ದಿನಾಂಕ 27.09.2023 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಿಕೊಪ್ಪದಲ್ಲಿ ಸಸ್ಯ ಶಾಮಲಾ ಕಾರ್ಯಕ್ರಮ ನೆರವೇರಿತು..
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಲ್ಮೇಶ್ವರ ದೊಡ್ಡಮನಿ ಸಸಿಯನ್ನು ನೆಡುವುದರ ಮೂಲಕ ಸಸ್ಯ ಶಾಮಲಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಮುಖ್ಯ ಶಿಕ್ಷಕ ಎಂ ಎಸ್ ಹಿರೇಮಠ ಅದೇ ರೀತಿಯಾಗಿ ಸಸ್ಯಗಳಿಂದ ಮರಗಳಿಂದ ಆಗುವ ಉಪಯೋಗಗಳನ್ನು ಮಕ್ಕಳಿಗೆ ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಡೆಸಲಾಗುತ್ತಿದೆ ಎಂದರು. ಮನೆಗೊಂದು ಮರ ಊರಿಗೊಂದು ವನ ಇದರಿಂದ ನಾವೆಲ್ಲರೂ ಸುಭಿಕ್ಷರಾಗಿ ಬಾಳಬಹುದು ಹಾಗೂ ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಮತ್ತು ಅಂತರ್ಜಲ ಮಟ್ಟ ಹೆಚ್ಚುತ್ತದೆ ಎಂದರು. ನಮ್ಮ ಶಾಲೆಯ ವಾರ್ಷಿಕವಾಗಿ ಇನ್ನೂರಕ್ಕೂ ಹೆಚ್ಚು ತೆಂಗಿನಕಾಯಿ ಬಿಸಿಯೂಟಕ್ಕೆ ಹಾಗೂ ಮಕ್ಕಳು ಸೇವಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ರಾಮಣ್ಣ ಬಾಣದ ಗಣೇಶ ಲಮಾಣಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಕಾಶವ್ವ ದೊಡ್ಡಮನಿ ಈರಪ್ಪ ತೆಗ್ಗಳ್ಳಿ ನಾಗರಾಜ ಸವಣೂರು ಹಾವರಗಿ ನಾಗವ್ವ ಚಿಗರಿ ಶಿಕ್ಷಕರಾದ ಎನ್ ಎಫ್ ಸಜ್ಜನರ ತುಕಾರಾಮ ಲಮಾಣಿ ಜಗದೀಶ ಗುಡಿ ಮುಂತಾದವರು ಇದ್ದರು.