ಶಾಲಾಡಳಿತದ ಜವಾಬ್ದಾರಿಯನ್ನು ಆರ್ ಡಿಪಿಆರ್ ಗೆ ವಹಿಸುತ್ತಿರುವ ಕ್ರಮಕ್ಕೆ ಆಕ್ಷೇಪಣೆ ನೀಡಿ ಸರ್ಕಾರಕ್ಕೆ ಪತ್ರ ಬರೆದ ಗ್ರಾಮೀಣ ಶಿಕ್ಷಕರ ಸಂಘ….
ದಿನಾಂಕ 06-10-2023 ರಂದು ಆಯುಕ್ತರು ಶಾಲಾ ಶಿಕ್ಷಣ ಇಲಾಖೆರವರು ಹೊರಡಿಸಿದ ಜ್ಞಾಪನದ ಪ್ರಕಾರ ಶಾಲಾಡಳಿತವನ್ನು ಆರ್ ಡಿಪಿಆರ್ ಗೆ ವಹಿಸಿದ್ದು ಕೆಲವೊಂದು ಅಂಶಗಳ ಬಗ್ಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತ. 2023-2024 ರ ಆಯ
ವ್ಯಯದಲ್ಲಿ ಘೋಷಿಸಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತವಾಗಿರು ಇಪ್ಪತ್ತಾರು ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸಿ ವಿಕೇಂದ್ರೀಕರಣಗೊಳಿಸುತ್ತಿರುವ ಕಾರ್ಯ ಚಟುವಟಿಕೆಗಳು ಉನ್ನತ ಅಧಿಕಾರಿಗಳ ಹಂತದಲ್ಲಿ ಚಿಂತನ ನಡೆದಿದೆ.
ಆದರೆ ಈಗಾಗಲೆ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸಂವಿಧಾನಬದ್ಧ ಸಂಸ್ಥೆಯಾಗಿ ಪಾಲಕರ ಪರಿಷತ್ ನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೀಸಲಾತಿ ಅಡಿಯಲ್ಲಿ ಎಸ್ ಡಿಎಂಸಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಪ್ರಧಾನಗುರುಗಳು, ಕ್ಲಸ್ಟರ್ ಸಮನ್ವಯಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿಗಳು ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು , ವಿಷಯ ಪರಿವೀಕ್ಷಕರು, ಉಪಸಮನ್ವಯಾಧಿಕಾರಿಗಳು, ಶಿಕ್ಷಣಾಧಿಕಾರಿಗಳು,ಹಿರಿಯ ಉಪನ್ಯಾಸಕರು, ಕಿರಿಯ ಉಪನ್ಯಾಸಕರು ಡಯಟ್ ಪ್ರಾಚಾರ್ಯರು, ಉಪನಿರ್ದೇಶಕರು ಆಡಳಿತ ಅಭಿವೃದ್ಧಿ ಮೂರು ನಿರ್ದೇಶಕರು ಸಹನಿರ್ದೇಶಕರು ರಾಜ್ಯ ವಿಭಾಗೀಯ ಆಯುಕ್ತರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಯೋಜನಾ ನಿರ್ದೇಶಕರು ಗುಣಮಟ್ಟ ಮೌಲ್ಯಮಾಪನ ಮಂಡಳಿ ನಮ್ಮದೇ ಇಲಾಖೆಯ ನಮ್ಮ ಸಚಿವರು ಹೀಗೆ ಎಲ್ಲ ಹಂತದಲ್ಲೂ ಮೇಲುಸ್ತುವಾರಿ ನೋಡಲ್ ಅನುಷ್ಠಾನ ಅಧಿಕಾರಿಗಳಿದ್ದು ಅವರು ಶೈಕ್ಷಣಿಕ ಚಟುವಟಿಕೆಗಳ ವೀಕ್ಷಣೆ ,ಪರಿಶೀಲನೆ ನಡೆಯುತ್ತಿದೆ. ಆದರೆ ಇವಾಗ ಅದನ್ನು ಮತ್ತೆ ಆರ್ ಡಿ ಪಿಆರ್ ಇಲಾಖೆಗೆ ವಹಿಸುವ ಅವಶ್ಯಕತೆ ಇಲ್ಲ ಆದ್ದರಿಂದ ಈ ಶೈಕ್ಷಣಿಕ ವಿಷಯ ಹೊರತುಪಡಿಸಿ ಉಳಿದಂತೆ ಶಾಲೆಗೆ ಕುಡಿಯುವ ನೀರು,ಕಂಪೌಂಡ್,ವಿದ್ಯುತ್, ಆಟದ ಮೈದಾನ,ಕೊಠಡಿಗಳು ಸೇರಿದಂತೆ ಭೌತಿಕ ಸೌಲಭ್ಯಗಳು, ಪಂಚಾಯತ ವತಿಯಿಂದ ಅತಿಥಿ ಶಿಕ್ಷಕರ ನೇಮಕ ಇವುಗಳ ಜವಾಬ್ದಾರಿ ವಹಿಸಲಿ ಇದರಿಂದ ಶಾಲೆಗಳ ಭೌತಿಕ ಸೌಲಭ್ಯಗಳು ಈಡೇರಬಹುದು.
ಆದ್ದರಿಂದ ಶಿಕ್ಷಕರ ಸಂಘಟನೆಗಳು, ಜನನಾಯಕರು ಹಾಗೂ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಈ ಕುರಿತು ಸಾಧಕ ಬಾಧಕಗಳನ್ನು ಚರ್ಚಿಸಿ ಶಿಕ್ಷಕರ ಮೇಲೆ ಅನವಶ್ಯಕ ಹೊರೆ ಅಥವಾ ಮೇಲುಸ್ತುವಾರಿ ವಹಿಸದೇ ಮೂಲಭೂತ ಸೌಕರ್ಯಗಳ ಜವಾಬ್ದಾರಿಯನ್ನು ಆರ್ ಡಿಪಿಆರ್ ಗೆ ವಹಿಸಬಹುದು. ಶಿಕ್ಷಕರ ಹಾಜರಾತಿ,ತಪಾಸಣೆಗಳಿಗಾಗಿ ನಮ್ಮ ಇಲಾಖೆಯಿಂದಲೇ ಎಸ್ ಡಿಎಂಸಿ,ಇಷ್ಟೊಂದು ಪ್ರಮಾಣದಲ್ಲಿ ಶೈಕ್ಷಣಿಕ ಮೇಲ್ವಿಚಾರಕರಿದ್ದಾಗ ಮತ್ತೊಂದು ಮೇಲ್ವಿಚಾರಣೆ ಅವಶ್ಯಕತೆ ಇರುವುದಿಲ್ಲ.
ಈಗಾಗಲೇ ಕಂದಾಯ ಇಲಾಖೆಯ ಹಲವು ಜವಾಬ್ದಾರಿಗಳನ್ನು ಪಂಚಾಯತ್ ರಾಜ್ ಇಲಾಖೆಗೆ ವಹಿಸಿದ್ದು ಇದು ಹೆಚ್ಚುವರಿ ಹೊರೆ ಆಗುತ್ತದೆ ಎಂಬುದು ನಮ್ಮ ಭಾವನೆ ಆದ್ದರಿಂದ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಿ.ರಾಜ್ಯ ಘಟಕ ಹುಬ್ಬಳ್ಳಿ ಇದರ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ.ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ.ಕಾರ್ಯಾಧ್ಯಕ್ಷರುಗಳಾದ ಶರಣಪ್ಪಗೌಡ್ರ ಆರ್.ಕೆ.ಎಮ್.ವಿ.ಕುಸುಮಾ.ಶಿಸ್ತು ಸಮಿತಿ ಸಲಹಾ ಸಮಿತಿ ಹೋರಾಟ ಸಮಿತಿ ಪ್ರಚಾರ ಸಮಿತಿಗಳ ಅಧ್ಯಕ್ಷರುಗಳಾದ ಹನುಮಂತಪ್ಪ ಮೇಟಿ ಗೋವಿಂದ ಜುಜಾರೆ.ಸಿದ್ದಣ್ಣ ಉಕ್ಕಲಿ.ಡಾ.ಆರ್.ನಾರಾಯಣಸ್ವಾಮಿ ಮುಂತಾದವರು ನಾಡಿನ ಸಮಸ್ತ ಶಿಕ್ಷಕರ ವತಿಯಿಂದ ಸರ್ಕಾರಕ್ಕೆ ಆಗ್ರಹಿಸಿ ವಿ.ಪ.ಸಭಾಪತಿಗಳಿಗೆ ಮುಖ್ಯ ಮಂತ್ರಿಗಳಿಗೆ ಉಪ ಮುಖ್ಯ ಮಂತ್ರಿಗಳಿಗೆ ವಿ.ಪ.ಸ. ರವರಿಗೆ ಶಿಕ್ಷಣ ಸಚಿವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಿಗೆ ಪತ್ರ ಬರೆದು ಆಗ್ರಹಿದಿದ್ದಾರೆ..
ನಿಯೋಗದಲ್ಲಿ ರಾಜ್ಯಾಧ್ಯಕ್ಷ ಅಶೋಕ.ಸಜ್ಜನ.ಸಲಹಾ ಸಮಿತಿ ಅಧ್ಯಕ್ಷರಾದ ಗೋವಿಂದ ಜುಜಾರೆ..ಸದಸ್ಯ ಡಿ.ಟಿ.ಭಂಡಿವಡ್ಡರ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾದ ಎಮ್.ಬಿ.ಯಾದುಸಾಬನವರ.ಎ.ಆಯ್.ಮುಳಗುಂದ ಮುಂತಾದವರು ಜಗದೀಶ ಶೆಟ್ಟರ ಅವರ ಭೇಟಿ ನೀಡಿದ ನಿಯೋಗದಲ್ಲಿ ಇದ್ದರು..