ಈ ಕೂಡಲೇ 7ನೇ ವೇತನ ಆಯೋಗದ ವರದಿ ತರಿಸಿಕೊಳ್ಳಬೇಕು..ಎಥಾವತ್ ಜಾರಿಯಾಗಬೇಕು…ಇಲ್ಲದಿದ್ದಲ್ಲಿ ಮತ್ತೆ ಶೇ.30. IR ನೀಡಬೇಕು…
ಈ ಕೂಡಲೇ ವಲಯ ವರ್ಗಾವಣೆ ಆರಂಭಿಸಬೇಕು….
80000- PST ಪದವೀಧರ ಶಿಕ್ಷಕರಿಗೆ ವೃತ್ತಿ ಗೌರವದ ಆಧ್ಯತೆ ನೀಡಬೇಕು..
ವಿಳಂಬವಿಲ್ಲದೆ OPS ಜಾರಿಗೊಳಿಸಬೇಕು…
ಹೀಗಂತ ಸರ್ಕಾರಕ್ಕೆ ಹಕ್ಕೊತ್ತಾಯದಿಂದ ಆಗ್ರಹ…
ವಿಡಿಯೋ ಇದೆ ನೋಡಿ…
ಪಿ.ಎಸ್.ಟಿ.
ಬೆಂಗಳೂರು:
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಮುಖ ಬೇಡಿಕೆಗಳು..ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಲ್ಲಿ ಈ ಕೂಡಲೇ ಈ ಕೆಳಗಿನ ಬೇಡಿಕೆಗಳಿಗೆ ಸ್ಪಂದಿಸಬೇಕಿದೆ..
????7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ತರಿಸಿಕೊಂಡು ಯಭಾವತ್ತಾಗಿ ವರದಿ ಜಾರಿ ಮಾಡಲು ವಿನಂತಿಸುತ್ತೇವೆ. ಈಗಾಗಲೇ ಸಮೀತಿ ರಚನೆಯಾಗಿ ಒಂದು ವರ್ಷವಾಯಿತು, ಮತ್ತು ಎರಡನೇ ಆರು ತಿಂಗಳು ದಾಟಿದಲ್ಲಿ 2ನೇ ಬಾರಿಗೆ ಶೇ. 30%ರಷ್ಟು ಮಧ್ಯಂತರ ಪರಿಹಾರ ನೀಡಬೇಕು.
???? ಗ್ರಾಮೀಣ ಭತ್ಯೆ : ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವಂತೆ ಈ ರಾಜ್ಯದ ಸಮಸ್ತ ಗ್ರಾಮೀಣ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರೂ 5,000/- ಅಥವಾ ಮೂಲ ವೇತನದ ಶೇ. 10% ರಷ್ಟು ಗ್ರಾಮೀಣ ಭತ್ಯೆಯನ್ನು ನೀಡಲು ಈ ಮೂಲಕ ವಿನಮ್ರವಾಗಿ ವಿನಂತಿಸಿಕೊಳ್ಳುತ್ತವೆ.
????ಪದವಿಧರರು 4 ರಿಂದ 8ಕ್ಕೆ ಬರಲಿ : ರಾಜ್ಯದ ಸೇವಾ ನಿರತ ಪದವಿಧರ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ6 ರಿಂದ 8ಕ್ಕೆ ವಿಲೀನಗೊಳಿಸಬೇಕು. ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡುವುದರೊಂದಿಗೆ, ಎಲ್ಲಾ ಸೇವಾ ನಿರತ ಪದವೀಧರ ಶಿಕ್ಷಕರನ್ನು 6 ರಿಂದ 8 ಕ್ಕೆ ನಿಯುಕ್ತಿಗೊಳಿಸಬೇಕು.
????NPS ಹೋಗಲಿ OPS ಬದಲಿ : ಹೊಸ ಪಿಂಚಣಿ ಯೋಜನೆ ರದ್ದು ಪಡಿಸಿ 5 ಪಿಂಚಣಿ ಯೋಜನೆ ತಜ್ಞರ ಸಭೆ ಕರೆದು ಮರು ಸ್ಥಾಪಿಸಬೇಕು.
????ವರ್ಗಾವಣೆ ಕುರಿತು: ಪಸ್ತುತ ವರ್ಗಾವಣೆಯನ್ನು ಮುಂಬರುವ ಚುನಾವಣೆ ಗೆ ಮುನ್ನ ಪ್ರಕ್ರಿಯೆ ಪ್ರಾರಂಭಿಸಬೇಕು. ಈಗಾಗಲೆ ವರ್ಗಾವಣೆ ಅಧಿನಿಯಮದ ಪ್ರಕಾರ ಹೆಚ್ಚುವರಿ ಮರು ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗ ಸದ್ಯ ಅಧಿನಿಯಮದ ಪ್ರಕಾರ ವಲಯ ವರ್ಗಾವಣೆಯನ್ನು ಪ್ರಾರಂಭಿಸಬೇಕು.
ಇವುಗಳ ಜೊತೆಗೆ ಇವತ್ತು ನಡೆದ ರಾಜ್ಯ ಮಟ್ಟದ ಹನ್ನೊಂದನೆ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ಬಲವರ್ದನೆಗಾಗಿ 27 ನಿರ್ಣಯಗಳನ್ನು ಚರ್ಚಿಸಿ ಸಭೆಯ ಅನುಮೋದನೆ ಪಡೆಯಲಾಯಿತು..ಅವುಗಳನಲ್ಲಿನ ಕೆಲ ಅಂಶಗಳು ಈ ಕೆಳಗಿನಂತಿವೆ.
ಸಂಘ ವಿರೋಧಿ ಚಟುವಟಿಕೆ ನಡೆಸಿದವರಿಗೆ ಶಿಸ್ತು ಕ್ರಮ ಜರುಗಿಸುವ ಪರಮಾಧಿಕಾರ ಶಿಸ್ತು ಸಮಿತಿ ಅಧ್ಯಕ್ಷರಿಗೆ ಹಾಗೂ ರಾಜಾಧ್ಯಕ್ಷರು – ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಿಗೆ ಈಗಿರುವಂತೆ ಮುಂದುವರೆಸುವುದು,
ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ನಿಂದ ಹೊರಬಂದ ಬಗ್ಗೆ ಪುನರ್ ಮನನ ಮಾಡುವುದು. ಈ ಹಿನ್ನೆಲೆಯಲ್ಲಿ ಯಾರೂ ಅದರಲ್ಲಿ ಪದಾಧಿಕಾರಿಗಳಾಗಿ ಮುಂದುವರೆಯುವಂತಿಲ್ಲ.
ಹನ್ನೊಂದು ಜನರ ಉನ್ನತ ಸಮಿತಿ ರಚಿಸುವುದು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಬೆಂಗಳೂರು, ಈ ಸಂಘಕ್ಕೆ ಪ್ರತಿ ವರ್ಷ ನೀಡುತ್ತಿರುವ ರೂ, ಎರಡುನೂರು ಕುರಿತು ಅಸಮ್ಮತಿ ಸೂಚಿಸಲಾಯಿತು.
ಮಹಾಪ್ರಧಾನ ಕಾರ್ಯದರ್ಶಿ ಮಾರ್ಪಾಡು ಮಾಡದಂತೆ ಮಲ್ಲಿಕಾರ್ಜುನ ಉಪ್ಪಿನ ಅವರನ್ನೆ ಮುಂದು ವರೆಸುವ ನಿರ್ಣಯವನ್ನು ಸಭೆಯಲ್ಲಿ ಕೈ ಎತ್ತುವ ಮೂಲಕ ಎಲ್ಲರೂ ಒಪ್ಪಿಗೆ ಸೂಚಿಸಿದರು..
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ದೊಂದಿಗೆ ಸಂಯೋಜನೆ ಪಡೆಯುವುದು,
.ಪಿ.ಎಸ್.ಟಿ., ಜಿಪಿಟಿ, ಎನ್.ಪಿ.ಎಸ್., ಪದವೀಧರ, ಉರ್ದು, ಹಿಂದಿ, ದೈ.ಶಿ.ಶಿ, ಮಹಿಳಾ, ಸಾಹಿತಿ ಹಾಗೂ ಕಲಾವಿದ ಶಿಕ್ಷಕರ ವೇದಿಕೆಗಳನ್ನು ರಚಿಸಿ ರಾಜ್ಯ ಜಿಲ್ಲಾ ಸಂಚಾಲಕರನ್ನು ನೇಮಿಸುವುದು.
ಪಿಎಸ್ ಟಿ ಶಿಕ್ಷಕರ ಸಂಚಾಲಕರನ್ನಾಗಿ ಮಂಜುನಾಥ ಅವರನ್ನು ನೇಮಿಸಲಾಯಿತು..
ರಾಜ್ಯದ 31 ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹುಬ್ಬಳ್ಳಿಯ ಸಿದ್ದಾರೂಢಮಠದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು..