ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದ ಬೈಲಾದಲ್ಲಿ ಸುಮಾರು 49 ತಿದ್ದುಪಡಿಗಳಿಗೆ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ತಿದ್ದುಪಡಿ ಮಾಡಲಾಯಿತು.
ಹಾಜರಿದ್ದ ಸದಸ್ಯರು ಮತ್ತು ವರ್ಚುವಲ್ನಲ್ಲಿ ಭಾಗವಹಿಸಿದ ಸದಸ್ಯರು ಯಾವುದೇ ವಿರೋಧ ಇಲ್ಲದೇ ಸರ್ವಾನುಮತದಿಂದ ತಿದ್ದುಪಡಿ ಮಾಡಿರುವುದಕ್ಕೆ ಅನುಮೋದನೆ ನೀಡಲಾಯಿತು.
ನಗರದ ಮಹಾವೀರ ಕಲ್ಯಾಣಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ರಾಜ್ಯಾದ್ಯಂತ 30 ಜಿಲ್ಲೆಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಾಗಿದ್ದ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು.
2022ರಲ್ಲಿ ನಡೆದ ಸಮಗ್ರ ಬದಲಾವಣೆಯ ಬಳಿಕ ಸಂಘದ ಬೈಲಾಗೆ ಮೊದಲ ತಿದ್ದುಪಡಿ ಮಾಡಲಾಯಿತು.
ಸಂಘದ ಸದಸ್ಯರ ಸದಸ್ಯತ್ವಕ್ಕೆ ನಿರ್ದಿಷ್ಟಪಡಿಸಿದ ಶುಲ್ಕ ಎನ್ನುವ ಬದಲಾಗಿ ವಾರ್ಷಿಕ ಶುಲ್ಕ 200 ಎಂದು ತಿದ್ದುಪಡಿ ಮಾಡಲಾಯಿತು. ಉಚ್ಚ ನ್ಯಾಯಾಲಯ ಹಾಗೂ ವಿಭಾಗೀಯ ಪೀಠಗಳು ಸಂಘದ ಸದಸ್ಯರಾಗಲು ಅರ್ಹರಾಗಿರತಕ್ಕದ್ದಲ್ಲ ಎನ್ನುವ ಹೊಸ ಸೇರ್ಪಡೆ ಮಾಡಲಾಯಿತು.
ಸಂಘದ ಕುರಿತು ಬೆಳವಣಿಗೆಗೆ ಮಾಹಿತಿ ನೀಡುವುದು ಸೇರಿದಂತೆ ಎಲ್ಲ ಪ್ರಕಟಣೆಯ ಅಧಿಕಾರವನ್ನು ರಾಜ್ಯಾಧ್ಯಕ್ಷರಿಗೆ ಮಾತ್ರ ಸೀಮಿತಗೊಳಿಸಿ, ತಿದ್ದುಪಡಿ ಮಾಡಲಾಗಿದೆ. ವಾರ್ಷಿಕ ಮಹಾಸಭೆಯನ್ನು ಇನ್ಮುಂದೆ ರಾಜ್ಯದ ಕೇಂದ್ರ ಸ್ಥಾನದಲ್ಲಿ ಅಥವಾ ಇನ್ಯಾವುದೇ ಸ್ಥಳದಲ್ಲಿ ನಡೆಸಬಹುದು ಎನ್ನುವ ತಿದ್ದುಪಡಿ ಮಾಡಲಾಗಿದೆ.
ವರ್ಗಾವಣೆ, ರಾಜೀನಾಮೆ ಮೊದಲಾದ ಕಾರಣಗಳಿಗಾಗಿ ತೆರವಾಗುವ ಸ್ಥಾನಗಳಿಗೆ ಉಳಿದ ಅವಧಿಗೆ ಅಧ್ಯಕ್ಷರ ಅನುಮೋದನೆಯ ಮೇರೆಗೆ ಪ್ರಭಾರ ನೇಮಕ ಮಾಡಿ, ಮುಂದುವರಿಸುವುದು ಸೇರಿದಂತೆ 49 ತಿದ್ದುಪಡಿಗಳನ್ನು ಮಾಡಿ, ಅನುಮೋದನೆ ನೀಡಲಾಯಿತು. ಹಾಜರಿದ್ದ ಸಾವಿರದಷ್ಟು ಸದಸ್ಯರು ಹಾಗೂ ವರ್ಚುವಲ್ನಲ್ಲಿ ಭಾಗವಹಿಸಿದ 6800 ಸದಸ್ಯರನ್ನೊಳಗೊಂಡು 7500 ಕ್ಕೂ ಹೆಚ್ಚು ಸದಸ್ಯರು ಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ ನೌಕರರು, ಬೈಲಾ ಸಮಗ್ರ ಬದಲಾವಣೆ ಬಳಿಕ ಮೊದಲ ಬಾರಿಗೆ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದೆ. ಅಂಥ ಗಂಭೀರ ಅಂಶಗಳು ಅಲ್ಲದಿದ್ದರೂ ಸಂಘದ ಸದಸ್ಯರಲ್ಲಿ ಅಭಿಪ್ರಾಯದೊಂದಿಗೆ ತಿದ್ದುಪಡಿ ಮಾಡಲಾಗಿದೆ. ಸಿ.ಎಸ್. ಷಡಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ..