ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನುಮದಿನದ ಸಂದರ್ಭದಲ್ಲಿ ಕವನ ನಮನ..🌹☘️🌹☘️🌹☘️🌹☘️
(ಶ್ರೀಮತಿ ಲಲಿತಾ ಶಾಸ್ತ್ರಿಯವರ ಅಂತರಾಳ)
ನನ್ನ ಪತಿ,ನನ್ನ ದೇವರು
ನನ್ನ ಪತಿ,ನನ್ನ ದೇವರು
ಭಾರತದ ಹೆಮ್ಮೆಯ ಪ್ರಧಾನಿ ಇವರು
ಆಹಾರ ಉಳಿಕೆ,ಕ್ಷೀರ ಕ್ರಾಂತಿ
ಹಸಿರು ಕ್ರಾಂತಿಯ ಹರಿಕಾರರು
ಅಭಿವೃದ್ಧಿಯ ಬಟ್ಟಲಲ್ಲಿ
ಪ್ರಗತಿಯ ಹೆಪ್ಪಿಟ್ಟವರು
ನೆರಳು ನೀಡುವ ಮರ,ಮೈಯೆಲ್ಲಾ ಹೂವು
ಸಂತೈಸುವ ತಾಯಿರೂಪದ
ನನ್ನೊಲವಿನ ದೇವರು
ಸರಳ ಪ್ರಧಾನಿ ಶಾಸ್ತ್ರೀಜಿ
ದೇಶದ ಪ್ರಜೆಗಳ ನೇತಾಜಿ
ಹಗುರ ಹಕ್ಕಿ ದೇಹ,ಬಲು ತೂಕದ ಮಾತು
ಜೈ ಜವಾನ್, ಜೈ ಕಿಸಾನ್
ಇವರ ಪಾಲಿನ ಸೊತ್ತು
ಯುದ್ಧ ದಾಹಿಗಳಿಗೆ ತಿರುಮಂತ್ರ
ನೀಡಿದ ಕೀರ್ತಿ
ಸರಳ ಪ್ರಾಮಾಣಿಕತೆಯ ಸಾಕಾರ ಮೂರ್ತಿ
ಮನೆ ಮಕ್ಕಳು ತುಂಬು ಕುಟುಂಬದ ನಿಸ್ವಾರ್ಥಿ
ಭಾರತ ಜನತೆಗೆ ಕಾಯಕ ಸ್ಫೂರ್ತಿ
ಭಾರತಾಂಬೆಯ ದಿಟ್ಟ ಕುವರ
ಭಾರತ ದೇಶದ ಕೀರ್ತಿಯ ಶಿಖರ
ನನ್ನವರು- ನನ್ನ ದೇವರು
ಸರಳ- ಸುಂದರ -ಸಜ್ಜನರು
ಅಗ್ರಗಣ್ಯರು, ಸತ್ಯಸಂಧರು
ನನ್ನ ಪತಿ,ನನ್ನ ದೇವರು…..
ಶ್ರೀಮತಿ ಮೀನಾಕ್ಷಿ ಸುರೇಶ್ ಭಾಂಗಿ(ಸೂಡಿ)
ಕಿತ್ತೂರ,ಬೆಳಗಾವಿ ಜಿಲ್ಲೆ