ಶಿಕ್ಷಕರ ಮುಂಬಡ್ತಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ತತಕ್ಷಣ ಪ್ರಾರಂಭಿಸುವಂತೆ ಶಾ.ಶಿ.ಇ.ಆಯುಕ್ತರಿಗೆ ಒತ್ತಾಯಿಸಿದ ಗ್ರಾಮೀಣ ಶಿಕ್ಷಕರ ಸಂಘ..
ನಿಯಮಿತವಾಗಿ ಭಡ್ತಿ ಪ್ರಕ್ರಿಯೆ ನಡೆಯದಿರುವುದು ಅತ್ಯಂತ ಖೇದಕರ ಸಂಗತಿ- ಅಶೋಕ.ಸಜ್ಜನ..
ಅದೆಷ್ಟೋ ವರ್ಷಗಳಿಂದ ಭಡ್ತಿ ಪಡೆಯದೇ ನಿವೃತ್ತಿಯಾಗುತ್ತಿರುವ ಶಿಕ್ಷಕರು ನೋವಿನ ಸಂಗತಿ
ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತಿರುವ ಶಿಕ್ಷಕರು
ಹುಬ್ಬಳ್ಳಿ:
ಕಳೆದೊಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಮುಖ್ಯ ಶಿಕ್ಷಕರ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಮುಂಬಡ್ತಿ ಪ್ರಕ್ರಿಯೆ .ವರ್ಗಾವಣೆ ,ಕೆ.ಎ.ಟಿ,.ನ್ಯಾಯಾಲಯ,ಚುನಾವಣೆ, ಹೀಗೆ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದೆ.
ಈ ಕಾರಣದಿಂದಾಗಿ ಬಹಳಷ್ಟು ಗುರುಗಳು ಗುರುಮಾತೆಯರು ಮುಂಬಡ್ತಿ ಪಡೆಯದೆ ನಿವೃತ್ತರಾಗುತ್ತಿದ್ದು ಹಾಗೂ ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಮತ್ತು ಮುಖ್ಯ ಶಿಕ್ಷಕರಾಗದೇ ಸಹ ಶಿಕ್ಷಕರಾಗಿ ಹಾಗೆಯೇ ನಿವೃತ್ತಿ ಆಗುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ.ಇದಕ್ಕೆಲ್ಲ ಆಸ್ಪದ ನೀಡದೇ ಈ ಸಂಗತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತತಕ್ಷಣ ಭಡ್ತಿ ಪ್ರಕ್ರಿಯೆ ವೇಳಾ ಪಟ್ಟಿಯನ್ನು ಹೊರಡಿಸಬೇಕೆಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಬೆಂಗಳೂರು ಇವರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ರಾಜ್ಯಾಧ್ಯಕ್ಷರಾದ ಅಶೋಕ.ಸಜ್ಜನ.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ,

ಗೌರವಾಧ್ಯಕ್ಷ..ಎಲ್.ಆಯ್.ಲಕ್ಕಮ್ಮನವರ.ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ ಆರ್.ಕೆ.ಎಮ್.ವಿ.ಕುಸುಮಾ ಶಿಸ್ತು ಸಮಿತಿ ಅಧ್ಯಕ್ಷರಾದ ಹನುಮಂತಪ್ಪ ಮೇಟಿ.ಹೋರಾಟ ಸಮಿತಿ ಅಧ್ಯಕ್ಷರಾದ ಸಿದ್ದಣ್ಣ ಉಕ್ಕಲಿ ಸಲಹಾ ಸಮಿತಿ ಅಧ್ಯಕ್ಷರಾದ ಗೋವಿಂದ ಜುಜಾರೆ ರಾಜ್ಯ ಉಪಾಧ್ಯಕ್ಷರಾದ ಮಹ್ಮದ ರಫಿ ಕೆ.ನಾಗರಾಜು ಧರ್ಮಣ್ಣ ಭಜಂತ್ರಿ ಆರ್.ಎಮ್.ಕಮ್ಮಾರ.ಮುಂತಾದವರು ಪತ್ರ ಬರೆದು ಒತ್ತಾಯಿಸಿದ್ದಾರೆ.