ಬೆಂಗಳೂರು: 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ವಿಸ್ತರಿಸಲು ಆರ್ಥಿಕ ಇಲಾಖೆಯು ಮುಖ್ಯಮಂತ್ರಿಗೆ ಪ್ರಸ್ತಾವ ಸಲ್ಲಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ..
ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಮಾಡುವ ಸವಾಲು ಸರ್ಕಾರದ ಮುಂದಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ತಕ್ಷಣಕ್ಕೆ ನೌಕರರ ವೇತನ ಪರಿಷ್ಕರಣೆ ಮಾಡಿದರೆ ಆರ್ಥಿಕ ಹೊರೆಯಾಗಲಿದೆ.
ಮಧ್ಯಮಾವಧಿ ವಿತ್ತೀಯ ಯೋಜನೆ ಪ್ರಕಾರ ವೇತನ ಪರಿಷ್ಕರಣೆಗೆ ವಾರ್ಷಿಕ 112 ಸಾವಿರ ಕೋಟಿಯಿಂದ 718 ಸಾವಿರ ಕೋಟಿ ಅಗತ್ಯವಿದೆ.
ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮೂಲ ವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರವನ್ನು ಈಗಾಗಲೇ ನೀಡಿರುವುದರಿಂದ ನೌಕರರಿಗೂ ಹೆಚ್ಚಿನ ಸಮಸ್ಯೆಯಾಗದು. ಅಲ್ಲದೇ, ಬಜೆಟ್‌ನಲ್ಲಿ ನಿರೀಕ್ಷಿಸಿದ್ದ ಆದಾಯ ಸಂಗ್ರಹ ಕಾರ್ಯ ಪ್ರಗತಿಯಲ್ಲಿದ್ದು, ಗುರಿ ತಲುಪಲು ಇನ್ನಷ್ಟು ಸಮಯಬೇಕಿದೆ..
6ನೇ ವೇತನ ಪರಿಷ್ಕರಣೆಯನ್ನು ತ್ವರಿತವಾಗಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳು ಏಳನೇ ವೇತನ ಆಯೋಗದ ವರದಿ ಪಡೆದು, ಶೀಘ್ರ ಜಾರಿಗೊಳಿಸುವ ಭರವಸೆ ಇದೆ.
ಸಿ.ಎಸ್.ಷಡಾಕ್ಷರಿ, ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
5,12,720: ಕಾರ್ಯನಿರ್ವಹಿಸುತ್ತಿರುವ ನೌಕರರು
768 ಸಾವಿರ ಕೋಟಿ: 2023-24ನೇ ಸಾಲಿಗೆ ನಿಗದಿಯಾದ ವೇತನ
710 ಸಾವಿರ ಕೋಟಿ: ನೌಕರರಿಗೆ ಘೋಷಿಸಿದ ಮಧ್ಯಂತರ ಪರಿಹಾರ
78 ಸಾವಿರ ಕೋಟಿ: ಆಯೋಗ ಶಿಫಾರಸು ಜಾರಿಗೆ ಅಗತ್ಯ ಬೀಳುವ ಮೊತ್ತ..
ಏಳನೇ ವೇತನ ಆಯೋಗದ ವಿಸ್ತರಣೆ ಅವಧಿ ಇದೇ ತಿಂಗಳು19 ಕ್ಕೆ ಕೊನೆಗೊಳ್ಳಲಿದೆ..