1 ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ರಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭಾರತಮ್ಮ್…
ಬೆಂಗಳೂರು: ಕೃಷಿ ಇಲಾಖೆಯಿಂದ ನಿಗದಿ ಪಡಿಸಿರುವಂತ ದರದಲ್ಲಿ ಸಸಿಗಳ ಮಾರಾಟ ಸಾಮಾನ್ಯ. ಆದ್ರೇ ಇಂತಹ ಸಸಿಗಳನ್ನು ನೀಡೋದಕ್ಕೆ ಕಮೀಷನ್ ಗೆ ಬೇಡಿಕೆ ಇಟ್ಟು. ಲಂಚದ ಹಣವಾಗಿ 1 ಲಕ್ಷ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಕೃಷಿ ಇಲಾಖೆಯ ಡಿಡಿ ಭಾರತಮ್ಮ ಬಿದ್ದಿದ್ದಾರೆ.
ಮಂಗಳೂರು ಕೃಷಿ ಇಲಾಖೆ ಡಿಡಿಯಾಗಿದ್ದಂತ ಭಾರತಮ್ಮ ಅವರು, ನಿವೃತ್ತ ಆರ್ ಎಫ್‌ಓ ಪರಮೇಶ್ ಎಂಬುವರಿಗೆ 50 ಲಕ್ಷ ಸಸಿ ವಿತರಣೆ ಬಿಲ್ ಪಾಸ್ ಮಾಡೋದಕ್ಕೆ 18 ಪರ್ಸೆಂಟ್ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಈ ವಿಚಾರವಾಗಿ ಪರಮೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮೊದಲ ಕಂತಿನಲ್ಲಿ ಲಂಚದ ಹಣವಾಗಿ 1 ಲಕ್ಷವನ್ನು ಮಂಗಳೂರಿನ ಕೃಷಿ ಇಲಾಖೆಯ ಡಿಡಿ ಕಚೇರಿಯಲ್ಲೇ ಭಾರತಮ್ಮ ಪಡೆಯುತ್ತಿದ್ದ ವೇಳೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದೀಗ ಮಂಗಳೂರು ಕೃಷಿ ಇಲಾಖೆ ಡಿಡಿ ಭಾರತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರೆಸಿದ್ದಾರೆ.