ತುಮಕೂರು ನಗರದ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 2022-2023ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ..
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ದಿನಾಂಕ: 27-10-2023 ರಿಂದ 29-10-2023ರವರೆಗೆ ತುಮಕೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ‘ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ದಿನಾಂಕ: 27-10-2023ರಂದು ಸಂಜೆ 4-30 ಗಂಟೆಗೆ ಸನ್ಮಾನ್ಯ ಸಿದ್ದರಾಮಯ್ಯರವರು ಮಾನ್ಯ ಮುಖ್ಯಮಂತ್ರಿಗಳು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್, ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ COD. ಜಿ. ಪರಮೇಶ್ವರ್ರವರು, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಶ್ರೀ ಬಿ. ನಾಗೇಂದ್ರರವರು, ಸಹಕಾರ ಸಚಿವರಾದ ಶ್ರೀ ಕೆ.ಎನ್. ರಾಜಣ್ಣರವರು ಹಾಗೂ ಜಿಲ್ಲೆಯ ಸಂಸದರು, ಶಾಸಕರು ಮತ್ತು ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ವಿವಿಧ ಜಿಲ್ಲೆಗಳಿಂದ ಆಗಮಿಸುವ ನೌಕರರ ನೋಂದಣಿಯನ್ನು ದಿನಾಂಕ: 27-10-2023ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4-00ರವರೆಗೆ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮಾಡಿಕೊಳ್ಳಲಾಗುವುದು ದಿನಾಂಕ: 27-10-2023ರಂದು ಸಂಜೆ 4.30 ಗಂಟೆಗೆ ಧ್ವಜಾರೋಹಣ, ಜಿಲ್ಲಾವಾರು ಪಥಸಂಚಲನ, ಮುಖ್ಯಮಂತ್ರಿಗಳಿಂದ ಗೌರವ ವಂದನೆ ಸ್ವೀಕಾರ ಮತ್ತು ಬಲೂನ್ ಹಾರಿಸುವ ಮೂಲಕ ಕ್ರೀಡಾಕೂಟ ಉದ್ಘಾಟನೆ, ಕ್ರೀಡಾ ಜ್ಯೋತಿ ಸ್ವೀಕಾರ, ನಂತರ ಮುಖ್ಯಮಂತ್ರಿಗಳಿಂದ, ಗಣ್ಯರಿಂದ ಭಾಷಣ.
ಈಗಾಗಲೇ ಆಯಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ
ಸುಮಾರು 10 ಸಾವಿರ ಪುರುಷ/ಮಹಿಳಾ ಕ್ರೀಡಾಪಟುಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ.
ಈ ಕ್ರೀಡಾಕೂಟದಲ್ಲಿ 3500 ಮಹಿಳಾ ನೌಕರರು ಮತ್ತು 6500 ಪುರುಷ ನೌಕರರು ಭಾಗವಹಿಸಲಿದ್ದಾರೆ. • ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ Online ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ಕ್ರೀಡಾಪಟುಗಳಿಗೆ ಟ್ರಾಕ್ ಪ್ಯಾಂಟ್, ಟೀ-ಷರ್ಟ್ ಮತ್ತು ಕ್ಯಾಪ್ ವಿತರಿಸಲಾಗುವುದು. ರಾಜ್ಯ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗುವ ಪ್ರಥಮ /ದ್ವಿತೀಯ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗುವುದು.
ಭಾಗವಹಿಸಿದ ಎಲ್ಲಾ ನೌಕರರಿಗೂ ಮೂರು ದಿನಗಳ ಕಾಲ ರುಚಿ-ಶುಚಿಯಾದ ಊಟೋಪಹಾರದ ವ್ಯವಸ್ಥೆ ಮಾಡಲಾಗಿದೆ.
ಭಾಗವಹಿಸುವ ಪುರುಷ ಮತ್ತು ಮಹಿಳಾ ನೌಕರರಿಗೆ ಪ್ರತ್ಯೇಕವಾಗಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ತುಮಕೂರು ನಗರದಲ್ಲಿರುವ ಆಯ್ದ ಕ್ರೀಡಾಂಗಣಗಳಲ್ಲಿ ವಿವಿಧ ಕ್ರೀಡೆಗಳನ್ನು ಹಾಗೂ ವಿವಿಧ ಕಡೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತದೆ.
ವಸತಿ ಹಾಗೂ ಕ್ರೀಡೆಗಳು ನಡೆಯುವ ಸ್ಥಳಗಳಿಗೆ ಮಹಾತ್ಮಾ ಗಾಂಧಿ ಕ್ರೀಡಾಂಗಣದಿಂದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದಿನಾಂಕ: 27-10-2023ರ ಸಂಜೆ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ಮುಗಿದ ನಂತರ ಸಂಜೆ 7:00 ಗಂಟೆಗೆ ಕನ್ನಡದ ಖ್ಯಾತ ಗಾಯಕರಾದ ಶ್ರೀ ಹೇಮಂತ್, ಶ್ರೀಮತಿ ಇಂದು ನಾಗರಾಜ್, ಶ್ರೀ ಕಂಬದ ರಂಗಯ್ಯ ಸರಿಗಮಪ ತಂಡದವರಿಂದ ‘ಸಂಗೀತ ಸಂಜೆ’ ಕಾರ್ಯಕ್ರಮವಿರುತ್ತದೆ. • ದಿನಾಂಕ: 28-10-2023ರ ಸಂಜೆ 7:00 ಗಂಟೆಗೆ ಕನ್ನಡದ ಖ್ಯಾತ ಜಾನಪದ ಗಾಯಕರಾದ ಶ್ರೀಮತಿ ಸವಿತಕ್ಕ ಬ್ಯಾಂಡ್, ಶ್ರೀ ಕಡಬಗೆರೆ ಮುನಿರಾಜು ಮತ್ತು ತಂಡದವರಿಂದ ‘ಜಾನಪದೋತ್ಸವ’ ಕಾರ್ಯಕ್ರಮವಿರುತ್ತದೆ.
ಈ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳು, ಅಥ್ಲೆಟಿಕ್ಸ್ ಸೇರಿದಂತೆ ಗುಂಪು ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ
ಸ್ಪರ್ಧೆಗಳೂ ಸಹ ನಡೆಯಲಿವೆ (ಪ್ರತಿ ಲಗತ್ತಿಸಿದೆ)
ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ದಿನಾಂಕ: 27-10-2023 ರಿಂದ 29-10-2023
ರವರೆಗೆ ಸರ್ಕಾರ ವಿಶೇಷ ಸಾಂದರ್ಭಿಕ ರಜೆ ನೀಡಿದೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡೆಗಳ ಬಗ್ಗೆ ನಿಯಮಗಳನ್ನು ರೂಪಿಸಿದೆ. (ಪ್ರತಿ ಲಗತ್ತಿಸಿದೆ)
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಕೇಂದ್ರ ಸಂಘದ Online ನೋಂದಣಿ
ಮಾಡಿಕೊಂಡಿರುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ರಾಜ್ಯ ಸಂಘವು ಮನವಿ ಮಾಡುತ್ತದೆ.