ಸವದತ್ತಿ ರಾಮದುರ್ಗ ಮತ್ತು ಬೈಲಹೊಂಗಲ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳೆ ಮುಖ್ಯ ಶಿಕ್ಷಕರಿಗೆ ಕಾರ್ಯಾಗಾರ
ಯರಗಟ್ಟಿ ಃ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಣ್ಣೂರು ಬೆಳಗಾವಿ ಇವರು ಸವದತ್ತಿ ರಾಮದುರ್ಗ ,ಮತ್ತು ಬೈಲಹೊಂಗಲ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಯರಗಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ತರಬೇತಿಯ ಪ್ರಾರಂಭದಲ್ಲಿ ಡೈಟ್ ಪ್ರಾಚಾರ್ಯರಾದ ಎಸ್.ಡಿ.ಗಾಂಜಿ ಮಾತನಾಡಿ “ಶೈಕ್ಷಣಿಕ ಗುಣಮಟ್ಟ ಹೆಚ್ಚುವಲ್ಲಿ ವಿಷಯಾಧಾರಿತ ಬೋಧನೆ ಮತ್ತು ಚಟುವಟಿಕೆಗಳ ಪಾತ್ರದ ಮಹತ್ವ” ಕುರಿತು ಮಾತನಾಡಿದರು. ನಂತರದಲ್ಲಿ ಉಪನ್ಯಾಸಕಿಯವರಾದ ಶ್ರೀಮತಿ ಬಿ.ಬಿ.ದಾಸೋಗ ಶಾಲೆಗಳಿಗೆ ಅನುಷ್ಠಾನ ಅಧಿಕಾರಿಗಳು ಭೇಟಿಯ ಕುರಿತಂತೆ ಉದಾಹರಣೆ ಸಹಿತ ಮಾಹಿತಿಯನ್ನು ನೀಡುತ್ತ ಸಾಧಕ ಬಾಧಕಗಳ ಕುರಿತು ಸವಿವರವಾಗಿ ಮಾಹಿತಿಯನ್ನು ನೀಡಿದರು. ಬೇಟಿಯ ನಂತರ ಹಿಮ್ಮಾಹಿತಿ ನೀಡುವಾಗ ಅನುಸರಿಸುವ ಕ್ರಮಗಳು ಕುರಿತು ತಿಳಿಸಿದರು.
ನಂತರ ಹಿರಿಯ ಉಪನ್ಯಾಸಕರಾದ ಆರ್.ಕೆ.ಆಂಜನೇಯ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆ ಸುಧಾರಣೆಗೆ ಕೈಗೊಂಡ ಕ್ರಮಗಳು/ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕ್ರಿಯಾ ಯೋಜನೆ (೮.೯.೧೦ ತರಗತಿಗಳು) ಕುರಿತು ಮಾಹಿತಿಯನ್ನು ಸಮಗ್ರವಾಗಿ ನೀಡಿದರು. ನಂತರ ವಾರ್ಷಿಕ ಪಾಠ ಹಂಚಿಕೆ/ಸಾಮರ್ಥ್ಯಗಳ ಪಟ್ಟಿ ಕುರಿತಂತೆ ಉಪನ್ಯಾಸಕರಾದ ಬಿ.ಎಚ್.ಕುಸುಗಲ್ ವಿವರಣೆ ನೀಡಿದರು.
ಎನ್.ಎಂ.ಎಂ.ಎಸ್ ಮತ್ತು ವೀರಗಾಥಾ ಮಾಹಿತಿಯನ್ನುಉಪನ್ಯಾಸಕಿ ಶ್ರೀಮತಿ ಎನ್.ವ್ಹಿ.ನಾವಿ ನೀಡಿದರು.ಸಂಭ್ರಮ ಶನಿವಾರ.ಮೌಲ್ಯಾಂಕನ.ಎಸ್.ಎಫ್ ೧ ಮತ್ತು ೨ ಹಾಗೂ ಎಸ್.ಎ.೧ ಇವುಗಳ ಜೊತೆಗೆ ವೃತ್ತಿ ಮಾರ್ಗದರ್ಶನ ಕುರಿತಂತೆ ಉಪನ್ಯಾಸಕರಾದ ಪಿ.ಆರ್.ಪಾಟೀಲ. ವಿವರಣೆ ನೀಡಿದರು.ಇನ್ಸ್ಪೈರ್ ಅವಾರ್ಡ ಕುರಿತಂತೆ ಸಮಗ್ರ ಮಾಹಿತಯನ್ನು ಶ್ರೀಮತಿ ಎಮ್.ಎಪ್.ಪಾಟೀಲ ನೀಡಿದರು.
ಶೈಕ್ಷಣಿಕ ಸ್ಪಂದನದ ಮಹತ್ವ ಅದನ್ನು ಜರುಗಿಸುವ ಕುರಿತು ಮಾಹಿತಿಯನ್ನು ಉಪನ್ಯಾಸಕರಾದ ಆರ್.ಎಸ್.ಭಂಡಾರಿ ನೀಡಿದರು.ಇದೇ ಸಂದರ್ಭದಲ್ಲಿ ಯರಗಟ್ಟಿ ವಲಯದ ಎಸ್.ಎಸ್.ಎಲ್.ಸಿ ವಿಕಲಚೇತನ ಮಕ್ಕಳ ಫಲಿತಾಂಶದ ಕುರಿತು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ ಮಾಹಿತಿಯನ್ನು ಹಂಚಿಕೊಂಡರು.ಟ್ಯಾಲ್ಪ.ಇ ತ್ಯಾಜ್ಯ ನಿರ್ವಹಣೆ. ಎಸ್.ಡಿ.ಎಂ.ಸಿ ಮುಂತಾದ ವಿಷಯಗಳ ಜೊತೆಗೆ ಇಲಾಖೆಯ ಹತ್ತು ಅಂಶ/೨೦ ಅಂಶ/ಆರ್.ಇ.ಎಸ್.ನ ೫ ಅಂಶಗಳು ಕುರಿತು ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು ಉಪನ್ಯಾಸಕಿ ಎಚ್.ಡಿ.ಧರ್ಮಣ್ಣವರ.ಮಂಜುಳಾ ಕೊರಬು ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಮನೋಹರ ಚೀಲದ.ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ. ರಾಮದುರ್ಗ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶೀಲವಂತಮಠ, ಬೈಲಹೊಂಗಲ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಕಸಾಳೆ ಸೇರಿದಂತೆ ಸವದತ್ತಿ ರಾಮದುರ್ಗ ಬೈಲಹೊಂಗಲ ತಾಲೂಕುಗಳ ಸರಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಎಚ್.ಡಿ.ಧರ್ಮಣ್ಣವರ ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಿಸಿದರು. ಯರಗಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿ ಪಿ. ಎಸ್ ಬಡಿಗೇರ ನಿರೂಪಿಸಿದರು. ಕೊನೆಗೆ ಬಿ.ಎಚ್.ಕುಸುಗಲ್ ವಂದಿಸಿದರು.