ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ.
ಹುಬ್ಬಳ್ಳಿಯ ಸಿದ್ದರಾಮೇಶ್ವರ ನಗರದ ಹತ್ತಿರ ಟಿಂಬರ್ ಯಾರ್ಡ್ ಉಣಕಲ್ ನಲ್ಲಿ ಇಂದು ಎಸ್. ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ , ನಮ್ಮ ಫೌಂಡೇಶನ್ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಬಡವರ ದೀನ ದಲಿತರ ಸೇವೆಯನ್ನು ಮಾಡುತ್ತ ಬರುತ್ತಿದ್ದೇವೆ ಇದಕ್ಕೆಲ್ಲ ಪ್ರಮುಖ ಪ್ರೇರಣೆ ಎಂದರೆ ನಮ್ಮ ತಂದೆಯವರಾದ ಜಗದೀಶ್ ಶೆಟ್ಟರ್ ಅವರ ಮಾರ್ಗದರ್ಶನ ಎಂದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಶ್ರೀಧರ್ ದಂಡಪ್ಪನವರ್, ಫೌಂಡೇಶನ್ ಸಂಯೋಜಕ ಪರಮ ಕಿತ್ಲಿ, ವೈದ್ಯರಾದ ಕಾಮೇಶ್ ಜಾಲಿಗರ್, ಉಣುಕಲ್ ಹಿರಿಯರಾದ ಶಿವಪ್ಪ ನಾಗೋಜಿ, ನಿಂಗಪ್ಪ ಸೌದತ್ತಿ, ಅಪ್ಪಣ್ಣ ಮುಳ್ಳಳ್ಳಿ, ಶಾನುಖಾನ್, ನಂದೀಶ್ ವಡಟ್ಟಿ, ವಿಜಯ್ ದುಂಡೂರ್, ವಿನಾಯಕ ಹುಲಿಹಳ್ಳಿ, ವಿನೋದ್ ಬಂಕಾಪುರ, ಸಮೀರ್ ಕಾಟಾಪುರ, ಇನ್ನಿತರ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.