ದೇವರು ಕೊಟ್ಟರು ಪೂಜಾರಿ ಕೊಡುತ್ತಿಲ್ಲ ಎಂಬ ಮಾತನ್ನು ಇವರನ್ನು ನೋಡಿಯೇ ಹೇಳಿರಬೇಕು!! ಕೈ ತುಂಬ ಸಂಬಳ ವಿದ್ದರು, ಮೂರು ಸಾವಿರ ರೂಪಾಯಿ ಕೈ ಚಾಚಿ,ಲೋಕಾಯುಕ್ತ ಪೋಲಿಸರ್ ಅಥಿತಿಯಾದ ರಾಧಮ್ಮ..
ಶಿರಸಿ: ದಾನದ ಜಾಗಕ್ಕೂ ಲಂಚ ಕೇಳಿದ ಆರೋಪದ ಹಿನ್ನಲೆಯಲ್ಲಿ ಇಲ್ಲಿಯ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಶುಕ್ರವಾರ ಲೋಕಾಯುಕ್ತ ಪೋಲೀಸರು ದಾಳಿ ನಡೆಸಿದರು.
ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಉಪ ನೊಂದಣಿ ಅಧಿಕಾರಿ ರಾಧಮ್ಮ ಎನ್ನುವವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠ ಎನ್ನುವವರು ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು.ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠ ಎನ್ನುವವರು ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ಜಗಜ್ಯೋತಿ ವೀರಶೈವ ಸಮಿತಿಗೆ 3 ಗುಂಟೆ ಜಾಗ ನೊಂದಣಿ ಕೆಲಸ ಮಾಡುವುದಕ್ಕೆ ಅಕ್ರಮವಾಗಿ ಹಣ ಕೇಳುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರಿಂದ ಶುಕ್ರವಾರ 3000 ರೂಗಳನ್ನು ಪಡೆಯುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಲೋಕಾಯುಕ್ತ ಎಸ್ ಪಿ ಕುಮಾರಚಂದ್ರ, ಇನ್ಸ್ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ್ದರು.
ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ವೃದ್ದರಿಗೆ, ಮಹಿಳೆಯರಿಗೆ ಸಮಸ್ಯೆ ಆಗುತ್ತಿತ್ತು. ಹಣ ಕೇಳುತ್ತಾರೆ ಎಂಬ ಆರೋಪ ಇತ್ತು. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಕೂಡ ಪ್ರತಿಕ್ರಿಯೆ ನೀಡಿದರು.