ಕಿತ್ತೂರು ಸಂಸ್ಥಾನ ಕುರಿತು ಮುಂದಿನ ಸಂಶೋಧನೆಗಳು’ ವಿಷಯದ ಮೇಲೆ ವಿದ್ವಾಂಸರಿಂದ ಸಂವಾದ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಆಹ್ವಾನ ಕುರಿತು
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠವು ಕಿತ್ತೂರು ಉತ್ಸವ-೨೦೨೩ರ ಅಂಗವಾಗಿ ವಿದ್ವಾಂಸರು ಹಾಗೂ ಸಂಶೋಧಕರೊಡನೆ ‘ಕಿತ್ತೂರು ಸಂಸ್ಥಾನ ಕುರಿತು ಮುಂದಿನ ಸಂಶೋಧನೆಗಳು’ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ದಿನಾಂಕ : ೨೦-೧೦-೨೦೨೩ರಂದು ಮುಂಜಾನೆ ೧೦.೩೦ಕ್ಕೆ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪಂಪಮಹಾಕವಿ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸದರಿ ಕಾರ್ಯಕ್ರಮವನ್ನು ಕುಲಪತಿಗಳಾದ ಪ್ರೊ. ವಿ. ಎಫ್. ನಾಗಣ್ಣವರ ಉದ್ಘಾಟಿಸಲಿದ್ದು, ವಿಶ್ವವಿದ್ಯಾಲಯದ ಕುಲಸಚಿವರುಗಳಾದ ಶ್ರೀಮತಿ. ರಾಜಶ್ರೀ ಜೈನಾಪೂರ, ಪ್ರೊ. ರವೀಂದ್ರನಾಥ ಎನ್. ಕದಂ, ಹಣಕಾಸು ಅಧಿಕಾರಿಗಳಾದ ಶ್ರೀ. ಬಿ. ಡಿ. ಕಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಂವಾದದಲ್ಲಿ ಡಾ. ಸರಜೂ ಕಾಟ್ಕರ್, ಪ್ರೊ. ಆರ್. ಎಂ. ಷಡಕ್ಷರಯ್ಯ, ಶ್ರೀ. ಯ. ರು. ಪಾಟೀಲ, ಶ್ರೀ. ಅರವಿಂದ ಯಾಳಗಿ, ಡಾ. ವೀರಣ್ಣ ಪತ್ತಾರ, ಡಾ. ವಾಸುದೇವ, ಶ್ರೀಮತಿ. ವೈ. ಮಂಜುಳಾ, ಶ್ರೀ. ಮಹೇಶ ವಿಜಾಪುರ, ಡಾ. ಶೋಭಾ ನಾಯಕ, ಡಾ. ರವಿ ದಳವಾಯಿ ಅವರು ಭಾಗವಹಿಸುವರು. ಸಂವಾದದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ವಹಿಸಲಿರುವರು. ಕಾರ್ಯಕ್ರಮವನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಹೇಶ ಗಾಜಪ್ಪನವರ ನಡೆಸಿಕೊಡಲಿರುವರು. ಆಸಕ್ತ ವಿದ್ವಾಂಸರು, ಸಂಶೋಧಕರು, ಕಿತ್ತೂರು ಸಂಸ್ಥಾನದ ಇತಿಹಾಸ ಜಿಜ್ಞಾಸುಗಳು, ಅಧಿಕಾರಿ ವರ್ಗದವರು, ಸಂಘ ಸಂಸ್ಥೆಗಳು ಹಾಗೂ ಮಠಮಾನ್ಯಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದೆ.