ಬಿಜೆವ್ಹಿಎಸ್ ರಾಜ್ಯ ಸಮಿತಿಗೆ
ಶಿಕ್ಷಕ ಲಕ್ಕಮ್ಮನವರ ಆಯ್ಕೆ
ಸವದತ್ತಿ : ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜೆವ್ಹಿಎಸ್) ರಾಜ್ಯ ಸಮಿತಿ ಸದಸ್ಯರಾಗಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿಕ್ಷಕ ಎಲ್. ಐ. ಲಕ್ಕಮ್ಮನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ಜರುಗಿದ ಬಿ.ಜೆ.ವ್ಹಿ.ಎಸ್. ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆದಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಶುಭಂಕರ ಚಕ್ರವರ್ತಿ ತಿಳಿಸಿದ್ದಾರೆ.
ಶಿಕ್ಷಕ ಎಲ್. ಐ. ಲಕ್ಕಮ್ಮನವರ ಅವರು ಕಳೆದ ಸುಮಾರು 25 ವರ್ಷಗಳಿಂದ ಬಿ.ಜೆ.ವ್ಹಿ.ಎಸ್.ದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಸಂಪೂರ್ಣ ಸಾಕ್ಷರತಾ ಆಂದೋಲನ,
ಮುಂದುವರಿಕೆ ಶಿಕ್ಷಣ, ಕನ್ನಡ ನಾಡು ಸಾಕ್ಷರ ನಾಡು ಯೋಜನೆಗಳಲ್ಲಿ ಕ್ಷೇತ್ರ ಸಂಯೋಜಕರಾಗಿ, ತಾಲ್ಲೂಕು ಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ನಗರದ
ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅಧ್ಯಕ್ಷರಾಗಿ ಹತ್ತು ಹಲವು ಶೈಕ್ಷಣಿಕ ಹಾಗೂ ವೈಜ್ಞಾನಿಕ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಚಿಣ್ಣರ ಮೇಳ, ಮಕ್ಕಳ ಹಬ್ಬ, ವಿಜ್ಞಾನ ಹಬ್ಬ, ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಬಾಲ್ಯ ವಿವಾಹ, ಮೂಢನಂಬಿಕೆ ನಿವಾರಣೆಗಾಗಿ ಕಲಾಜಾಥಾ ಮೂಲಕ ಇಡೀ
ಜಿಲ್ಲೆಯಾದ್ಯಂತ ಕೆಲಸ ಮಾಡಿರುವ ಇವರ ಆಯ್ಕೆಯನ್ನು ಸವದತ್ತಿ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ ಕುರಿ. ಗೌರವಾಧ್ಯಕ್ಷರಾದ ಎಂ. ಎಸ್.ಹೊಂಗಲ.ಜಿಲ್ಲಾ ಉಪಾಧ್ಯಕ್ಷ ರಾದ ಮಲ್ಲಿಕಾರ್ಜುನ ಎಫ್ ಸಿದ್ದನಗೌಡರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಣ ವೈ. ಬಿ ಕಡಕೋಳ.ಸಂಗಮೇಶ ಹಾದಿಮನಿ.ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಂ. ವೈ ಮೆಣಸಿನಕಾಯಿ.ಪರಸಗಡ ತಾಲೂಕು ಸಹಕಾರಿ ಪತ್ತಿನ ಸಂಘದ ಅಧ್ಯಕ್ಷರಾದ ಮನೋಹರ ಚೀಲದ. ಶಿವಾನಂದ.ಮಿಕಲಿ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆನಂದಕುಮಾರ ಮೂಗಬಸವ. ದೈಹಿಕ ಶಿಕ್ಷಕರಾದ ಭವಾನಿ ಖೊಂದುನಾಯ್ಕ. ವೀರಣ್ಣ ಕೇಳಿ. ಇತರರು
ಸ್ವಾಗತಿಸಿದ್ದಾರೆ.