ಸರ್ಕಾರಿ ನೌಕರರ ಹೊಸ ಪಿಂಚಣಿ ರದ್ದಾಗಲಿ,ಹಳೆಯ ಪಿಂಚಣಿ ಜಾರಿಯಾಗಲಿ, ಮಲ್ಲಿಕಾರ್ಜುನ ಉಪ್ಪಿನ.
ಧಾರವಾಡ:
ಧಾರವಾಡದಲ್ಲಿ ಇಂದು ಜರುಗಿದ ಭಾರತ ಯಾತ್ರೆಯಲ್ಲಿ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ NPS ಇದು ಸರ್ಕಾರಿ ನೌಕರರಿಗೆ ಮರಣ ಶಾಸನ ವಾಗಿದೆ ಇದು ನೌಕರರ ನೆಮ್ಮದಿ ಹಾಳು ಮಾಡುವ ಯೋಜನೆಯಾಗಿದೆ, ನಿವೃತ್ತಿ ನಂತರ ನೌಕರರ ಬದುಕು ದುಸ್ತರವಾಗಲಿದೆ,ಆದ್ದರಿಂದ NPS ಯೋಜನೆಯನ್ನು ರದ್ದುಮಾಡಿ, ಹೊಸ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ಮಾಡಬೇಕು ಎಂದು ಕರೆ ನೀಡಿದರು, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರು ಎಫ್ ಸಿ ಚೇಗರಡ್ಡಿ ಪಾಲ್ಗೊಂಡು ನೌಕರರಿಗೆ ದೈರ್ಯ ತುಂಬಿದರು.
ಗೌರವಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ನೇತ್ರತ್ವದ ನಿಯೋಗ ಪಾಲ್ಗೊಂಡು, ಹೊಸ ಪಿಂಚಣಿ NPS ರದ್ದಾಗಲಿ, ಹಳೆಯ ಪಿಂಚಣಿ ಜಾರಿಯಾಗಲಿ ಎಂದು ಒಕ್ಕೋರಲಿನ ಮನವಿಯನ್ನು ಸರಕಾರಕ್ಕೆ ತಲುಪಿಸುವ ಉದ್ದೇಶದಿಂದ ಈ ಒಂದು ಭಾರತ ಯಾತ್ರೆಯಲ್ಲಿ ಪಾಲ್ಗೊಂಡು, NPS ನೌಕರರಿಗೆ ದೈರ್ಯ ತುಂಬುವ ಕಾರ್ಯವನ್ನು ಮಾಡಿದರು, ಇದೇ ಸಂದರ್ಭದಲ್ಲಿ NPS ನೌಕರರ ಸಂಘಟನೆಯ ಪ್ರಮುಖರಾದ ಎಂ ಆರ್ ಕಬ್ಬೇರ ಫಿರೋಜ ಗುಡೇನಕಟ್ಟಿ, ಬಸವರಾಜ ದೇಸೂರ ರಾಜು ಮಾಳವಾಡ, ರುದ್ರೇಶ ಕುರ್ಲಿ, ಉಮೇಶ ಕುರುಬರ ಅಶೋಕ ಬಳಿಗೇರ ಮುಂತಾದವರು ಇದ್ದರು.