🌹ಆಯುಧ ಪೂಜೆ🌹
ದುರ್ಗಾ ದೇವಿ ನಿನ್ನನು ಪೂಜಿಸುವೆ
ಶಾಂತಿ ನೆಮ್ಮದಿ ಸುಖ ಕೊಡೆಂದು ಬೇಡುವೆ
ಜಗದಲಿ ದುಷ್ಟತೆ, ಮೋಸ, ವಂಚನೆ ಕಪಟ ದೂರಾಗಲಿ
ಎಲ್ಲೆಲ್ಲೂ ಒಳ್ಳೆಯ ವಾತಾವರಣ ಸೃಷ್ಟಿ ಯಾಗಲಿ
ತನು, ಮನ ಶೃದ್ಧೆಯಿಂದ ಪ್ರಾರ್ಥಿಸುವೆ ತಾಯಿ ನಿನ್ನಲ್ಲಿ
ಆರಾಧಿಸಿ ಭಕ್ತಿಯಲ್ಲಿ ಆರತಿ ಬೆಳಗುವೆ
ಧ್ಯಾನಿಸಿ ಪೂಜಿಸಿ ಶರಣಾಗಿರುವೆ
ಆಯುಧ ಮುಂದಿಟ್ಟು ನಂದಾದೀಪ ಹಚ್ಚಿ ಕೇವಲ ಒಳ್ಳೆಯ ಕೆಲಸಕ್ಕೆ ಉಪಯೋಗವಾಗಲಿ ಎಂದು ಬೇಡುವೆ.
ನಿನ್ನೊಲುಮೆ ಎಲ್ಲರಿಗೂ ಇರಲಿ ಎಂದು ಸದಾ ಸ್ಮರಿಸುವೆ
ನಿನೋಲಿದರೆ ಎಲ್ಲವು ಸಾಧ್ಯವಮ್ಮ
ಬನ್ನಿ ಕೊಟ್ಟು ಬಂಗಾರದ ಹಾಗಿರೋಣ ಎಲ್ಲರು.
ಶ್ರೀಮತಿ ಉಮಾದೇವಿ. ಯು. ತೋಟಗಿ
ಬೈಲಹೊಂಗಲ..