಮಾನತ್ತ ಪ್ರಕರಣ, ಶ್ರೀ: ಟಿ.ಎಸ್. ಸಾತಿಹಾಳ, ನಿವೃತ್ತ ಮುಶಿ ಸ.ಹಿ.ಪ್ರಾ.ಶಾಲೆ ಬಿಟ್ಟೂರು ಇವರು ದಿನಾಂಕ: 31-7-2020 ರಂದು ವಯೋನಿವೃತ್ತಿ ಹೊಂದಿದ್ದರೂ ಸಹಿತ ಅಗತ್ಯ ಸಪ್ಟೆಂಬರ, ಅಕ್ಟೋಬರ-2020 03 ತಿಂಗಳ ವೇತನ ಪಾವತಿಸಿರುವುದು ಈ ಪ್ರಕರಣಗಳಲ್ಲಿ ಸಂಬಂಧಿಸಿದ ಸಿಬ್ಬಂದಿಯಿಂದ ಕರ್ತವ್ಯಲೋಪ ಆಗಿರುವ ಬಗ್ಗೆ ಉಲ್ಲೇಖ [1] ರ ಪ್ರಕಾರ ವರದಿ ಸಲ್ಲಿಸಿದ್ದಾರೆ.
ಉಲ್ಲೇಖ (2) ರಂತ ಈ ಕಚೇರಿಗೆ ಸ್ವೀಕೃತಗೊಂಡ ದೂರಿನ ಪ್ರಕಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುದ್ದೇಬಿಹಾಳ ಇಲ್ಲಿನ ಕಚೇರಿ ಸಿಬ್ಬಂದಿಗಳು ಶ್ರೀ ಕೆ.ಎಂ.ಕುಂಬಾರ ಸ.ಶಿ ಸ.ಕಿ.ಪ್ರಾ.ಶಾಲೆ ಕ್ಯಾತನದೋಣಿ, ಶ್ರೀ: ಆಯ್.ಹೆಚ್, ಕುಂಬಾರ ಸ.ಶಿ
(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರನ್ವಯ ಸೇವೆಯಿಂದ ಅಮಾನತ್ತುಗೊಳಿಸುವುದು ಸೂಕ್ತವೆಂದು ಭಾವಿಸಿ ಈ ಕೆಳಗಿನಂತೆ ಆದೇಶಿಸಿದೆ.
: ಆದೇಶ :
ಆದೇಶ ಸಂಖ್ಯೆ:ಸಿ:ಸಿಆ;ಶಿಸ್ತು ಕ್ರಮ:66:2021-22
B: 30-10-2023
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ ಇಡಿ 250 .ಡಿಪಿಐ 2006 ದಿನಾಂಕ :22-02-2008 ರಂತೆ ನನಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಮುದ್ದೇಬಿಹಾಳ ಜೆ : ವಿಜಯಪರ ಇಲ್ಲಿನ ಈ ಕೆಳಕಂಡ ಸಿಬ್ಬಂದಿಗಳಾದ
1) ಶ್ರೀ: ಎ.ಎಸ್. ಹಾಲ್ಯಾಳ ಪತ್ರಾಂಕಿತ ವ್ಯವಸ್ಥಾಪಕರು (ಪ್ರಸ್ತುತ ಕ್ಷೇಶಿ. ಕಚೇರಿ ಶಹರ ವಲಯ ವಿಜಯಪುರ)
2) ಶ್ರೀಮತಿ ಎನ್.ಬಿ.ರೂಡಗಿ ಅಧೀಕ್ಷಕರು
3) ಶ್ರೀ: ಎಸ್.ಎಸ್. ಕಲಬುರ್ಗಿ ಪ್ರದಸ (ಪ್ರಸ್ತುತ ಅಧಿಕ್ಷಕರು ಕ್ಷೇಶಿ. ಕಚೇರಿ ಯಲ್ಲಾಪೂರ ಜಿ: ಶಿರಸಿ)
4) : ಎಸ್.ಸಿ. ಮುರಗಾನವರ ಪ್ರದಸ (ಪ್ರಸ್ತುತ ಕ್ಷೇಶಿ, ಕಚೇರಿ ಬಸವನ ಬಾಗೇವಾಡಿ)
5) ಶ್ರೀ. ಎಸ್.ಸಿ. ಹಿರೇಮಠ ದ್ವಿದಸ
6) ಶ್ರೀ. ಸಿದ್ದನಗೌಡ ಪಾಟೀಲ ಪ್ರದಸ
ಇವರುಗಳನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 10(1)(ಡಿ) ರನ್ವಯ ಅವರ ಮೇಲಿರುವ ಆಪಾದನೆಗಳ ಬಗ್ಗೆ ನಿಯಮಗಳ ರೀತ್ಯ ಶಿಸ್ತಿನ ಕ್ರಮಕ್ಕಾಗಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.
ಸದರಿ ನೌಕರರು ಅಮಾನತ್ ಅವಧಿಯಲ್ಲಿ ಕೆ.ಸಿ.ಎಸ್ ನಿಯಮ 98(1)(ಎ) ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ.