ಸರ್ಕಾರಿ ಶಾಲೆಯ ಶಿಕ್ಷಕ ಅಮಾನತ್..ಶಿಕ್ಷಕ ಮಾಡಿರುವ ಅವಾಂತರ ಕುರಿತಂತೆ ನಿಮ್ಮ ಪಬ್ಲಿಕ್ಟುಟೆ ವರದಿ ಪ್ರಸಾರ ಮಾಡಿತ್ತು..
ಚಿತ್ರದುರ್ಗ:ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಆಸಿಡ್ ದಾಳಿ ನಡೆಸಿದ ಆರೋಪ ಕೇಳಿ ಬಂದಿತ್ತು, ಈ ವಿಷಯ ಅಧಿಕಾರಿಗಳ ಗಮನಕ್ಕೆ ಬಂದ ಕೂಡಲೇ ಶಿಕ್ಷಕ ರಂಗಸ್ವಾಮಿ ಅವರನ್ನು ಅಮಾನತ್ ಮಾಡಿ ಡಿಡಿಪಿಐ ಅವರು ಆದೇಶ ಮಾಡಿರುತ್ತಾರೆ..
ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಶಾಲೆ ಮುಖ್ಯ ಶಿಕ್ಷಕ ರಂಗಸ್ವಾಮಿ ಆರೋಪ ನಿರಾಕರಿಸಿದ್ದರು.. ಶೌಚಾಲಯ ತೊಳೆಯುವ ಪೌಡರ್ ಮಿಕ್ಸ್ ಮಾಡಲು ಶಾಲಾ ವಿದ್ಯಾರ್ಥಿಗಳನ್ನು ಶಿಕ್ಷಕ ಬಳಸಿಕೊಂಡಿದ್ದಾರೆ..
ಸ್ವಚ್ಚತಾ ಕಾರ್ಯದಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಳ್ಳಬಾರದು,ಆದ್ರೆ ಈ ಶಿಕ್ಷಕರು ಬಳಸಿಕೊಂಡಿದ್ದು, ಕರ್ತವ್ಯ ಲೋಪವಾಗಿದೆ..ಶೌಚಾಲಯ ಸ್ವಚ್ಚತಾ ಕಾರ್ಯ ಮಾಡುವಾಗ ವಿದ್ಯಾರ್ಥಿನಿಯನ್ನು ಗದರಿಸಿದ್ದಾರೆ. ತಮ್ಮ ಕೈಲಿದ್ದ ದ್ರಾವಣ ವಿದ್ಯಾರ್ಥಿನಿ ಮೇಲೆ ಬಿದ್ದಿದ್ದು, ಸುಟ್ಟ ಗಾಯಗಳಾಗಿವೆ..
ಬೆನ್ನಿಗೆ ಗಂಭೀರ ಗಾಯವಾಗಿ ವಿದ್ಯಾರ್ಥಿನಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದೀಗ ಇಲಾಖೆ ಕೂಡ ಶಿಕ್ಷಕರ ವಿರುದ್ದ ಕ್ರಮ ಕೈಗೊಂಡಿದೆ.