ಬೆಂಗಳೂರಿನ ನಗು ಫೌಂಡೇಶನ್ ರವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ 20 ಸಾವಿರ ಮೌಲ್ಯದ ಪ್ರಿಂಟರ್ ನ್ನು ನೀಡಿದರು.
ನಗು ಫೌಂಡೇಶನ್ ಪರವಾಗಿ ಶಿಕ್ಷಕರಾದ ಸಿ ಆರ್ ಸುರೇಶ್ (ಚೌಡ್ಲಾಪುರ ಸೂರಿ )ರವರು ಮುಖ್ಯಗುರುಗಳಾದ ಮಮತರವರಿಗೆ ಹಸ್ತಾಂತರ ಮಾಡಿದರು. ದೇಣಿಗೆ ಸ್ವೀಕರಿಸಿ ಮಾತನಾಡಿದ ಮುಖ್ಯಗುರುಗಳು, ನಗು ಫೌಂಡೇಶನ್ ಕಾರ್ಯವನ್ನು ಶ್ಲಾಘಿಸಿದರು. ಪ್ರಿಂಟರ್ ಎನ್ನುವುದು ನಮ್ಮ ಶಾಲೆಯ ಹಲವು ವರ್ಷಗಳ ಕನಸಾಗಿತ್ತು ಇಂದು ಈ ಕನಸು ನನಸಾಗಿದೆ. ಇದಕ್ಕೆ ಕಾರಣ ನಗು ಫೌಂಡೇಶನ್ ಪ್ರವರ್ತಕರಾದ ದೀಪ್ತಿ ಮೇಡಂ ರವರು. ಇವರಿಗೆ ಶಾಲೆಯ ಪರವಾಗಿ ಹಾಗೂ ಎಸ್ ಡಿ ಎಂ ಸಿ ಪರವಾಗಿ ತುಂಬಾ ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮೇಶ್ ರವರು ಅಂಗನವಾಡಿ ಶಿಕ್ಷಕಿರಾದ ನಾಗವೇಣಿ ಹಾಗೂ ಸಿಬ್ಬಂದಿ ಪೂರ್ಣಿಮಾ ಹಾಜರಿದ್ದರು.