ನೀನು ವೃತ್ತಿಯನ್ನು ಗೌರವಿಸಿದರೆ ವೃತ್ತಿಯೂ ನಿನ್ನನ್ನು ಗೌರವಿಸುತ್ತದೆ ಎಂದು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಎಂ ಮುಂದಿನಮನಿ ಇವರು ಲಕ್ಷ್ಮೇಶ್ವರ ನಗರದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಜರುಗಿದ ಲಕ್ಷ್ಮೇಶ್ವರ ತಾಲೂಕಿನ ಸಮಸ್ತ ಗುರು ಬಳಗ ಹಾಗೂ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಲಕ್ಷ್ಮೆಶ್ವರ ಇವರ ಸಹಯೋಗದಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ 135 ನೇ ಜನ್ಮದಿನೋತ್ಸವ ಹಾಗೂ ಗುರು ಗೌರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2023 24 ನೇ ಸಾಲಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಶಿಕ್ಷಣ ಇಲಾಖೆಯಿಂದ ಕೊಡ ಮಾಡಿದ ಪ್ರಶಸ್ತಿಗಳಿಗೆ ಭಾಜನರಾದ ಶಿಕ್ಷಕರಿಗೆ ಗೌರವಿಸುವ ಗುರು ಗೌರವ ಕಾರ್ಯಕ್ರಮವನ್ನು ತಾಯಿ ಪಾರ್ವತಿ ಮಕ್ಕಳ ಬಳಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಬಿ ಎಂ ಕುಂಬಾರ್ ಮಾತನಾಡುತ್ತಾ ಎಲೆಮರೆ ಕಾಯಿಯಂತಿರುವ ಶಿಕ್ಷಕರನ್ನು ಗುರುತಿಸಿ ಎಲ್ಲರನ್ನು ಒಂದೇ ಕಡೆ ಸೇರಿಸಿ ಗೌರವಿಸುವುದು ಉತ್ತಮವಾದ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಾಯರಾದ ರಮೇಶ್ ನವಲೆ ಮಾತನಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ ಶಿಕ್ಷಕರು ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸಿದಾಗ ಇಂತಹ ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ನಮ್ಮ ಜೀವನ ಮುಡಿಪಾಗಿಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಳಗದ ವತಿಯಿಂದ ಭಾಗವಹಿಸಿದ ಎಲ್ಲ 300 ಕ್ಕೂ ಹೆಚ್ಚಿನ ಶಿಕ್ಷಕರಿಗೆ ಪೆನ್ನು ಮತ್ತು ಗುಲಾಬಿ ಹೂ ನೀಡುವ ಮೂಲಕ ಸ್ವಾಗತಿಸಿದರು.
ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಜಯಲಕ್ಷ್ಮಿ ಗಡ್ಡದೇವರಮಠರವರು ಮಾತನಾಡಿ ಇಂದು ಎಲ್ಲಾ ಶಿಕ್ಷಕರನ್ನು ನೋಡಿ ಬಹಳ ಖುಷಿಯಾಯಿತು ಮತ್ತು ನಮ್ಮನ್ನು ಕೂಡ ಶಿಕ್ಷಣ ಕ್ಷೇತ್ರದ ಸೇವೆಗಾಗಿ ಗುರುತಿಸಿ ಗೌರವ ಸಲ್ಲಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೂ ಕರಾಪ್ರಾಶಾಶಿಸಂಘ, ವಿಶ್ವ ವಿಜಯ ಪತ್ರಿಕೆ, ಕಪ್ಪತ್ತಗಿರಿ ಫೌಂಡೇಶನ್ ಗದಗ, ಕರಾಶಿಸಾಹಿತ್ಯ ವೇದಿಕೆ ಕೋಲಾರ, ಶಾಲಾ ಶಿಕ್ಷಣ ಇಲಾಖೆ ಗದಗ ಇವರಿಂದ ಕೊಡಮಾಡಿದ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ 25 ಶಿಕ್ಷಕರನ್ನು ಗೌರವಿಸಲಾಯಿತು. ಅದೇ ರೀತಿಯಾಗಿ ತಾಯಿ ಪಾರ್ವತಿ ಮಕ್ಕಳ ಬಳಗದ ಆಡಳಿತ ಮಂಡಳಿಯವರನ್ನೂ ಸಹ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಬಸವರಾಜ ಎಮ್ ಯರಗುಪ್ಪಿ ಹಾಗೂ ಐ ಬಿ ಜಕ್ಕನಗೌಡ್ರು ಮಾತನಾಡಿದರು
ಸಭೆಯ ಅಧ್ಯಕ್ಷತೆಯನ್ನು ಸುವರ್ಣ ಬಾಯಿ ಬಹದ್ದೂರ್ ದೇಸಾಯಿ ಅಧ್ಯಕ್ಷರು ತಾಯಿ ಪಾರ್ತಿ ಮಕ್ಕಳ ಬಳಗ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರೋಹಿಣಿಬಾಯಿ ಬಹದ್ದೂರ್ ದೇಸಾಯಿ, ಜಯಲಕ್ಷ್ಮಿ ಮಹಾಂತಶೆಟ್ಟರ, ಶಾರಕ್ಕ ಮಹಾಂತ ಶೆಟ್ಟರ್, ಕಸಾಪ ಅಧ್ಯಕ್ಷರಾದ ಈಶ್ವರ ಮೆಡ್ಲೇರಿ, ಕರಾಸನೌ ಸಂಘ ಅಧ್ಯಕ್ಷರು ಡಿ ಎಚ್ ಪಾಟೀಲ, ಕಾರ್ಯದರ್ಶಿ ಎಮ್ ಎ ನಧಾಫ್, ಕರಾಪ್ರಾಶಾಶಿಸಂಘ ಅಧ್ಯಕ್ಷರಾದ ಬಿ ಎಸ್ ಹರಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಪಿ ಬಿ ಕರಾಟೆ, ಜೆ ಡಿ ಲಮಾಣಿ, ಎಮ್ ಡಿ ವಾರದ, ಎಫ್ ಎಸ್ ತಳವಾರ, ವಿಜಯಕುಮಾರ ಬಿಳೆಯಲಿ, ಜಾನಾನಾಯಕ ಲಮಾಣಿ, ಎಲ್ ಎಸ್ ಅರಳಹಳ್ಳಿ, ಸಂಸ್ಕೃತ ಶಿಕ್ಷಕರು ಭಜಂತ್ರಿ, ಬಿ ಬಿ ಹುಲಗೂರ, ಎಸ್ ವಿ ಅಂಗಡಿ, ಡಿ ಡಿ ಲಮಾಣಿ, ಎಲ್ ಎ ನಂದೆಣ್ಣವರ, ಗೀತಾ ಹಳ್ಯಾಳ, ಬಸವರಾಜ ಯತ್ನಳ್ಳಿ, ಎಸ್ ಬಿ ಲಕ್ಷ್ಮೇಶ್ವರ, ಬಿ ಕೆ ಹತ್ತಿಕಾಳ, ಹರೀಶ್ ಇಸಿಒ, ಎನ್ ಪಿ ಪ್ಯಾಟಿಗೌಡರ, ಉಮೇಶ್ ನೇಕಾರ ಮತ್ತು ತಾ ಪಾ ಮ ಬಳಗದ ಸರ್ವ ಸಿಬ್ಬಂದಿ, ಲಕ್ಷ್ಮೇಶ್ವರ ತಾಲ್ಲೂಕಿನ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.
ಕೆ ಎಸ್ ಹೀರೇಮಠ ಸ್ವಾಗತಿಸಿದರು. ಎಚ್ ಡಿ ನಿಂಗರೆಡ್ಡಿ ನಿರೂಪಣೆ ಮಾಡಿದರು, ಎನ್ ಎಸ್ ಬಂಕಾಪುರ ವಂದನಾರ್ಪಣೆಯನ್ನು ಮಾಡಿದರು.