ಹುಬ್ಬಳ್ಳಿ:
ಹುಬ್ಬಳ್ಳಿ ನಗರದ ಸದ್ಗುರು ಶ್ರೀ ಸಿದ್ದಾರೂಢಮಠದ ,ನಿರಂಜನ ಸಭಾ ಭವನದಲ್ಲಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ(ರಿ)ಹುಬ್ಬಳ್ಳಿ ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕದ ಸಹಯೋಗದಲ್ಲಿ ರಾಜ್ಯ ಮಟ್ಟದ 11 ನೇ ಕಾರ್ಯಕಾರಿಣಿ ಸಭೆ ಇಂದು ಜರುಗಿತು..
ಸಭೆಯಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಶಿಕ್ಷಣ ಸಚಿವರಿಗೆ, ಉಪ ಮುಖ್ಯಮಂತ್ರಿ ಅವರಿಗೆ ನಲವತ್ತು ಬೇಡಿಕೆಗಳ ಹಕ್ಕೊತ್ತಾಯದ ಗೊತ್ತುವಳಿಗಳನ್ನು ಅಂಗೀಕರಿಸಲಾಯಿತು..
ಈ ಬೇಡಿಕೆಗಳನ್ನು ಈಡೇರಿಸಬೆಕೆಂದು ಘನ ಸರಕಾರಕ್ಕೆ ಒತ್ತಾಯಿಸುವುದರಲ್ಲಿ ಮೊಟ್ಟ ಮೋದಲೆನೆಯದಾಗಿ.
ಗ್ರಾಮೀಣ ಭತ್ಯೆ : ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವಂತೆ ಈ ರಾಜ್ಯದ ಸಮಸ್ತ ಗ್ರಾಮೀಣ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ 5,000/- ಅಥವಾ ಮೂಲ ವೇತನದ ಶೇ. 10% ರಷ್ಟು ಗ್ರಾಮೀಣ ಭತ್ಯೆಯನ್ನು ನೀಡಲು ಈ ಮೂಲಕ ವಿನಮ್ರವಾಗಿ ವಿನಂತಿಸಿಕೊಳ್ಳಲಾಯಿತು..
7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ತರಿಸಿಕೊಂಡು ಯತಾವತ್ತಾಗಿ ವರದಿ ಜಾರಿ ಮಾಡಲು ವಿನಂತಿಸುತ್ತೇವೆ. ಈಗಾಗಲೇ ಸಮೀತಿ ರಚನೆಯಾಗಿ ಒಂದು ವರ್ಷವಾಯಿತು, ಮತ್ತು ಎರಡನೇ ಆರು ತಿಂಗಳು ದಾಟಿದಲ್ಲಿ 2ನೇ ಬಾರಿಗೆ IR ಶೇ. 30%ರಷ್ಟು ಮಧ್ಯಂತರ ಪರಿಹಾರ ನೀಡಬೇಕು.
ಪದವಿಧರರು 4 ರಿಂದ 8ಕ್ಕೆ ಬರಲಿ : ರಾಜ್ಯದ ಸೇವಾ ನಿರತ ಪದವಿಧರ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ6 ರಿಂದ 8ಕ್ಕೆ ವಿಲೀನಗೊಳಿಸಬೇಕು. ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡುವುದರೊಂದಿಗೆ, ಎಲ್ಲಾ ಸೇವಾ ನಿರತ ಪದವೀಧರ ಶಿಕ್ಷಕರನ್ನು 6 ರಿಂದ 8 ಕ್ಕೆ ನಿಯುಕ್ತಿಗೊಳಿಸಬೇಕು.
NPS ಹೋಗಲಿ OPS ಬರಲಿ :ನೌಕರರಿಗೆ ಮರಣ ಶಾಸನವಾಗಿರುವ ಹೊಸ ಪಿಂಚಣಿ ಯೋಜನೆ ರದ್ದು ಪಡಿಸಿ 5 ಪಿಂಚಣಿ ಯೋಜನೆ ತಜ್ಞರ ಸಭೆ ಕರೆದು ಮರು ಸ್ಥಾಪಿಸಬೇಕು.
ವರ್ಗಾವಣೆ ಕುರಿತು: ಪಸ್ತುತ ವರ್ಗಾವಣೆಯನ್ನು ಮುಂಬರುವ ಚುನಾವಣೆ ಗೆ ಮುನ್ನ ಪ್ರಕ್ರಿಯೆ ಪ್ರಾರಂಭಿಸಬೇಕು. ಈಗಾಗಲೆ ವರ್ಗಾವಣೆ ಅಧಿನಿಯಮದ ಪ್ರಕಾರ ಹೆಚ್ಚುವರಿ ಮರು ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗ ಸದ್ಯ ಅಧಿನಿಯಮದ ಪ್ರಕಾರ ವಲಯ ವರ್ಗಾವಣೆಯನ್ನು ಪ್ರಾರಂಭಿಸಬೇಕು.
ಪಿ.ಎಸ್.ಟಿ., ಜಿಪಿಟಿ, ಎನ್.ಪಿ.ಎಸ್., ಪದವೀಧರ, ಉರ್ದು, ಹಿಂದಿ, ದೈ.ಶಿ.ಶಿ, ಮಹಿಳಾ, ಸಾಹಿತಿ ಹಾಗೂ ಕಲಾವಿದ ಶಿಕ್ಷಕರ ವೇದಿಕೆಗಳನ್ನು ರಚಿಸಿ ರಾಜ್ಯ ಜಿಲ್ಲಾ ಸಂಚಾಲಕರನ್ನು ನೇಮಿಸುವುದು.
ಪಿಎಸ್ ಟಿ ಶಿಕ್ಷಕರ ಸಂಚಾಲಕರನ್ನಾಗಿ ಮಂಜುನಾಥ ಅವರನ್ನು ನೇಮಿಸಲಾಯಿತು..
ಈ ದಿಸೆಯಲ್ಲಿ ಈ ಕೂಡಲೇ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷರಾದ ಸಿ.ಎಸ್.ಷಡಕ್ಷರಿಯವರ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಸರ್ಕಾರದ ಗಮನ ಸೆಳೆಯಬೇಕು.. ತುರ್ತಾಗಿ ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿಯಾಗಬೇಕು..ಆಗ್ರಹಿಸುವುದರ ಮೂಲಕ ಶಿಕ್ಷಕರ, ವಿದ್ಯಾರ್ಥಿಗಳ ಬೇಡಿಕೆಗಳ ಕುರಿತು ನಲವತ್ತು ವಿಷಯಗಳ ಗೊತ್ತುವಳಿಗಳನ್ನು ಇಂದಿನ ಸಭೆಯಲ್ಲಿ ಅಂಗೀಕರಿಸಲಾಯಿತು…ಈ ಒಂದು ಸಭೆಯಲ್ಲಿ
ಮೈಸೂರು ವಿಭಾಗದ,ಕಲ್ಬುರ್ಗಿ, ಬೆಳಗಾವಿ ಜಿಲ್ಲೆ ಸೇರಿದಂತೆ ಶೈಕ್ಷಣಿಕ 31 ಜಿಲ್ಲೆಯ ರಾಜ್ಯ ಪದಾದಿಕಾರಿಗಳು. ಜಿಲ್ಲಾ ಅದ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು , ಎಲ್ಲ ಪದಾಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡಿದರು..
ಈ ಕಾರ್ಯಕ್ರಮ ಉದ್ಘಾಟನೆಯನ್ನು ಸಂಘದ ಸಂಸ್ಥಾಪಕ ಉಪಾದ್ಯಕ್ಷರು ಹಾಗೂ ಸಂಘದ ಮಹಾಪೋಷಕರಾದ ಎಂ.ಐ.ಮುನವಳ್ಳಿಯವರು ಜ್ಯೂತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ರಾಜ್ಯಾದ್ಯಕ್ಷರಾದ ಅಶೋಕ ಎಮ್ ಸಜ್ಜನ ವಹಿಸಿದ್ದರು..
ವೇದಿಕೆಯಲ್ಲಿ ಮುಖ್ಯ ಅತಿಥಿಗಳಿಗಾಗಿ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿಗಳಾದ, ಶ್ರೀ ಶರಣಪ್ಪಗೌಡ ಆರ್.ಕೆ.
ಕೋಶಾದ್ಯಕ್ಷರಾದ ಬಿ.ವಿ.ಅಂಗಡಿ, ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳು, ಶ್ರೀ ಮಲ್ಲಿಕಾರ್ಜುನ ಉಪ್ಪಿನ,ರಾಜ್ಯ ಸಲಹಾ ಸಮಿತಿ ಅದ್ಯಕ್ಷರಾದ ಶ್ರೀಗೋವಿಂದ ಜುಜಾರೆ,
ರಾಜ್ಯ ಶಿಸ್ತು ಸಮಿತಿ ಅದ್ಯಕ್ಷರಾದ ಹನುಮಂತಪ್ಪ ಮೇಟಿ,
ಹೋರಾಟ ಸಮೀತಿ ಅಧ್ಯಕ್ಷರಾದ ಶ್ರೀ ಸಿದ್ದಣ್ಣ ಉಕ್ಕಲಿ,
ರಾಜ್ಯ ಪ್ರಚಾರ ಸಮಿತಿ ಅದ್ಯಕ್ಷರಾದ ಡಾ.ಆರ್.ನಾರಾಯಣಸ್ವಾಮಿ (ಚಿಂತಾಮಣಿ)
ಹಾಗೂ ಧಾರವಾಡ ಜಿಲ್ಲೆಯ ಅದ್ಯಕ್ಷರಾದ ಶ್ರೀ ಅಕ್ಬರಲಿ ಸೊಲ್ಲಾಪುರ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮರಿಗೌಡ ಭೂಮನಗೌಡ್ರ,
ಜೊತೆಗೆ ರಾಜ್ಯ ಉಪಾದ್ಯಕ್ಷರಾದ ಧರ್ಮಣ್ಣ ಭಜಂತ್ರಿ, ರಾಮಪ್ಪ ಹಂಡಿ, ಅಶೋಕ ಬಿಸಿರೊಟ್ಟಿ, ಮಲ್ಲಿಕಾರ್ಜುನ ಎಮ್ ಆರ್, ಶ್ರೀಧರ ಗಣಾಚಾರಿ,
ಮಾಲತೇಶ ಬಡಿಗೇರ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು..
ಕೆಲವೆ ದಿನಗಳಲ್ಲಿ ನಲವತ್ತು ಬೇಡಿಕೆಗಳ ಗೋತ್ತುವಳಿಗಳನ್ನು ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ, ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು..