ಹೃದಯ ಮಿಲನ
ಹೃದಯ ಭಾವ ಮೂಡಿ
ಬರಲು ಪ್ರೇಮ ಗೀತೆ
ಪ್ರೇಮಿಯ ಒಡಲಾಳದ
ಮಿಲನ ಗೀತೆ
ಹೊಸ ಕನಸು ಕಾಣುತ
ನಿನ್ನೊಲವಲಿ ಮೀಯುತ
ಹೃದಯ ಬಡಿತ ಹೇಳಿದ
ಪ್ರೇಮ ಪ್ರೇಮ ಪ್ರೇಮ
ಹುಚ್ಚು ಮನದೊಳಗೆ
ಮೂಡಿಹ ಪ್ರೀತಿ
ಎರಡು ಹೃದಯ ಗಳ
ಮಿಲನ ಮಂದಹಾಸ
ನಲ್ಲೆಯ ಬಿಸಿಯಪ್ಪುಗೆಯ ಬಿಸಿ
ಹೃದಯ ಬಯಸಿದ ಮಿಲನ
ಬಂಧಿಯಾಗಿ ಸೇರಿ ಭಾವಬಂಧ
ಮೂಡಿ ಬರುತಲಿ ಪ್ರೇಮ ಕಾವ್ಯ
ಕನಸು ಸಾಕಾರಗೊಳಿಸಲು
ಮಾತುಗಳು ಮೌನ ನೋಟದಲಿ ಬೆರೆತು
ಮಾತು ಮೌನದಿ ಹೃದಯ ಮಿಲನ
ಕಷ್ಟ ಸುಖಗಳ ಹಂಚಿಕೊಳ್ಳಲು ಭಾವ
ನೀನಾಡುವ ಮಾತೆಲ್ಲ ಮಧುರ
ಮೌನದಿ ನಿನ್ನ ಕಣ್ಣೋಟ
ಮಾತುಗಳ ಮೀರಿದ ಪ್ರೇಮ ಕಾವ್ಯ
ಮೌನ ಮರೆಯಲಾಗದಿ ಮೂಡಿ ಹ ಕವನ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
*೮೯೭೧೧೧೭೪೪೨*