ಹೆಬಸೂರ ಬಾಲೆಯರ ಶನಿವಾರ ಶಾಲಾ ಸಂಭ್ರಮದಲ್ಲಿ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ
ಹುಬ್ಬಳ್ಳಿ:
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ವಲಯದ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಾಲಾ ಸಂಭ್ರಮ..
ಶನಿವಾರ ಕಾರ್ಯಕ್ರಮದಲ್ಲಿ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ ಕಾರ್ಯಚಟುವಟಿಕೆಗಳು ಬೇವು ಕರಿಬೇವು ಬಿಳಿ ಕೆಂಪು ಹಳದಿ ದಾಸವಾಳ ತುಳಸಿ ಎಲೆ ಅಮೃತ ಬಳ್ಳಿ ವೀಳ್ಯದ ಎಲೆ ಮದುಗುಣಕಿ ಎಲೆ ಉತ್ರಾಣಿ ಸೊಪ್ಪು ಮುಂತಾದ ಸ್ಥಳಿಯವಾಗಿ ಲಭ್ಯವಿರುವ ವೈವಿಧ್ಯಮಯ ಗಿಡ ಮರ ಬಳ್ಳಿಗಳ ಔಷಧೀಯ ಗುಣಗಳು ಉಪಯೋಗ ಮುಂಜಾಗ್ರತೆ ಕುರಿತು ನಲಿ ಕಲಿ ಗುರು ಮಾತೆಯರಾದ ಶಾರದಾ ಕಂಬಳಿ ಸುವರ್ಣ ಮಡಿವಾಳರ ಗೀತಾ ಕೆಂಚರಡ್ಡಿ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಸಜ್ಜನ .ಸಿ.ಆರ್.ಪಿ.ದುರ್ಗೇಶ ಮಾದರ.ಶಾಲಾ ಪ್ರ.ಗು.ಲತಾ ಗ್ರಾಮಪುರೋಹಿತ.ಸುಧಾ ಕೊಣ್ಣೂರ.ದ್ರಾಕ್ಷಾಯಿಣಿ ಕೊರಗರ.ದೇವೇಂದ್ರ ಪತ್ತಾರ ಮುಂತಾದವರು ಉಪಸ್ಥಿತರಿದ್ದರು.