ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ಇದರ ವತಿಯಿಂದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ನೇತೃತ್ವದಲ್ಲಿ ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ.ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ರಾಜ್ಯ ಉಪಾಧ್ಯಕ್ಷರಾದ ನಾಗರಾಜು ಕೆ ಧರ್ಮಣ್ಣ ಭಜಂತ್ರಿ.ಶ್ರೀಧರ ಗಣಾಚಾರಿ.ಮಲ್ಲಿಕಾರ್ಜುನಯ್ಯ.ಎಮ್.ಆರ್. ಅಕ್ಬರ್ ಅಲಿ ಸೊಲ್ಲಾಪೂರ ಮುಂತಾದವರ ಮುಂದಾಳತ್ವದಲ್ಲಿ ಶಾಲಾ ಶಿಕ್ಷಣ ಸಚಿವರಿಗೆ ಏಳನೇ ವೇತನ ಆಯೋಗದ ಅಧ್ಯಕ್ಷರಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಆಯುಕ್ತರಿಗೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿಯವರಿಗೆ ಗ್ರಾಮೀಣ ಭತ್ಯೆ ದಸರಾ ರಜೆ ವಿಸ್ತರಣೆ ನಿಯಮಿತವಾಗಿ ಮುಂಭಡ್ತಿ ಮುಂತಾದ ಬೇಡಿಕೆ ಪ್ರಸ್ತಾವನೆಗಳನ್ನು ಸೋಮವಾರ ಬೆಂಗಳೂರಿನಲ್ಲಿ ಸಲ್ಲಿಸಲಿದ್ದಾರೆ.ಎಂದು ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ತಿಳಿಸಿದ್ದಾರೆ.