ಟೀಂ ಚಿರನೂತನ ಲಕ್ಷ್ಮೇಶ್ವರ ವತಿಯಿಂದ ಕೊಂಡಿಕೊಪ್ಪ ಶಾಲೆಯಲ್ಲಿ ಕಲಿಕಾ ಸಾಮಗ್ರಿಗಳು ವಿತರಣೆ
ಲಕ್ಷ್ಮೇಶ್ವರ: ಸಮೀಪದ ಕೊಂಡಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಗಾಂಧೀಜಿ ಜಯಂತಿ ಅಂಗವಾಗಿ ಟೀಂ ಚಿರನೂತನ್ ಸಂಸ್ಥೆಯವರು ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಷಣ್ಮುಖ ಗಡ್ಡೆಣ್ಣವರ ಮಾತನಾಡಿ
ಪಟ್ಟಣದ ಕ್ರೀಯಾಶೀಲ ಯುವ ಉತ್ಸಾಹಿ ಸಂಘಟನೆಯಾದ ಟೀಂ ಚಿರನೂತನ ಸಂಸ್ಥೆಯು ಚಿರನೂತನ ವಿವಿದೊದ್ದೇಶಗಳ ಸಂಘ (ರಿ) ರವರ ಸೇವಾ ಚಟುವಟಿಕೆಗಳ ಮುಖವಾಣಿಯಾಗಿ ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.
2014 ರಲ್ಲಿ ಪ್ರಥಮ ಬಾರಿಗೆ ಅಂಗನವಾಡಿ ಮಕ್ಕಳಿಗೆ ಪಠ್ಯಸಾಮಗ್ರಿ ವಿತರಣೆಯೊಂದಿಗೆ ಪ್ರಾರಂಭಗೊಂಡು ಪ್ರಸ್ತುತ ಲಕ್ಷ್ಮೇಶ್ವರ ನಗರಾದ್ಯಂತ 8 ಅಂಗನವಾಡಿ ಕೇಂದ್ರಗಳು ಈ ಯೋಜನೆ ಪ್ರಯೋಜನ ಪಡೆದಿವೆ ಎಂದರು.
ಉಪಾಧ್ಯಕ್ಷ ನಾಗೇಶ ನಾವ್ಹಿ ಮಾತನಾಡಿ ಇದೇ ಮೊದಲಬಾರಿಗೆ ಗ್ರಾಮೀಣ ಪ್ರದೇಶವಾದ ತಾಲೂಕಿನ ಅತಿ ಚಿಕ್ಕ ಗ್ರಾಮ ಕೊಂಡಿಕೊಪ್ಪವನ್ನು ಆಯ್ದುಕೊಂಡಿದ್ದು.ಉಳಿದಂತೆ ಪ್ರಾಥಮಿಕ ಶಾಲೆಗಳ ವಿಧ್ಯಾರ್ಥಿಗಳಲ್ಲಿನ ಕೌಶಲ್ಯ ಮತ್ತು ಸ್ಪರ್ಧಾತ್ಮಕ ಮೌಲ್ಯಗಳ ಉಳಿಸುವ ನಿಟ್ಟಿನಲ್ಲಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನ ಎರ್ಪಡಿಸಿ ವಿಜೇತ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಸಹಿತ ಸಾಮಗ್ರಿಗಳ ಕೊಡುಗೆ,ಪ್ರೌಢಶಾಲಾ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ವಿವೇಕ ದರ್ಶನ ಕಾರ್ಯಕ್ರಮಗಳು,ಸ್ಥಳಿಯ ಸಂಸ್ಥೆಗಳೊಡಗೂಡಿ ನಗರ ಸ್ವಚ್ಚತಾ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಅನೇಕ ಸಮಾಜಮುಖಿ ಮತ್ತು ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ಚಿರನೂತನ ಸಂಸ್ಥೆ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಈ ವೇಳೆ
ಕಾರ್ಯಾಧ್ಯಕ್ಷ ಸಿದ್ದು ದುರ್ಗಣ್ಣವರ,ಉಪಾಧ್ಯಕ್ಷ ನಾಗೇಶ ನಾವ್ಹಿ ,ಯುವ ಸಮಿತಿಯ ಖಜಾಂಚಿ ಆನಂದ ಓದಣ್ಣವರ,ಕಾರ್ಯದರ್ಶಿ ಷಣ್ಮುಖ ಗಡ್ಡೆಣ್ಣವರ ,ಪ್ರಶಾಂತ ಉಳ್ಳಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ಕಲ್ಮೇಶ ದೊಡ್ಡಮನಿ,ರಾಮಣ್ಣ ಬಾಣದ, ಬಸವರಾಜ ದೊಡ್ಡಮನಿ, ಪರಸಪ್ಪ ಲಮಾಣಿ, ಸುರೇಶ ದೊಡ್ಡಮನಿ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶೋಭಾ ಲಮಾಣಿ, ಅಂಗನವಾಡಿ ಕಾರ್ಯಕರ್ತೆ ರತ್ನಾ ದೊಡ್ಡಮನಿ, ಗ್ರಾಪಂ ಉಪಾಧ್ಯಕ್ಷೆ ಕಾಶವ್ವ ದೊಡ್ಡಮನಿ, ಶಾಂತಾ ಲಮಾಣಿ, ಹಾಲವ್ವ ಹುಬ್ಬಳ್ಳಿ, ಕನಕಾ ಲಮಾಣಿ, ಲಲಿತಾ ದೊಡ್ಡಮನಿ, ನೀಲವ್ವ ಅತ್ತಿಗೇರಿ,ಶಾಲೆಯ
ಮುಖ್ಯ ಶಿಕ್ಷಕ ಎಂಎಸ್ ಹಿರೇಮಠ ಸಹ ಶಿಕ್ಷಕ ಎನ್ ಎಫ್ ಸಜ್ಜನರ ಮುಂತಾದರು ಉಪಸ್ಥಿತರಿದ್ದರು.