ಮುಖ್ಯ ಮಂತ್ರಿಗಳು ಆಯೋಜಿಸಿರುವ ಶಿಕ್ಷಣ ಇಲಾಖೆಯ (ನಾಳೆ ನಡೆಯಲಿರುವ )ಪ್ರಗತಿ ಪರಿಶೀಲನಾ ಸಭೆಯಲ್ಲಿ ದಸರಾ ರಜೆ ಮುಂದುವರೆಸಲು ಗ್ರಾಮೀಣ ಶಿಕ್ಷಕರ ಸಂಘದ ಆಗ್ರಹ ಮಾಡಿದೆ…
ಹುಬ್ಬಳ್ಳಿ : ಮುಖ್ಯಮಂತ್ರಿಗಳು ದಿನಾಂಕ :- 21-10-2023 ರಂದು. ಗೃಹ ಕಚೇರಿ ಕೃಷ್ಣಾದಲ್ಲಿ ಶಾಲಾ ಶಿಕ್ಷಣ ಮತ್ತು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಿರುವುದು ಸ್ವಾಗತಾರ್ಹ ಸದರಿ ಸಭೆಯಲ್ಲಿ ದಸರಾ ರಜೆ ಮುಂದುವರೆಸುವುದು ಹಾಗೂ ಶಿಕ್ಷಣ ಇಲಾಖೆಯ ಜವಾಬ್ದಾರಿಗಳನ್ನು ಪಂಚಾಯತ್ ರಾಜ್ ಇಲಾಖೆಗೆ ನೀಡುತ್ತಿವ ಕುರಿತು ಈಗಾಲೇ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಲ್ಲಿಸಲಾಗಿರುವ ಮನವಿ ಅನುಸಾರವಾಗಿ ಪರಿಶೀಲನೆ ನಡೆಸಿ ತೀರ್ಮಾನಿಸಿ ಆದೇಶಿಸಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ರಾಜ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ. ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಹಾಗೂ ಸರ್ವ ರಾಜ್ಯ ಜಿಲ್ಲೆ ತಾಲೂಕ ಹಂತದ ಪದಾಧಿಕಾರಿಗಳು ನಾಡಿನ ಸಮಸ್ತ ಗುರು ಬಳಗದ ವತಿಯಿಂದ ಆಗ್ರಹಿಸಿದ್ದಾರೆ..
ಕೋವಿಡ್ ಗೂ ಮೊದಲು ಇದ್ದ ದಸರಾ ರಜೆ ಮಾದರಿಯಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ದಸರಾ ರಜೆಯನ್ನು ವಿಸ್ತರಿಸಬೇಕಾಗಿದೆ..ಶಿಕ್ಷಣ ಸಚಿವ ಮಧು ಬಂಗಾರಪ್ಪ,ಸಿಎಮ್,ಡಿಸಿಎಮ್ ಅವರಿಗೆ ದಸರಾ ರಜೆ ವಿಸ್ತರಣೆ ಮಾಡುವಂತೆ ಪತ್ರ ಮುಖೇನ್ ಹಾಗೂ ಖುದ್ದು ಭೇಟಿಯಾಗಿ ಶಿಕ್ಷಕರು ಮನವಿ ಸಲ್ಲಿಸಿದ್ದಾರೆ.
ಅಕ್ಟೋಬರ್ 31 ರವರಗೆ ರಜೆ ವಿಸ್ತರಣೆ ಮಾಡವುದು ಅವ್ಯಕ್ಯತೆ ಇದೆ..ಎಲ್ಲ ಇಲಾಖೆಗಳ ಹಾಗೆ ಶಿಕ್ಷಣ ಇಲಾಖೆ ಅಲ್ಲ.ರಜೆ ವಿಸ್ತರಣೆ ಮಾಡಿ, ಇಲ್ಲಾವದರೆ ರಜೆ ರಹಿತ ಇಲಾಖೆ ಎಂದು ಶಿಕ್ಷಣ ಇಲಾಖೆಯನ್ನು ಘೋಷಣೆ ಮಾಡುವಂತೆ ಶಿಕ್ಷಕರು ಪಬ್ಲಿಕ್ ಟುಟೆ ಮುಖಾಂತರ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ..