ಪವಾಡ ತೋರು ಗಣೇಶ.
ಒಳ್ಳೆಯ ಗುಣಗಳು
ಮಾನವರಲ್ಲಿ
ದ್ವೇಷ ಅಸೂಯೆ ಮದ
ಮತ್ಸರ ತೊಲಗಲಿ
ಪ್ರಾಮಾಣಿಕತೆ ದೇಶದುದ್ದಗಲಕ್ಕೂ
ಮೆರೆಯಲಿ
ಅನ್ನದಾತರ ಬೆವರಿಗೆ ಬೆಲೆ ಬರಲಿ
ದೇಶ ಕಾಯೋ ಯೋಧರಿಗೆ
ನೂರು ವರುಷ ಆಯುಷವಿರಲಿ
ವೈರಿ ರಾಷ್ಟ್ರಗಳ ಕಣ್ಣು
ಪುಣ್ಯ ಭಾರತಾಂಬೆಯ ಮೇಲೆ
ಬೀಳದಿರಲಿ
ಇನ್ನೊಬ್ಬರ ಅಭಿಪ್ರಾಯಗಳನ್ನು
ಪರಾಮರ್ಶಿಸಿ ನೋಡೋ
ಮನಸ್ತಿತಿ ಬರಲಿ
ನಾನೇ ಎಂಬುದು ಅಳಿಯಲಿ
ನಾವು ಎಂಬುದು ಮೊಳಗಲಿ
ಬೃಷ್ಟತೆ ಕಾನದಿರಲಿ
ಸ್ವಚ್ಚತೆ ಮೂಡಲಿ
ಪರೋಪಕಾರ ಗುಣವಿರಲಿ
ಹಿರಿಕಿರಿಯರೆಂಬ ಭಯ ಭಕ್ತಿಯಿರಲಿ
ದುಶ್ಚಟ, ದುರ್ಮ ನ ಸ್ಸುಗಳು ದೂರಾಗಲಿ
ದೇಶ ಸುಭಿಕ್ಷವಾಗಲಿ
ಸೂಕ್ಷ್ಮ ಬುದ್ದಿ ಗಣೇಶ
ನಿನ್ನ ಮಹಿಮೆಯಿಂದ ಲೋಕ
ಕಲ್ಯಾಣ ವಾಗಲಿ
ಏಳು ದಿನ, ಐದು ದಿನ, ಇಪ್ಪತ್ತೊಂದು
ದಿನ ಉತ್ಸವ ಮೂರ್ತಿಯಾಗಿ
ದಿನಕ್ಕೊಂದು ವಿಶೇಷ ಮೃಷ್ಟಾನ್ನ
ಭೋಜನ ಸ್ವೀಕರಿಸಿ ಹೋಗಬೇಡ ದೇವಾದೀದೇವ
ಅಸ್ತು ಎನ್ನು ನನ್ನ ಕವನಾಪೆಕ್ಷೆಗೆ
ಕೋಟಿ ನಮನ ಆದೀ ಪೂಜೆಗದೀಪತಿ
ಸರ್ವೇ ಜನಾ ಸುಖಿನೋಭವಂತು.
ಸರ್ವರಿಗೂ ಗಣೇಶ್ ಹಬ್ಬದ ಹಾರ್ಧಿಕ ಶುಭಾಶಯಗಳು.
ಶ್ರೀಮತಿ ಉಮಾದೇವಿ.ಯು.ತೋಟಗಿ