ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ರಾಜ್ಯ ಘಟಕ ಹುಬ್ಬಳ್ಳಿ. ಇದರ ವತಿಯಿಂದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ಇವರ ನೇತೃತ್ವದ ನಿಯೋಗದೊಂದಿಗೆ ಕರ್ನಾಟಕ ಸರಕಾರಿ ವಿಮಾ ಇಲಾಖೆ ಬೆಂಗಳೂರ ರಾಜ್ಯ ನಿರ್ದೇಶಕರಾದ ಬಿ ಶೋಭಾ ಇವರನ್ನು ಭೇಟಿಯಾಗಿ ಈ ಕೆಳಗಿನ ಬೇಡಿಕೆ ಈಡೇರಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.
👉ನಿಯಮಿತವಾಗಿ ಆನ್ ಲೈನ್ ಮೂಲಕ ಜಿ ಪಿ ಎಫ್ ಮಾದರಿಯಲ್ಲಿ ಸ್ಟೇಟ್ಮೆಂಟ್ ಪಡೆಯುವದು.
👉ಜಿ ಪಿ ಎಪ್ ಮಾದರಿಯಲ್ಲಿ ಭಾಗಶಃ ಮುಂಗಡ ಪಡೆಯುವುದು.
👉55 ವರ್ಷ ಪೂರ್ಣಗೊಂಡ ವಿಮಾದಾರರಿಗೆ ಸಂದಾಯವಾಗಬೇಕಾದ ವಿಮಾ ಮೊತ್ತ ವಿಳಂಬವಿಲ್ಲದೆ ವಿತರಿಸಬೇಕು.
👉ಬೋನಸ್ ಮೊತ್ತ ತಡಮಾಡದೆ ನೀಡಬೇಕು
👉ಸಾಲ ಮಂಜೂರಾತಿ ವಿಳಂಬವಾಗದಂತೆ ಮಂಜೂರಿಸಬೇಕು
👉ವಿಮಾ ಇಲಾಖೆ ಕಚೇರಿಗೆ ಕೆಲಸ ನಿಮಿತ್ಯ ಹೋದ ಶಿಕ್ಷಕರನ್ನು ಗೌರವದಿಂದ ಕಂಡು ತತ್ ಕ್ಷಣ ಸ್ಪಂದಿಸಬೇಕು
ನಿಯೋಗದಲ್ಲಿ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್ ಆಯ್ ಲಕ್ಕಮ್ಮನವರ, ರಾಜ್ಯ ಉಪಾಧ್ಯಕ್ಷರಾದ ಶ್ರೀಧರ್ ಗಣಾಚಾರಿ,ಆರ್.ಕೆ.ನಾಗರಾಜು ನಾರಾಯಣಸ್ವಾಮಿ, ಚಿಂತಾಮಣಿ ಧರ್ಮಣ್ಣ ಭಜಂತ್ರಿ, ಮಲ್ಲಿಕಾರ್ಜುನ್ ಎಮ್.ಆರ್. ನೆಲಮಂಗಲ, ಚಿಕ್ಕಮಗಳೂರು ಚಂದ್ರೇಗೌಡ ಇದ್ದರು.