🌹 ದೀಪ ಹಚ್ಚೋನ 🌹
ನವರಾತ್ರಿಯ ಶುಭ ಗಳಿಗೆಯಲ್ಲಿ
ನವಧಾತ್ರಿಯರಿಗೆ ದೀಪ ಹಚ್ಚೋನ ಬನ್ನಿ
ವರುಷ ವರುಷ ಬರೋ ಶರನ್ನವರಾತ್ರಿಯ ನವದುರ್ಗೆಯರ ಮುಡಿಗೆ ಪುಷ್ಪ ಅರ್ಪಿಸಿ
ರೇಷ್ಮೆ ಸೀರೆ ಕುಪ್ಪಸ ತೊಡಿಸಿ ಹಣೆಗೆ ಕುಂಕುಮ ಹಚ್ಚಿ ಕೈಗೆ ಬಳೆ ಹಾಕಿ
ಶೃಂಗಾರ ಮಾಡೋಣ ಬನ್ನಿ
ಅಂದದಿ ಕಾಣೋ ಚಂದದ ದೇವಿಗೆ
ಧೂಪ ದೀಪ ಗಂಧದಿಂದ ದೃಷ್ಟಿ ತೆಗೆಯೋಣ ಬನ್ನಿ
ಅಮ್ಮನವರ ಪಲ್ಲಕ್ಕಿ ಉತ್ಸವ ಮಾಡೋಣ ಬನ್ನಿ
ದೀಪೋತ್ಸವ ಮಾಡಿ ದೀಪದ ಬೆಳಕಲ್ಲಿ ದೇವಿಯನ್ನು ಕಾನೋಣ ಬನ್ನಿ
ದೇಶ ಸುಭಿಕ್ಷವಾಗಿರಲಿ ವೈರಿಗಳ ಕಣ್ಣು ಬೀಳದಿರಲಿ
ರೈತ, ಯೋಧ, ವೈದ್ಯ, ಗುರು
ಇನ್ನೆಲ್ಲರಿಗು ಒಳ್ಳೆಯದು ಮಾಡಿರೆಂದು ಪ್ರಾರ್ಥಿಸೋಣ ಬನ್ನಿ
ಇದುವರೆಗೂ ನಮ್ಮ ಕಾಪಾಡಿದ ದೇವಿಯರಿಗೆ ಕೃತಜ್ಞತಾ ಭಾವದ
ಭಕ್ತಿಯ ನಮಸ್ಕಾರ ಸಲ್ಲಿಸೋಣ ಬನ್ನಿ
ಬೇರೆ ದೇಶಗಳಿಗಿಂತ ಭಾರತ ಮಾತೆಯ ಮಡಿಲಲ್ಲಿ ಹುಟ್ಟಿದ ನಾವೆಲ್ಲ ಸುರಕ್ಷಿತರೂ ಎಂದು
ತುಪ್ಪದ ದೀಪ ಬೆಳಗಿ ಆರಾಧಿಸೋಣ ಬನ್ನಿ.
ದುಷ್ಟ ಗುಣಗಳನ್ನು ತೊರೆದು ಸೌಹಾರ್ದ, ಸಹಕಾರದಿಂದ ಬದುಕಿ
ಬಾಳುತ್ತೆವೆ ಎಂದು ಪ್ರತಿಜ್ಞೆ ಮಾಡೋಣ ಬನ್ನಿ.
ಶ್ರೀಮತಿ ಉಮಾದೇವಿ ಯು ತೋಟ ಗಿ ಬೈಲಹೊಂಗಲ..