ಹುಬ್ಬಳ್ಳಿಯಿಂದ ಮುಂಬೈಗೆ ಏರ್ಬಸ್ ವಿಮಾನ ಸೇವೆ ಆರಂಭ✈️
ಹುಬ್ಬಳ್ಳಿಯಿಂದ ಮುಂಬೈಗೆ ಈ ಹಿಂದೆ ATR ವಿಮಾನ ಸಂಚರಿಸುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 186 ಆಸನಗಳ ವ್ಯವಸ್ಥೆ ಇರುವ ವಿಮಾನ ಆರಂಭಿಸುವಂತೆ ಇಂಡಿಗೋ ಸಂಸ್ಥೆಗೆ ವಿನಂತಿಸಿದ್ದು, ನಮ್ಮ ವಿನಂತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಸಂಸ್ಥೆ ನೂತನ ವಿಮಾನಸೇವೆ ಆರಂಭಿಸಿದೆ.
ಛೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ಮುಂಬೈಗೆ ತೆರಳುವ ಪ್ರಯಾಣಿಕರ ಪ್ರಯಾಣ ಇನ್ನು ಮುಂದೆ ಸುಖಕರವಾಗಲಿದೆ.
ಇಂಡಿಗೋ ಸಂಸ್ಥೆಗೆ ಧನ್ಯವಾದಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.
ನೂತನ ವಿಮಾನಸೇವೆಯ ಸಮಯ ಈ ಕೆಳಗಿನಂತಿದೆ
ಮುಂಬೈ – ಹುಬ್ಬಳ್ಳಿ (6E 936): ಮುಂಬೈನಿಂದ ನಿರ್ಗಮನ: 12:00 PM
ಹುಬ್ಬಳ್ಳಿಗೆ ಆಗಮನ: 1:15 PM
ಹುಬ್ಬಳ್ಳಿ – ಮುಂಬೈ (6E 937): ಹುಬ್ಬಳ್ಳಿಯಿಂದ ನಿರ್ಗಮನ: 1:45 PM
ಮುಂಬೈಗೆ ಆಗಮನ: 2:40 PM