ಪುನೀತ ಮತ್ತೆ ಹುಟ್ಟಿ ಬಾ
ಅಭಿಮಾನದ ಅಭಿನಂದನೆಗಳು ಪುನೀತ ನಾ ನಿನ್ನ ಅಪ್ಪಟ ಅಭಿಮಾನಿ ಹೃದಯಾಂತರಾಳದಿಂದ…
ಹೆಸರು ಪೂರ್ತಿ ಹೇಳದೇ
ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ
ಹಣೆಯ ಚಚ್ಚಿಕೊಳ್ಳಲೇ
ಮನಸ್ಸು ತುಂಬಾ ಮಾಗಿದೆ….
ಗುಟ್ಟು ಬಿಡಲೇ……..
ನಾ ನಿನ್ನ ಕೋಟ್ಯಂತರ ಅಭಿಮಾನಿಗಳಲ್ಲಿ ಒಬ್ಬ ಅಪರೂಪದ ಅಭಿಮಾನಿ..
ಮರೆಯಲಾರೆ ನಿನ್ನ ಚಿತ್ರಗಳ
29 ಅಕ್ಟೋಬರ್ 2021 ಅಂದು ನಿನ್ನ ಸಾವಿನ ಸುದ್ದಿ ಕೇಳಿದಾಗ ಆಕಾಶವೇ ಕಳಚಿ ಬಿದ್ದಂತಾಗಿ,ಭೂಮಿ ಕಂಪಿಸಿದ ಅನುಭವ,
ಹೃದಯ ಬಡಿತ ನಿಂತ ಹಾಗೆ, ಒಂದು ಕ್ಷಣ ಉಸಿರು ನಿಂತು ಹೊಯಿತು…. ನನ್ನ ಯಜಮಾನನ ಹೆಗಲ ಮೇಲೆ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅಳತೊಡಗಿದೆ.
ಮಕ್ಕಳು ಮೂಕವಿಸ್ಮಿತರಾಗಿ ನನಗೆ ನೋಡುತಿರಲು. ಬೇರೆಯವರು ಅಯ್ಯೋ ಪರ ಪುರುಷನಿಗೂಸ್ಕರ ಹೀಗೆ ಅಳುವುದೇ ಎನುತಿರಲು…
ಆದರುನೂ ಬೇರೆ ಏನು ಕೇಳದ ಮನ ನಿನ್ನ ಅಭಿಮಾನಿಯಾಗಿ ಹೇಳದಂತ ಮಾತಿದೆ, ಮುಚ್ಚಿ ಇಡಲು ಸಾಧ್ಯವೇ ಹೇಳಿಬಿಡಲೆ…..
ನಗುತಿರಲು ಜನ ಯಾಕೆ
ನೋಡುತ ನನ್ನನ್ನು
ಹೃದಯವು ಹೆದರಲೇ ಬೇಕೇ
ಬಯಸುತ್ತ ನಿನ್ನನ್ನು…..
ನನ್ನ ಯಜಮಾನನಿಗೂ ಗೊತ್ತಿತ್ತು ಇವಳು ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿ ಅಂತ.
ನನಗೆ ಬುದ್ಧಿ ಎಲ್ಲಿದೆ.!?.
ನೀನಿದ್ದಾಗ ನಿನ್ನ ನೋಡುವ ಹಂಬಲ ದಾರಿಗಳು ಇರಲಿಲ್ಲ, ಆದರೀಗ ನೀನಿಲ್ಲ ನಿನ್ನ ನೋಡುವ ಹಂಬಲ ಹೆಚ್ಚಾಗಿದೆ.
ನಿನ್ನ ಮನೆಗೆ ಬರುವ ದಾರಿಯೂ ಸಿಕ್ಕಿದೆ, ಆದರೆ ನೀನಿಲ್ಲ….. ಎಲ್ಲಿ ಹುಡುಕುತ್ತ ನಾ ಬರಲಿ… ಹೇಳದೆ ಹೋದೆಯಾ..
29 ಅಕ್ಟೋಬರ್ ಕರುನಾಡ ಪಾಲಿಗೆ ಅಂದು ಕರಾಳ ದಿನ.
ಪುನೀತ ರಾಜಕುಮಾರ್ ಸಾವಿನ ಸುದ್ದಿ ಕೇಳಿ ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೆ
ಸಾವು ಸಾವು ಸಾವು ಸಾವು ಅಂದರೆ ಹೀಗೇನಾ.. ಎನ್ನುವಂತಾಗಿ ಹೋಯಿತು.
ಎಲ್ಲವನ್ನು ಕಸಿದುಕೊಳ್ಳುತ್ತಾ…. ಪುನೀತ್ ಸಾವಿನ ಸುದ್ದಿ ಕೇಳಿದಾಗ ಕೋಟ್ಯಂತರ ಕನ್ನಡಿಗರ ಮನೆಯಲ್ಲಿ ಮೂರು ದಿನಗಳ ಕಾಲ ಒಲೆ ಹಚ್ಚಿ ಅಡುಗೆ ಮಾಡಿಲ್ಲ.
ಮಕ್ಕಳ ತುಂಟಾಟ, ಯುವಕರ ಚೆಲ್ಲಾಟ, ಹಿರಿಯರ ಒಡನಾಟ ಹೀಗೆ…. ಇಡೀ ಕರುನಾಡು ಸ್ತಬ್ಧವಾಗಿ ಹೋಯ್ತು.
ನಮ್ಮ ಅಪ್ಪು ಸಾವು..
ದೇವರೇ ನಿನ್ನ ಹತ್ತಿರ ಏನೆಂದು ಅಂಗಲಾಚಿ ಬೇಡಲಿ…
ನೀನೇ ಪ್ರತ್ಯಕ್ಷನಾಗಿ ನನ್ನ ಬಳಿ ಬಂದು ಏನು ವರ ಬೇಕು ಕೇಳು ಎಂದಾಗ..
ಪ್ರತಿ ಕನ್ನಡಿಗನ ಬೇಡಿಕೆ ಒಂದೇ
ಕೊಡುವುದಾದರೆ ..
ಅಪ್ಪುನನ್ನು ಕನ್ನಡಮ್ಮನ ಮಡಿಲಿಗೆ ಪುನಃ ಕಳುಹಿಸು ದೇವಾ….
ಎಂತಹ ಮಹಾನ್ ವ್ಯಕ್ತಿಗಳು, ವಿಜ್ಞಾನಿಗಳು, ಸಾಹಿತಿಗಳು,ಹೋರಾಟಗಾರರು,ಇತಿಹಾಸಗಾರರು,ಕ್ರೀಡಾಪಟುಗಳನ್ನು ನೋಡಿದರು
ಪುನಿತ್ ರಾಜ್ ಕುಮಾರ್ ಎಂಬ ಸ್ಟಾರ್ ನಟನನ್ನು ಜನರು ಪೂಜಿಸುವ ಪರಿಪಾಠವೂ ಆಶ್ಚರ್ಯ ಅಲ್ಲವೆ. ಒಬ್ಬ ಬಾಲ ನಟನಾಗಿ ತಂದೆಯಂತೆ ನಟನೆ ಪ್ರಾರಂಭಿಸಿದ ಪುನಿತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ ನಿಜಕ್ಕೂ ಮರೆಯದಂತ ಮಾಣಿಕ್ಯ.
ಕೇವಲ ನಟನೆ ಅಲ್ಲ, ಯುವಕ, ಚೆಲುವ, ಸುಂದರಾಂಗ, ಹೃದಯವಂತ, ಎಲ್ಲರ ಮೆಚ್ಚಿನ ನಟ, ಅದ್ಭುತ ನೃತ್ಯಗಾರ.
ಅನಾಥ ಮಕ್ಕಳ ಬಾಳಿಗೆ ಬೆಳಕಾಗಿ, ಹೆಣ್ಣು ಮಕ್ಕಳ ಆಶಾ ಕಿರಣ, ಸಮಾಜ ಸೇವೆ ಎಲ್ಲವೂ ಬೆರಗುಗೊಳಿಸುವ ಕಾರ್ಯ….
ನಿಜ ಹೇಳಬೇಕೆಂದರೆ ಆ ದೇವರಿಗೂ ಅಪ್ಪುವಿನ ಅವಶ್ಯಕತೆ ಇದ್ದಿರಬೇಕು, ಅಂತೆಯೇ ಕೋಟ್ಯಂತರ ಕನ್ನಡಿಗರ ಮದ್ಯ ಸದ್ದಿಲ್ಲದೆ ಈ ಭೂಮಿಯಿಂದ ಕರೆದುಕೊಂಡು ಹೋಗಿದ್ದಾನೆ.
ಅಪ್ಪು ಜೀವಂತ ಇದ್ದಾಗ ಜನರ ಸೇವೆ ಮಾಡುತ್ತಿದ್ದರು.. ಅದೇ ಅಪ್ಪು ಈ ಭೂಮಿಯ ಮೇಲೆ ಇಲ್ಲದಿದ್ದರೂ ಕೂಡ ಅನೇಕ ಜನರ ಪಾಲಿಗೆ ದೇವರ ಸ್ವರೂಪಿಯಾಗಿದ್ದಾರೆ.. ಯಾಕೆ ಅಂತ ಗೊತ್ತಾ..
ಕರುನಾಡಿನಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಪುನಿತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶುಭಾರಂಭ ಮಾಡುತಿರುವರು ಅಭಿಮಾನಿಗಳ ಹೃದಯ ದೊಳು ಅಪ್ಪು ನೀ ಸದಾ ಅಮರ..
ಅಪ್ಪುವಿನ ಭಾವಚಿತ್ರಗಳು, ಕ್ಯಾಲೆಂಡರ್,ಟೀ ಶರ್ಟ್ ಗಳು, ಟಾಟೂ… ಹೀಗೆ ಅಪ್ಪು ಭಾವಚಿತ್ರ ಇರುವ ಪ್ರತಿ ಸಾಮಗ್ರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ ಅಂತ ವ್ಯಾಪಾರಸ್ಥರು ಹೇಳುತ್ತಿದ್ದರು, ಇವರ ಬೆಲೆ ಕಟ್ಟಲು ಸಾಧ್ಯವೇ…
ಅಕ್ಟೋಬರ್ 29 ಬಂತೆಂದರೆ ಸಾಕು ಹೃದಯ ಭಾರವಾಗುತ್ತೆ.
ಅಪ್ಪು ನಿತ್ಯವೂ ನೆನೆಯುವುದಕ್ಕಿಂತ ಹೆಚ್ಚು ಹೆಚ್ಚು ನೆನಪಾಗುವುದು
ಇವರ ಆದರ್ಶ ಗುಣಗಳು ಇಂದಿನ ಪೀಳಿಗೆಗೆ ಬರಲಿ,
ಇವರ ಕನ್ನಡಾಭಿಮಾನಕ್ಕೆ ನಮಿಸುತ್ತ, ಪುನರ್ಜನ್ಮ ಅಂತ ಇದ್ದರೆ, ನನ್ನ ಮಗನಾಗಿ ಈ ಕರುನಾಡಿನಲ್ಲಿ ಹುಟ್ಟಿ ಬರಲಿ ದೇವಾ…….ಇಂತಹ ಅಪ್ಪುವಿನ
ಸ್ಮರಣೆ ಸದಾ ಕಾಲವೂ ಅನನ್ಯ
ನಂದಿನಿ ಸನಬಾಳ್ ಕಲಬುರಗಿ