ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಮಂತ್ರಿಗಳು ಇವತ್ತು ಚಿತ್ರದುರ್ಗದ ಹಿರಿಯೂರನಲ್ಲಿ ಮಾದ್ಯಮವದರೊಂದಿಗೆ ಮಾತನಾಡಿದ್ದಾರೆ. ಇತ್ತಿಚೆಗೆ ಏಳನೇ ವೇತನ ಆಯೋಗದ ಅದ್ಯಕ್ಷರು ಸಿಎಮ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು..
ಈ ಕುರಿತಂತೆ ಮಾತನಾಡಿದ ಸಿಎಮ್ ಸಿದ್ದರಾಮಯ್ಯ ಅವರು , ವೇತನ ಆಯೋಗದ ಅದ್ಯಕ್ಷಕರ ಜೊತೆ ಮಾತನಾಡಿದ್ದೇನೆ, ಅವರು ವರದಿ ಕೊಟ್ಟ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೆನೆ ಎಂದರು. ವೇತನ ಆಯೋಗದವರು ಯಾವಾಗ ವರದಿ ನೀಡುತ್ತಾರೆ ನೋಡೊಣ ಎಂದರು…
ಇದೇ ಸಂದರ್ಭದಲ್ಲಿ ಹಣಕಾಸಿನ ತೊಂದರೆ ಇದೇಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರೆಂಟಿ ಯೋಜನೆ ಜಾರಿ ಮಾಡಲು ಹಾಗೂ ರಾಜ್ಯದ ಅಭಿವೃದ್ಧಿ ಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಇಲ್ಲವೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು..
ಇನ್ನೊಂದೆಡೆ ವೇತನ ಆಯೋಗ ತನ್ನ ವರದಿ ಸರ್ಕಾರಕ್ಕೆ ಸಲ್ಲಿಸಲು ಮತ್ತೆ ಆರು ತಿಂಗಳು ಸಮಯವಕಾಶ ಕೇಳಿದೆ ಎಂದು ಹೇಳಲಾಗುತ್ತಿದೆ.. ವೇತನ ಆಯೋಗದ ಅಧ್ಯಕ್ಷಕರು ಸಿಎಮ್ ಅವರ ಜೊತೆ ಚರ್ಚೆ ಮಾಡಿರುವ ವಿಷಯವನ್ನು ಮಾದ್ಯವದರ ಜೊತೆ ಹಂಚಿಕೊಂಡಿಲ್ಲ..
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಆಯೋಗದ ಮದ್ಯಂತರ ಪರಿಹಾರ ನೀಡಲಾಗುತ್ತಿದೆ. ಆದಷ್ಟು ಬೇಗ ರಾಜ್ಯ ಸರ್ಕಾರ ಏಳನೇ ವೇತನ ಜಾರಿ ಮಾಡಲಿ ಎಂಬುದು ನೌಕರರ ಆಶಯವಾಗಿದೆ..