ಇತ್ತೀಚೆಗೆ, ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸುವಂತೆ ನೌಕರರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಹಲವು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಹಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿವೆ. ಕಾಂಗ್ರೆಸ್ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಒಪಿಎಸ್ ಜಾರಿಯಾಗಿದೆ.
ಇನ್ನು ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ನೌಕರರು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಈ ಮಧ್ಯೆ, ಯುಪಿ ಹೈಕೋರ್ಟ್ನ ತೀರ್ಪು ಶಿಕ್ಷಕರು ಮತ್ತು ಉದ್ಯೋಗಿಗಳ ಪರವಾಗಿ ಬಂದಿದೆ.
ಯಾವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ಏಪ್ರಿಲ್ 1, 2005 ಕ್ಕಿಂತ ಮೊದಲು ಪ್ರಾರಂಭವಾಗಿ, ಪೋಸ್ಟಿಂಗ್ ನಂತರ ನಡೆಯಿತೋ ಅವರ ಪರವಾಗಿ ಕೋರ್ಟ್ ತೀರ್ಪು ನೀಡಿದೆ. ಇದರೊಂದಿಗೆ ಏಪ್ರಿಲ್ 1, 2005 ಕ್ಕಿಂತ ಮೊದಲು ಆಯ್ಕೆಯಾದ ಲೆಕ್ಕಪರಿಶೋಧಕರಿಗೂ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಯಾಗುವ ಭರವಸೆ ಮೂಡಿದೆ. ಯುಪಿ ಹೈಕೋರ್ಟ್ನ ಆದೇಶದ ಅಡಿಯಲ್ಲಿ, ಹಳೆಯ ಪಿಂಚಣಿ ಯೋಜನೆಗೆ ಹೋಗಲು ಅರ್ಹರಾಗಿರುವ ಉದ್ಯೋಗಿಗಳ ವಿವರಗಳನ್ನು ಅನೇಕ ಇಲಾಖೆಗಳು ಕೇಳಲು ಪ್ರಾರಂಭಿಸಿವೆ.
ವಿಷಯ ನ್ಯಾಯಾಲಯ ತಲುಪಿದ್ದು ಹೇಗೆ ? :
2005 ಕ್ಕಿಂತ ಮೊದಲು ಆಯ್ಕೆಯಾಗಿರುವ ನೌಕರರಿಗೆ ಹಳೆಯ ಪಿಂಚಣಿಯ ಪ್ರಯೋಜನವನ್ನು ಪಡೆಯಬೇಕು ಎಂದು ಲೆಕ್ಕ ಪರಿಶೋಧಕರ ಅಸೋಸಿಯೇಷನ್ ಮತ್ತು ಇತರರ ಪರವಾಗಿ ಅರ್ಜಿ ಸಲ್ಲಿಸಲಾಯಿತು. ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರವು ಏಪ್ರಿಲ್ 1, 2004 ರಿಂದ ಜಾರಿಗೆ ತಂದಿದೆ. ಆದರೆ ರಾಜ್ಯ ಸರ್ಕಾರ ಏಪ್ರಿಲ್ 1, 2005 ರಿಂದ ಜಾರಿಗೆ ತಂದಿತ್ತು.
ಕೇಂದ್ರದ ನೌಕರರ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಲೆಕ್ಕ ಪರಿಶೋಧಕರ ಸಂಘದ ಸದಸ್ಯರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 1999ರಲ್ಲಿ ಅಕೌಂಟೆಂಟ್ ಗಳ ನೇಮಕಾತಿಗೆ ಜಾಹೀರಾತು ಹೊರಡಿಸಲಾಗಿತ್ತಾದರೂ 2005ರ ಏಪ್ರಿಲ್ 1ರ ನಂತರ ನೇಮಕಾತಿ ನಡೆದಿದೆ. ಇದೀಗ ನ್ಯಾಯಾಲಯ ಅವರ ಪರವಾಗಿ ತೀರ್ಪು ನೀಡಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ V/S ಹಳೆ ಪಿಂಚಣಿ ಯೋಜನೆ :
ರಾಷ್ಟ್ರೀಯ ಪಿಂಚಣಿ ಯೋಜನೆ :
1. NPS ನಲ್ಲಿ, ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಗಳಿಂದ 10 ಪ್ರತಿಶತವನ್ನು ಕಡಿತಗೊಳಿಸಲಾಗುತ್ತದೆ.
2. ರಾಷ್ಟ್ರೀಯ ಪಿಂಚಣಿ ಯೋಜನೆಯು ಷೇರು ಮಾರುಕಟ್ಟೆ ಆಧಾರಿತವಾಗಿದೆ. ಆದ್ದರಿಂದ ಕಡಿಮೆ ಸುರಕ್ಷಿತವೆಂದು ಪರಿಗಣಿಸಲಾಗಿದೆ.
3. ಇದರ ಅಡಿಯಲ್ಲಿ, ನಿವೃತ್ತಿಯ ನಂತರ ಪಿಂಚಣಿ ಪಡೆಯಲು 40% NPS ನಿಧಿಯಲ್ಲಿ ಹೂಡಿಕೆ ಮಾಡಬೇಕು.
4. ಈ ಯೋಜನೆಯು ನಿವೃತ್ತಿಯ ನಂತರ ಸ್ಥಿರ ಪಿಂಚಣಿಯನ್ನು ಖಾತರಿಪಡಿಸುವುದಿಲ್ಲ.
5. ಹೊಸ ಪಿಂಚಣಿ ಯೋಜನೆಯಲ್ಲಿ, ಆರು ತಿಂಗಳಿಗೊಮ್ಮೆ ತುಟ್ಟಿಭತ್ಯೆ ಪಾವತಿಸುವುದಿಲ್ಲ.
ಹಳೆಯ ಪಿಂಚಣಿ ಯೋಜನೆ (OPS) :
1. ಇದರ ಅಡಿಯಲ್ಲಿ, ಕೊನೆಯದಾಗಿ ಪಡೆದ ಸಂಬಳದ 50 ಪ್ರತಿಶತವನ್ನು ನಿವೃತ್ತಿಯ ನಂತರ ಒಟ್ಟು ಮೊತ್ತದೊಂದಿಗೆ ಮಾಸಿಕ ಪಿಂಚಣಿಯಾಗಿ ಪಾವತಿಸಲಾಗುತ್ತದೆ.
2. 80 ವರ್ಷಗಳ ನಂತರ ಪಿಂಚಣಿ ಹೆಚ್ಚಿಸುವ ನಿಬಂಧನೆಯೂ ಇದೆ. ಜಿಪಿಎಫ್ಗೂ ಅವಕಾಶವಿದೆ.
3. ಇದರ ಅಡಿಯಲ್ಲಿ, 20 ಲಕ್ಷ ರೂಪಾಯಿಗಳವರೆಗೆ ಗ್ರಾಚ್ಯುಟಿ ನೀಡಲಾಗುತ್ತದೆ.
4. ಇದನ್ನು ರಾಜ್ಯದ ಖಜಾನೆಯಿಂದ ಪಾವತಿಸಲಾಗುತ್ತದೆ. ಉದ್ಯೋಗಿಯ ಸಂಬಳದಿಂದ ಹಣವನ್ನು ಕಡಿತಗೊಳಿಸುವುದಿಲ್ಲ.
5. ನಿವೃತ್ತ ನೌಕರನ ಹೆಂಡತಿಗೆ ಅವನ ಮರಣದ ನಂತರ ಪಿಂಚಣಿ ಮುಂದುವರೆಯುತ್ತದೆ. ಇದರ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಕೂಡ ನೀಡಲಾಗುತ್ತದೆ. ಹೀಗಾಗಿ ಪಿಂಚಣಿ ಮೊತ್ತ ಹೆಚ್ಚಾಗುತ್ತಲೇ ಹೋಗುತ್ತದೆ.