🌹🌹ಜಂಬೂ ಸವಾರಿ 🌹🌹
೩೧ ಜಿಲ್ಲೆಗಳಿಂದ ಆಗಮಿಸಿದ್ದ ಕಣ್ಮನ ಸೆಳೆಯುವ ಸ್ತಬ್ಧ ಚಿತ್ರ
೭೫೦ ಕೆಜಿ ಬಂಗಾರದ ಅಮ್ಮನವರ ಮೂರುತಿ
ಐತಿಹಾಸಿಕ ಮೈಸೂರು ಜಂಬೂ ಸವಾರಿ
ಸಾಂಸ್ಕೃತಿಕ ವೈಭವ ನಗರಿ ಮೈಸೂರಲ್ಲಿ ಸೇರಿದ ಸಡಗರ
ಗತವೈಭವ ಸಾರುತ್ತಿರುವ ಸಂಬ್ರಮ
ಹಸಿರು ಸೀರೆಯಲ್ಲಿ ಕಂಗೊಳಿಸುವ ದೇವಿ ೪೧೪ನೇ ಅದ್ದೂರಿ ಜಂಬೂಸವಾರಿ
ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು
ಚಿನ್ನದ ಅಂಬಾರಿ ರಜತ ರಥದಲ್ಲಿ
ಆಸೀನ ಆಗಿರೋ ಈಶ್ವರಿ
ರಾಜಮಹಾರಾಜರ ಭವ್ಯ ದಿವ್ಯ
ಸರ್ವ ಶ್ರೇಷ್ಠ ಆಚರಣೆ
ನೋಡುವ ಕಂಗಳು ಪುಣ್ಯ ಧನ್ಯ
ವಿಶಿಷ್ಠ ವಿನೂತನ ಅಮ್ಮನವರ ಪೂಜೆ ಪುನಸ್ಕಾರಗಳು
ಬೆಟ್ಟದ ಮಾತೆಗೆ ಹೂವಿನ ಅಲಂಕಾರ
ತುಪ್ಪದ ದೀಪ ತಂಬಿಟ್ಟಿನ ನೈವೇದ್ಯ
ಮೈಸೂರಿನ ರಾಜಬೀದಿಯಿಂದ ಅಮ್ಮನವರ ಉತ್ಸವ ಶುರುವಾಗಿ
ಬನ್ನಿಮಂಟಪಕ್ಕೆ ಸಾಗುವ ವೈಭವ
ಕಣ್ಣಿಗೆ ಹಬ್ಬ ಎಸ್ಟು ನೋಡಿದರೂ ತೃಪ್ತಿ ಸಿಗದು ೫೭ ವರುಷದ ಅಭಿಮನ್ಯುವಿನ ತೂಕ ೪,೭೦೦ ಕೆಜಿ
ತೂಕದ ಅಭಿಮನ್ಯು ೫೭ ವಯಸ್ಸಿನವ ವಿಜಯಾ ಮತ್ತು ವರಲಕ್ಷ್ಮಿ ಅವರ ನಡುವೆ ಅಮ್ಮನವರ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ೫ ಕಿಲೋಮೀಟರ್ ನಿಧಾನವಾಗಿ ಸಾಗ್ತಾ ಇದೆ. ಆನೆ ಕೇಂದ್ರಬಿಂದು
ಐತಹಾಸಿಕ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ
ಬಣ್ಣ ಬಣ್ಣದ ಚಿತ್ತಾರದಿಂದ ಮಿಂಚುತ್ತಿರುವ ಗಜಪಡೆ
ನಾಡದೇವತೆಯನ್ನು ಕಣ್ತುಂಬಿಕೊಂಡು ದೇಶ ವಿದೇಶದಿಂದ ಜನಸಾಗರ ಬಂದು ದೇಶ ಸುಭಿಕ್ಷವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿ ಕೃತಾ ರ್ಥರಾಗುತ್ತಾರೆ ಎಷ್ಟು ಅಂದ ಎಷ್ಟು ಚಂದ ಅಮ್ಮ ನೀ .ನಿನ್ನ ಅಂದ ಬಣ್ಣಿಸಲು ಸರಿಸಮನಾದ ಪದಗಳೇ ಇಲ್ಲ ಅಮ್ಮ
ಚಿನ್ನದ ಅಂಬಾರಿಯಲ್ಲಿ ವಿರಾಜ ಮಾನ ಆಗಿರೋ ಅಮ್ಮ ಎಲ್ಲರನ್ನು ಹರಸು ಎಲ್ಲರನ್ನು ಕಾಪಾಡು. ಉತ್ತಮ ಮಾನವೀಯತೆ ಮೆರೆಯಲಿ ಮಳೆ ಬೆಳೆ ಕಾಲ ಕಾಲಕ್ಕೆ ಸರಿಯಾಗಿ ಆಗಲಿ ಎಲ್ಲರ ಸೇವೆ ಪ್ರಾಮಾಣಿಕ ಆಗಿರಲಿ ಎಂದು ಎಲ್ಲರ ಪರವಾಗಿ ಭಕ್ತಿಯಿಂದ ನಾಡದೇವತೆ ಚಾಮುಂಡೇಶ್ವರಿ ನಿಮ್ಮ ಚರಣಕಮಲಗಳಿಗೆ ನಮಿಸಿ ನನ್ನ ಅಕ್ಷರ ನಮನ ಅರ್ಪಿಸುವೆ.
ಶ್ರೀಮತಿ ಉಮಾದೇವಿ ಯು ತೋಟಗಿ ಬೈಲಹೊಂಗಲ