ಬೆಂಗಳೂರು:
ಮಾನ್ಯ ಅಧ್ಯಕ್ಷರು,
ಕರ್ನಾಟಕ ರಾಜ್ಯ 7ನೇ ವೇತನ ಆಯೋಗ,
ಔಷಧ ನಿಯಂತ್ರಣ ಇಲಾಖೆ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು.
ಮಾನ್ಯರೆ,
ವಿಷಯ: ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಕರಿಗೆ ಗ್ರಾಮೀಣ ಪರಿಹಾರ ಭತ್ಯೆ ಮತ್ತು ಅವಶ್ಯ ಮೂಲಭೂತ ಸೌಕರ್ಯಗಳನ್ನು ನೀಡಲು ಶಿಫಾರಸ್ಸು ಮಾಡುವ ಬಗ್ಗೆ. ಉಲ್ಲೇಖ: ಕ.ರಾ.ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿ,
ದಿ: 25-9-2023,ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ ಇವರ ಮನವಿಯನ್ನು ತಮ್ಮ ಅವಗಾಹನೆಗೆ ಲಗತ್ತಿಸಿದೆ. 11-2-2023 ರಂದು ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಮಹಾ ಸಭೆಯಲ್ಲಿ; ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಸರ್ವ ಋತುಗಳಲ್ಲಿ ಸರ್ವ ಭೌಗೋಳಿಕ ಪ್ರದೇಶದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರಂತರ ಶ್ರಮಿಸುತ್ತಿದ್ದು, ಹಳ್ಳ ಕೊಳ್ಳ, ಗುಡ್ಡ ಬೆಟ್ಟ, ಅರಣ್ಯ ಪರ್ವತ ಪ್ರದೇಶದ ಮಕ್ಕಳ ಮನೋವಿಕಾಶಕ್ಕಾಗಿ ಕೆಲಸ ಮಾಡುವ ಶಿಕ್ಷಕ ವೃಂದಕ್ಕೆ 2007ರ 5ನೇ ವೇತನ ಆಯೋಗದಲ್ಲಿ ರೂ. 100-00 ಗ್ರಾಮೀಣ ಪರಿಹಾರ ಭತ್ಯೆಯನ್ನು ಮಂಜೂರು ಮಾಡಲಾಗಿದ್ದು, ಆದರೆ 2013ರ ವೇತನ ಸಮಿತಿ ಮತ್ತು 2018ರ ವೇತನ ಆಯೋಗದಲ್ಲಿ ಗ್ರಾಮೀಣ ಭತ್ಯೆಯನ್ನು ಉಲ್ಲೇಖಿಸದೇ ಇರುವುದರಿಂದ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕನಿಷ್ಠ ಮಾಸಿಕ ರೂ. 5000/- ಅಥವಾ ಮೂಲ ವೇತನದ ಶೇ. 10% ಗ್ರಾಮೀಣ ಪರಿಹಾರ ಭತ್ಯೆಯನ್ನು ಮಂಜೂರು ಸೇರಿದಂತೆ ಅವಶ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ನಿರ್ಣಯ ಕೈಗೊಂಡು ಉಲ್ಲೇಖಿತ ಪತ್ರದಲ್ಲಿ ಮನವಿ ಮಾಡಿಕೊಂಡಿರುತ್ತಾರೆ.
ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ: ಮನವಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಸಹಾನುಭೂತಿಯಿಂದ ಪರಿಗಣಿಸಿ ಗ್ರಾಮೀಣ ಭತ್ಯೆ ಸೇರಿದಂತೆ ಅವಶ್ಯವಿರುವ ಸೌಲಭ್ಯಗಳನ್ನು ನೀಡುವಂತೆ ಶಿಫಾರಸ್ಸು ಮಾಡಿ ಗ್ರಾಮಾಂತರ ಪ್ರದೇಶದ ಶಿಕ್ಷಕರಿಗೆ ಅನುಕೂಲ ಕಲ್ಪಿಸಿಕೊಡಲು ತಮ್ಮಲ್ಲಿ ಕೋರಿದೆ ಎಂದು ಸಿಎಸ್ ಷಡಾಕ್ಷಕರಿಯವರು ತಿಳಿಸಿದ್ದಾರೆ.
ಬೆಂಗಳೂರು: ಗ್ರಾಮೀಣ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಟೊಂಕ ಕಟ್ಟಿ ನಿಂತಿದೆ..
ಹೌದು.ಬೆಂಗಳೂರಿಗೆ ಭೇಟಿ ನೀಡಿದ್ದ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಎಮ್ ಸಜ್ಜನವರ ನೇತೃದಲ್ಲಿ ಸಂಘದ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ರಾಜ್ಯ ಉಪಾದ್ಯಕ್ಷರಾದ ರುದ್ರಪ್ಪವನ್ನು ಭೇಟಿಯಾಗಿ ಗ್ರಾಮೀಣ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಏಳನೇ ವೇತನ ಆಯೋಗದದಲ್ಲಿ ಸೇರಿಸುವಂತೆ ತಿಳಿಸಿಲಾಯಿತು..
ಮೌಖಿಕವಾಗಿ ಮನವಿ ನೀಡಲಾಯಿತು…ಇದೇ ವೇಳೆ ಕಚೇರಿಯ ವ್ಯವಸ್ಥಾಪಕರು ಕೂಡ ಉಪಸ್ಥಿತಿರಿದ್ದರು..
ನಿಯೋಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಮ್ ಸಜ್ಜನ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್ ಆಯ್ ಲಕ್ಕಮ್ಮನವರ, ರಾಜ್ಯ ಉಪಾಧ್ಯಕ್ಷರಾದ ಶ್ರೀಧರ್ ಗಣಾಚಾರಿ,ಆರ್.ಕೆ.ನಾಗರಾಜು ನಾರಾಯಣಸ್ವಾಮಿ, ಚಿಂತಾಮಣಿ ಧರ್ಮಣ್ಣ ಭಜಂತ್ರಿ, ಮಲ್ಲಿಕಾರ್ಜುನ್ ಎಮ್.ಆರ್. ನೆಲಮಂಗಲ, ಚಿಕ್ಕಮಗಳೂರು ಚಂದ್ರೇಗೌಡ ಇದ್ದರು. ಸಂಘದ ಮನವಿಗೆ ಸ್ಪಂದಿಸಿದ್ದಕ್ಕಾಗಿ ರಾಜ್ಯದ ಶಿಕ್ಷಕರ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ..