ಬೆಂಗಳೂರು:
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸರ್ಕಾರಿ ರಜೆ ನೀಡಿದ್ದರು ಕೂಡ, ಶಾಲೆಗಳಿಗೆ ರಜೆ ಇದೆ,ಇಲ್ಲವೋ ಎಂಬ ಗೊಂದಲಗಳು ಮೂಡುತ್ತಿವೆ..
ಈ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷ ಅಶೋಕ ಸಜ್ಜನ ಮಾತನಾಡಿ, ನಾಳೆ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಮಾಡುತ್ತೇವೆ ನಂತರ ಶಾಲೆಯನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿದ್ರು…
ಶಿಕ್ಷಕ ಬಂಧುಗಳೇ
ಇಂದು ಮಾನ್ಯ ಕ್ಷೇತ್ರ ಸಮನ್ವಯ ಅಧಿಕಾರಿಗಳಿಂದ ಬಂದಂತಹ ವಾಲ್ಮೀಕಿ ದಿನಾಚರಣೆ ಸಂಬಂಧಿತ ಆದೇಶದ ವಿಷಯವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಚರ್ಚಿಸಿ ಸ್ಪಷ್ಟಿಕರಣವನ್ನು ಪಡೆದಿದ್ದು ಅವರ ಸ್ಪಷ್ಟೀಕರಣದಂತೆ ಪ್ರತಿವರ್ಷದಂತೆ ಶಾಲೆಯಲ್ಲಿ ವಾಲ್ಮೀಕಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ನಂತರ ಶಾಲೆಯನ್ನು ಮುಕ್ತಾಯಗೊಳಿಸಲು ತಿಳಿಸಿರುತ್ತಾರೆ..
ಮಾಹಿತಿಗಾಗಿ..
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ಚಿಕ್ಕಮಗಳೂರು..