ಇಂದು ರಾಜ್ಯದ ಸರ್ಕಾರಿ ಶಾಲೆಗಳ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡತಕ್ಕಂಥ ದಿನ.
ನಾನು ಚಿಕ್ಕವನಿಂದ ಕೇಳ್ತಾ ಇದ್ದೆ ಓದ್ತಾ ಇದೆ ಮುಖ್ಯಮಂತ್ರಿಗಳಿಗೆ ಒಂದು ಚೀಟಿ ಕೊಟ್ಟರೆ ಕೆಲಸ ಆಗಿಬಿಡುತ್ತದೆ ಎಂದು ಹಳ್ಳಿಗಳಲ್ಲಿ ಹಿರಿಯರು ಮಾತನಾಡುತ್ತಿದ್ದನ್ನು ಕೇಳಿಸಿಕೊಂಡ ರೂಡಿ.
ಇವತ್ತು ನಾನು ಯಥಾರೀತಿಯಾಗಿ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕರ್ನಾಟಕ ರಾಜ್ಯೋತ್ಸವದ 50ರ ಸಂಭ್ರಮಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನತ್ತ ಹೋಗಿದ್ವಿ ಕಾರ್ಯಕ್ರಮಕ್ಕೆ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರು ಶಿಕ್ಷಣ ಇಲಾಖೆಯ ಗೌರವಾನ್ವಿತ ಸಚಿವರಾದ ಮಧು ಬಂಗಾರಪ್ಪ ಸಾಹೇಬರು,ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು, ನಿರ್ದೇಶಕರು ವೇದಿಕೆ ಮೇಲೆ ಇದ್ದರು ನಾವು ಕೂಡ ವೇದಿಕೆಯಲ್ಲಿ ಅತ್ತ ಇತ್ತ ಓಡಾಡುತ್ತಿದ್ದೆವು. ಕಾರ್ಯಕ್ರಮ ಪ್ರಾರಂಭವಾಯಿತು ನಾನು ಹಲವಾರು ಬಾರಿ ಮಾನ್ಯ ಮುಖ್ಯಮಂತ್ರಿಗಳಿಗೆ ಸರ್ಕಾರ ಉಚಿತ ವಿದ್ಯುತ್ ಕೊಟ್ಟಿರುವಂತಹ ಸಂದರ್ಭದಲ್ಲಿ
ದೇಗುಲಗಳಿಗೆ ಉಚಿತ ವಿದ್ಯುತ್ ಹಾಗೂ ನೀರು ನೀಡುತ್ತೇವೆಂದು ಹೇಳುತ್ತಿರುವಾಗ ನನ್ನ ತಲೆಯಲ್ಲಿ ಓಡುತ್ತಾ ಇದ್ದಿದ್ದು ಒಂದೇ ಒಂದು ಈ ರಾಜ್ಯದ ಜ್ಞಾನ ದೇಗುಲಗಳು ಸರ್ಕಾರಿ ಶಾಲೆಗೆ ಬರುವಂತಹ ಬಡವ, ಹಿಂದುಳಿದ, ದಲಿತ ಮಕ್ಕಳು ಕಲಿಯುವಂತಹ ಸರ್ಕಾರಿ ಶಾಲೆಗಳಿಗೆ ಅದು ಸಿದ್ದರಾಮಯ್ಯನವರು ವಿದ್ಯುತ್ ಹಾಗೂ ಕುಡಿಯುವ ನೀರು ಉಚಿತವಾಗಿ ನೀಡದೆ ಇದ್ದರೆ ಹೇಗೆ ಎಂದು ನನ್ನ ತಲೆಯಲ್ಲಿ ಸದಾ ಕಾಡುತಲಿತ್ತು ಇವತ್ತೇನು ಗೊತ್ತಿಲ್ಲ ಮಧು ಬಂಗಾರಪ್ಪ ಸಾಹೇಬರು ತಮ್ಮ ಭಾಷಣವನ್ನು ಮುಗಿಸಿ ಬಂದು ಕೂತರು ಇನ್ನೊಂದು ಕಡೆ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರು ಸಹ ತಮ್ಮ ಭಾಷಣವನ್ನು ಮುಗಿಸಿ ಬಂದು ಕೂತರು ರಿಚ್ವನ್ ಹರ್ಷಿತ್ ಸಾಹೇಬರು ಭಾಷಣವನ್ನು ಮಾಡುವಂತಹ ಸಂದರ್ಭದಲ್ಲಿ ನಾನು ವೇದಿಕೆ ಮೇಲೆ ಕುಳಿತುಕೊಂಡಿದ್ದೆ ಆ ಸಂದರ್ಭದಲ್ಲಿ ನನ್ನ ಪಕ್ಕದಲ್ಲಿ ಕುಳಿತುಕೊಂಡಿರುವಂತಹ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯಾಗಿರುವಂತಹ ಜಯಪ್ರಕಾಶ್ ಸಾಹೇಬ ರವರ ಹತ್ತಿರ ಮಧು ಬಂಗಾರಪ್ಪನವರ ಭಾಷಣದ ಪ್ರತಿ ಇತ್ತು ಆ ಪ್ರತಿಯನ್ನು ತೆಗೆದುಕೊಂಡು ಓದುತ್ತಾ ಓದುತ್ತಾ ಅದರಲ್ಲಿ ಒಂದು ಚೀಟಿಯಲ್ಲಿ ನಾನು ಬರೆದೆ ರಾಜ್ಯೋತ್ಸವದ 50ನೇ ಸಂಭ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಲಿ ಸವಿನಯ ಪ್ರಾರ್ಥನೆ ಸರ್ ತಾವು ಈಗಾಗಲೇ ಉಚಿತ ವಿದ್ಯುತ್ತನ್ನು ಜನಸಾಮಾನ್ಯರಿಗೆ ನೀಡಿದ್ದೀರಿ ದೇಗುಲಗಳಿಗೆ ಉಚಿತ ವಿದ್ಯುತ್ ಹಾಗೂ ನೀರನ್ನು ನೀಡಲು ಘೋಷಿಸಿದ್ದೀರಿ. ಕರ್ನಾಟಕ ಕರುನಾಡಗಿ ಬೆಳುಗುತಲಿದ್ದರೂ ಈ ರಾಜ್ಯದ ದೇಗುಲಗಳಾದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಇಲ್ಲ ಸರ್ ಕೈಮುಗಿದು ಕೇಳಿಕೊಳ್ಳುತ್ತೇವೆ ರಾಜ್ಯೋತ್ಸವದ ಕೊಡುಗೆಯಾಗಿ ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಹಾಗೂ ನೀರನ್ನು ಉಚಿತವಾಗಿ ನೀಡುತ್ತೇವೆಂದು ಘೋಷಣೆ ಮಾಡಬೇಕು ಎಂದು ಚೀಟಿಯನ್ನು ಬರೆದು ಆ ಚೀಟಿಯನ್ನು ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಸನ್ಮಾನ್ಯ ಪ್ರಭಾಕರ್ ಸಾಹೇಬರ ಹತ್ತಿರ ಕೊಟ್ಟು ಅಣ್ಣ ಇದೊಂದು ದಯಮಾಡಿ ಕೈಮುಗಿತೀನಿ ಎಂದು ಹೇಳಿದೆ ಅವರು ಹೇಳಿದರು ಏನೋ ಇದರ ಬಜೆಟ್ ಎಷ್ಟಗುತ್ತೋ ಹೇಗೋ ಏನೋ ಈ ರೀತಿ ಕೊಟ್ಟರೆ ಹೇಗೋ ಎಂದು ಕೇಳಿದರು ಹೇಗೋ ಮಾನ್ಯ ಮುಖ್ಯಮಂತ್ರಿಗಳಿಗೆ ಚೀಟಿಯನ್ನು ತಲುಪಿಸಿದೆವು ಕೊಟ್ಟ ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ಚೀಟಿಯನ್ನು ವೇದಿಕೆಯ ಮೇಲೆ ಗಂಭೀರವಾಗಿ ಓದಿ ದೃಢ ಮನಸ್ಸಿನಿಂದ ವೇದಿಕೆಯ ಮೇಲೆ ಕುಳಿತಿದ್ದಂತಹ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಸನ್ಮಾನ್ಯ ಶ್ರೀಮತಿ ವಂದಿತಾ ಶರ್ಮಾ ಮೇಡಂ ರವರನ್ನು ಕರೆದು ಆ ಚೀಟಿಯನ್ನು ಕೊಟ್ಟು ಅದರ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವಂತಹ ಒಂದಿಷ್ಟು ಚಟುವಟಿಕೆಗಳು ವೇದಿಕೆಯ ಮೇಲೆ ಬಹಳ ವೇಗವನ್ನು ಪಡೆದುಕೊಂಡು ನಮ್ಮೆಲ್ಲ ನಿರ್ದೇಶಕರು ,ಅಧಿಕಾರಿಗಳು, ವಂದಿತಾ ಶರ್ಮಾ ಮೇಡಮ್ ರವರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿರುವಂತಹ ಸನ್ಮಾನ್ಯ ಶ್ರೀ ರಿತೇಶ್ ಕುಮಾರ್ ಸಿಂಗ್ ರವರ ಜೊತೆ ಚರ್ಚೆ ಮಾಡಿದರು ಅವರು ಬಂದು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದರು. ಮಧು ಬಂಗಾರಪ್ಪ ಸಾಹೇಬರು ಸಹ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿದರು. ಈ ವಿಷಯವಾಗಿ ಚರ್ಚೆ ನಡೆಯಿತು ಶಿಕ್ಷಣ ಇಲಾಖೆಯ ಆಯುಕ್ತರಾದ ಸನ್ಮಾನ್ಯ ಶ್ರೀಮತಿ ಬಿ ಬಿ ಕಾವೇರಿ ಮೇಡಂ ಅವರು ಕೂಡ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದರು ಅಂತಿಮವಾಗಿ ಎಲ್ಲಾ ಅಧಿಕಾರಿಗಳು ಈ ವಿಷಯವಾಗಿ ಬಿಸಿ ಬಿಸಿ ಚರ್ಚೆ ಮಾಡಿದರು.
ಕರ್ನಾಟಕ ರಾಜ್ಯೋತ್ಸವದ 50ನೇ ಸಂಭ್ರಮದ ಭಾಷಣಕ್ಕೆ ಬಂದು ನಿಂತ ಮಾನ್ಯ ಮುಖ್ಯಮಂತ್ರಿಗಳು ಕರುನಾಡ ದೊರೆ ಕನ್ನಡಿಗರ ಮುದ್ದು ರಾಮಯ್ಯ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಶ್ರಮಿಸುವ ಸಿದ್ದರಾಮಯ್ಯನವರು ತಮ್ಮ ಯಥಾವಸ್ತು ದಾಟಿಯಲ್ಲಿ ಭಾಷಣ ಪ್ರಾರಂಭಿಸಿ ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಲ್ಲರೂ ಕನ್ನಡದಲ್ಲಿ ವ್ಯವಹರಿಸಬೇಕೆಂದು ಭಾಷಣ ಮುಂದುವರಿಸಿ ರಾಜ್ಯದಲ್ಲಿ ಎಲ್ಲರೂ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು ಸರ್ಕಾರಿ ಶಾಲೆಗಳು ಬೆಳೆಯಬೇಕು ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡಬೇಕೆಂದು ಭಾಷಣ ಮುಂದುವರಿಸಿ ಇದೀಗ ಸಂಘದವರು ನನಗೆ ಒಂದು ಚೀಟಿಯನ್ನು ನೀಡಿದ್ದಾರೆ ಒತ್ತಾಯ ಮಾಡಿದ್ದಾರೆ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ನೀಡಬೇಕೆಂದು ಹೇಳಿ ಇಂದಿನಿಂದಲೇ ಆದೇಶವನ್ನು ಜಾರಿ ಗೊಳಿಸುತ್ತೇನೆ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರನ್ನು ಕೊಡುವಂತಹ ತೀರ್ಮಾನವನ್ನು ಮಾಡಿದ್ದೇವೆಂದು ಘೋಷಣೆಯನ್ನು ಮಾಡಿದರು.
ನಿಜವಾಗಲೂ 50ರ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಇದೊಂದು ದಾಖಲ ಅರ್ಹವಾದ ವಿಚಾರ ಆದರೆ ಇವತ್ತು ನಡೆದಿತ್ತು ಕನಸು ನನಸೋ ಗೊತ್ತಿಲ್ಲ ಒಂದು ಚೀಟಿಯನ್ನು ನೀಡಿದಾಗ ಇಂತಹ ಐತಿಹಾಸಿಕ ಘೋಷಣೆಯನ್ನು ಮಾಡಿದ್ದಾರೆ. ನನಗೆ ನೆನಪಿದೆ ನಾನು ಸೇವೆ ಸಲ್ಲಿಸುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಈ ಶಾಲೆಯಲ್ಲಿ 40,000 ರಿಂದ 50,000 ಕರೆಂಟ್ ಬಿಲ್ ಕಟ್ಟುವ ಸಂದರ್ಭ ನೋಡಿದ್ದೇವೆ ಅಭಿನಂದನೆಗಳು ಸರ್ ಕೃತಜ್ಞತೆಗಳು ಸರ್ ಯಾವುದೋ ಅನುಭವ ಮುಖ್ಯ ಮಂತ್ರಿಗಳು ಚೀಟಿಯನ್ನು ನೀಡಿದರೆ ಕೆಲಸ ಮಾಡುತ್ತಾರೆಂದು ಆದರೆ ಇವತ್ತು ನಡೆದಿತ್ತು ಅದೇ ಸರ್ಕಾರಿ ಶಾಲೆಗಳ ಮೇಲೆ ತಮಗಿರುವಂತಹ ಅಭಿಮಾನಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರ ಪಾಲಕರ ಮಕ್ಕಳ ಬಹು ವರ್ಷಗಳ ಕನಸನ್ನು ನನಸು ಮಾಡಿದ್ದೀರಿ ಸರ್ಕಾರಿ ಶಾಲೆಗಳಿಗೆ ಉಚಿತ ಕುಡಿಯುವ ನೀರು ಹಾಗೂ ವಿದ್ಯುತ್ತನ್ನು ಘೋಷಣೆ ಮಾಡಿ ವಿದ್ಯಾ ಜ್ಯೋತಿ ಯೋಜನೆಯ ಮೂಲಕ ಸರ್ಕಾರಿ ಶಾಲೆಗಳಲ್ಲಿ ಜ್ಞಾನಜ್ಯೋತಿಗೆ ಸಹಕರಿಸಿದ ತಮಗೆ ಮತ್ತೊಮ್ಮೆ ತುಂಬು ಹೃದಯದ ಅಭಿನಂದನೆಗಳು ಕೃತಜ್ಞತೆಗಳು.
ಕಾರ್ಯಕ್ರಮದಲ್ಲಿ ಉಚಿತ ವಿದ್ಯುತ್ ಹಾಗೂ ನೀರನ್ನು ಘೋಷಣೆ ಮಾಡಿ ಹೊರಗೆ ಬಂದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರಿಗೆ ತಲೆಬಾಗಿ ನಮಸ್ಕರಿಸಿ ಸರ್ 50ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ತಾವು ಐತಿಹಾಸಿಕ ಘೋಷಣೆಯನ್ನು ಮಾಡಿದ್ದೀರಿ ಸರ್ ತಮಗೆ ಸಮಸ್ತ ರಾಜ್ಯದ ಶಿಕ್ಷಕರು ಪಾಲಕರು ಪೋಷಕರ ಪರವಾಗಿ ತುಂಬು ಹೃದಯದ ಕೃತಜ್ಞತೆಗಳೆಂದು ಹೇಳಿದೆ ಬಹುಶಹ ಅದೊಂದು ಕ್ಷಣ ನನ್ನಲ್ಲಿ ಸಾರ್ಥಕ ಭಾವ ಮೂಡಿತು ಅಧಿಕಾರಿಗಳು ನನಗೆ ದೂರವಾಣಿ ಕರೆ ಮಾಡಿ ಹೇಳಿದರು ಎಂತಹ ಪುಣ್ಯದ ಕೆಲಸ ಮಾಡಿದ್ದೀಯಪ್ಪ ಜೊತೆಗೆ ಸಿದ್ದರಾಮಯ್ಯನವರು ಕೂಡ ಏನೋ ಇವತ್ತೇ ಚೀಟಿ ಕೊಟ್ಟು ಇವತ್ತೇ ಘೋಷಣೆ ಮಾಡಿಸಿ ಬಿಟ್ಟಿಯಲ್ಲ ಎಂದು ಹೇಳಿದರು ನಿಜವಾಗಲೂ ಇವತ್ತಿನ ದಿನ ಸಾರ್ಥಕ ದಿನ ಇನ್ನು ತಲೆತಲೆ ಮಾರುಗಳ ವರೆಗೆ ಈ ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತ ಕುಡಿಯುವ ನೀರು ಹಾಗೂ ವಿದ್ಯುತ್ ದೊರೆಯುತ್ತದೆ ಇದಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ಕಾರಣ ಸರ್ಕಾರಿ ಶಾಲೆಗಳು ಉಳಿಯಲಿ ಬೆಳೆಯಲಿ ಎಂದು ಆಶಿಸುತ್ತೇವೆ.
👇👇👇👇👇👇👇👇👇👇
ತಮ್ಮ ಚಂದ್ರಶೇಖರ್ ನುಗ್ಗಲಿ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ( ರಿ.) ಬೆಂಗಳೂರು.