ಲಕ್ಷ್ಮೇಶ್ವರ,:
ನೌಕರರಿಗೆ ಮರಣ ಶಾಸನವಾಗಿರುವ ಹೊಸ ಪಿಂಚಣಿ ಯೋಜನೆ ಎನ್ ಪಿ ಎಸ್ ರದ್ದಾಗುವವರೆಗೆ ವಿರಮಿಸಿದೆ ಹೋರಾಟ ನಡೆಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಓ ಪಿ ಎಸ್ ಜಾರಿಗಾಗಿ ಭಾರತ ಯಾತ್ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ ರಾ ಸ ಪ್ರಾ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಹರ್ಲಾಪುರ ಹಾಗೂ ಕ ರಾ ಸ ನೌಕರರ ಸಂಘದ ಅಧ್ಯಕ್ಷ ಡಿ ಎಚ್ ಪಾಟೀಲ ಸರಕಾರಿ ಕನ್ನಡ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ಭಾರತ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಯಾತ್ರೆಯು ಸಪ್ಟಂಬರ್ 22 ರ ಮಧ್ಯಾಹ್ನ 2:00 ಗಂಟೆಗೆ ಲಕ್ಷ್ಮೇಶ್ವರ ರಕ್ಕೆ ಆಗಮಿಸುತ್ತಿದ್ದು ನೌಕರರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ ಹಾಗೂ ಶಿಕ್ಷಕರ ಸಂಘ ನೌಕರರ ಹಿತ ಕಾಪಾಡಲು ಸದಾ ಬದ್ಧವಾಗಿದೆ ಎಂದರು. ಈ ನಿಟ್ಟಿನಲ್ಲಿ ಭಾರತ ಯಾತ್ರೆಯು ಸಂಪೂರ್ಣ ಹೋರಾಟ ಮಾಡುತ್ತಿದೆ ಎಂದರು. ಈ ಸಭೆಯಲ್ಲಿ ನೌಕರ ಸಂಘದ ಕಾರ್ಯದರ್ಶಿ ಎಂ ಎ ನದಾಫ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ ಖಜಾಂಚಿ ಬಸವರಾಜ್ ಯತ್ತಿನಹಳ್ಳಿ ಉಪಾಧ್ಯಕ್ಷರಾದ ಡಿ ಡಿ ಲಮಾಣಿ ಎಲ್ ಎನ್ ನಂದೆಣ್ಣವರ ಗೀತಾ ಹಲ್ಯಾಳ ಎಫ್ ಎಸ್ ತಳವಾರ ಬಸವರಾಜ ಯರಗುಪ್ಪಿ, ಶ್ರೀಪಾಲ ಘೊಂಗಡಿ,ಮಂಜುನಾಥ ಕೊಕ್ಕರಗುಂದಿ, ಬಿ ಎಂ ಕುಂಬಾರ, ಎಸ್ ಬಿ ಅಣ್ಣಿಗೇರಿ,ಶಿವಾನಂದ ಅಸುಂಡಿ, ಎಸ್ ಬಿ ಲಕ್ಷ್ಮೇಶ್ವರ ಡಿ ಎನ್ ದೊಡ್ಡಮನಿ ,ಅರುಣಾ ಬೇತೂರು ಮಠ, ಸತೀಶ್ ಬೊಮಲೆ, ಸಾವಿರ ಕುರಿ ಎಂ ಎಸ್ ಹಿರೇಮಠ , ಎಮ್ ಎನ್ ಭರಮಗೌಡ್ರು, ಪರಶುರಾಮ ಮ್ಯಾಗೇರಿ ಹಂಜಗಿ , ಕಮ್ಮಾರ ಇತರರು ಇದ್ದರು