ಬಿ ಆರ್ ಪಿ, ಬಸವರಾಜ ಎಮ್ ಯರಗುಪ್ಪಿ ಅವರಿಗೆ ಪ್ರಧಾನಿ ಮೋದಿ ಅವರಿಂದ ಅಭಿನಂದನಾ ಪತ್ರ.
ಲಕ್ಷ್ಮೇಶ್ವರ ಸಮೀಪದ ರಾಮಗೇರಿ ಗ್ರಾಮದ ನಿವಾಸಿ ಮತ್ತು ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಬಸವರಾಜ ಎಮ್ ಯರಗುಪ್ಪಿ ಅವರಿಗೆ ಪ್ರಧಾನಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಂದ “ಪರೀಕ್ಷಾ ಪೇ ಚರ್ಚಾ” ಸ್ಪರ್ಧೆಯನ್ನು ಆನ್ಲೈನ್ ಮೂಲಕ ಆಹ್ವಾನದಲ್ಲಿ ಮಕ್ಕಳ ಪರೀಕ್ಷಾ ಪೂರ್ವ ತಯಾರಿ, ಅವರು ಪರೀಕ್ಷೆಗೆ ಹೇಗೆ ತಯಾರಿ ಆಗಬೇಕು? ಎಂದು ಪ್ರಬಂಧ ಮಂಡನೆ ಮೆಚ್ಚಿ ಅಭಿನಂದನಾ ಪ್ರಮಾಣ ಪತ್ರವನ್ನು ಕಳುಹಿಸಿದ್ದಾರೆ.
ಪರೀಕ್ಷಾ ಪೇ ಚರ್ಚಾ ಯುವಜನರಿಗೆ ಒತ್ತಡ ಮುಕ್ತ ವಾತಾವರಣವನ್ನು ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪರೀಕ್ಷಾ ಯೋಧರು(ಎಕ್ಸಾಮ್ ವಾರಿಯರ್ಸ್) ಎಂಬ ಬೃಹತ್ ಆಂದೋಲನದ ಭಾಗವಾಗಿ ಮೊದಲು ಪರೀಕ್ಷೆ ಎದುರಿಸುವ ಮಕ್ಕಳು, ಮಾನಸಿಕವಾಗಿ ಪೂರ್ವ ಸಿದ್ಧತೆಯೊಂದಿಗೆ, ತನ್ನ ತಂದೆ ತಾಯಿ ಗುರುಗಳ ಮಾರ್ಗದರ್ಶನದಲ್ಲಿ ಸದಾ ಕಾಲ ಅನ್ವಯಿಕ ಅಭ್ಯಾಸಶೀಲನಾಗಿರಬೇಕು. ತನ್ನ ಪಾಲಕರಿಂದ ಯಾವುದೇ ಪರೀಕ್ಷಾ ಭಯದ ವಾತಾವರಣದಿಂದ ಮುಕ್ತವಾಗಿಸಬೇಕು. ಇಂದಿನ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನದ ಬಳಕೆ, ಶಿಕ್ಷಕರ ನಾವೀನ್ಯತೆ ಬೋಧನಾ ವಿಧಾನಗಳ ಕುರಿತು ಪ್ರಬಂಧದಲ್ಲಿ ಮಂಡಿಸಲಾಗಿತ್ತು.
ಇಂದು, ಬದಲಾಗುತ್ತಿರುವ ಕಾಲದೊಂದಿಗೆ, ಕ್ರೀಡೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ಗಳು ಸೇರಿದಂತೆ ಅನೇಕ ಹೊಸ ಅವಕಾಶಗಳು ಯುವಜನರಿಗೆ ಲಭ್ಯವಿವೆ. ಅವುಗಳು ಅನಂತ ಸಾಧ್ಯತೆಗಳನ್ನು ಹೊಂದಿವೆ. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಸಾಮರ್ಥ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ಮೂಲಕ ತನಗಾಗಿ ಮತ್ತು ದೇಶಕ್ಕಾಗಿ ಕನಸು ಕಾಣಲು ಮತ್ತು ಅದನ್ನು ನನಸಾಗಿಸಲು
ಪ್ರೇರೇಪಿಸುವಲ್ಲಿ ಶಿಕ್ಷಕರ ಅಮೂಲ್ಯವಾದ ಮಾರ್ಗದರ್ಶನವು ನಿರ್ಣಾಯಕವಾಗಿದೆ.ನಮ್ಮ ಪ್ರತಿಭಾವಂತ ಯುವಜನತೆಗೆ 2047ರ ದೇಶದ ಸ್ವಾತಂತ್ರ್ಯದ ಶತಮಾನೋತ್ಸವದವರೆಗೆ
ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ವಿಶೇಷ ಅವಕಾಶವಿದೆ. ನಮ್ಮ ಯುವಜನರು ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಪ್ರಗತಿಯೊಂದಿಗೆ ತಮ್ಮ ಗುರಿಗಳನ್ನು ಜೋಡಿಸುವ ಮೂಲಕ ದೇಶ ಮತ್ತು ಸಮಾಜಕ್ಕಾಗಿ ತುಂಬು ಹೃದಯದಿಂದ ಕೆಲಸ ಮಾಡುತ್ತಾರೆ ಎಂದು ಪ್ರಬಂಧದಲ್ಲಿ ವಿಶ್ಲೇಷಣೆ ಮಾಡಲಾಗಿತ್ತು.
ನಿಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು, ನಿಮ್ಮ ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು ಎಂದು ಮೋದಿ ಅವರು ತಮ್ಮ ಪ್ರಶಂಸನೀಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ಕ ರಾ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಹರ್ಲಾಪುರ ಕಾರ್ಯದರ್ಶಿ ಚಂದ್ರು ನೇಕಾರ ಜಿಲ್ಲಾ ಶಿಕ್ಷಕರ ಸಂಘ ಗದಗ ನಾಮ ನಿರ್ದೇಶಿತ ಉಪಾಧ್ಯಕ್ಷ ಎಂ ಎಸ್ ಹಿರೇಮಠ ಎನ್ ಪಿ ಎಸ್ ಸಂಘದ ಅಧ್ಯಕ್ಷ ಫಕ್ಕೀರೇಶ ತಳವಾರ ಅಭಿನಂದನೆಗಳನ್ನು ತಿಳಿಸಿದ್ದಾರೆ.