ಹೆಬಸೂರ ಗ್ರಾಮದ ಶಾಲೆಗಳಿಗೆ ಭೇಟಿ ನೀಡಿದ ಧಾರವಾಡ ಜಿ.ಪಂ.ಸಿ.ಇ.ಓ.ಸ್ವರೂಪಾ ಟಿ.ಕೆ.
ಮೂಲಭೂತ ಪ್ರಸ್ತುತ ಮೂಲಭೂತ ಸೌಲಭ್ಯಗಳ ಪರಿಶೀಲನೆ..
ಹುಬ್ಬಳ್ಳಿ:
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಹಾಗೂ ಗಂಡು ಮಕ್ಕಳ ಶಾಲೆಗಳಿಗೆ ಧಾರವಾಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಸ್ವರೂಪಾ.ಟಿ.ಕೆ.ಹಾಗೂ ಹುಬ್ಬಳ್ಳಿ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಡಾ.ರಾಮಚಂದ್ರ.ಹೊಸಮನಿ ಇವರುಗಳು ಶಾಲೆಗಳಿಗೆ ಸಾಂದರ್ಭಿಕ ಭೇಟಿ ನೀಡಿದರು..
ನೂತನ ಶಾಲಾ ಕೊಠಡಿಗಳ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡುವುದರ ಜೊತೆಹೆ ಶ್ಯೂ, ಸಾಕ್ಸ, ಮೊಟ್ಟೆ, ಚಿಕ್ಕೆ ಬಾಳೆ ಹಣ್ಣು ಬಿಸಿ ಊಟ, ಕುಡಿಯುವ ನೀರು ಪೂರೈಕೆ ಶೌಚಾಲಯ ಮೂತ್ರಾಲಯ ಸೌಲಭ್ಯ ಪೀಠೋಪಕರಣ ಲಭ್ಯತೆ ಮುಂತಾದ ಕಾರ್ಯಾನುಷ್ಠಾನ ಕುರಿತು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ಗ್ರಾ.ಪಂ.ಅಧ್ಯಕ್ಷ ಪ್ರವೀಣ ಹಲಗತ್ತಿ ಪಿ.ಡಿ.ಓ.ಸುಧಾ ಗಾಣದಾಳ ಪ್ರ.ಗು.ಲತಾ ಗ್ರಾಮಪುರೋಹಿತ ಹಾಗೂ ಶಿಕ್ಷಕ ವೃಂದ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.