ಪ್ರೇಮ ಲೋಕದ ಬಾಗಿಲಲಿ
ನೀ ಇಲ್ಲದಿರೆ ಏನೋ ಕಳೆದ
ಭಾವ ಈ ಮನದೊಳು
ನನ್ನ ಮನದ ಸವಿ ನೆನಪು ನೀ
ನೆನಪಾಗಿ ಕಾಡುತಿಹೆ ನಲ್ಲೆ
ಅಂತರಂಗದಿ ಹುದುಗಿಹ ಮೋಹ
ನಿನ್ನ ನೆನಪ ಮತ್ತೆ ಮತ್ತೆ ಸೆಳೆಯುತಿಹುದು
ನಮ್ಮೊಲವ ಭಾವಕ್ಕೆ ಬರ ಬಂದ ಹಾಗೆ
ಏಕೀ ರೀತಿ ಕಾಡುತಿರುವೆ
ನಿರೀಕ್ಷೆ ಯ ಬದುಕಿನಲಿ
ಎಂದಾದರೂ ಸೇರಬಹುದು ನಾವು
ಎಂಬ ಆಶಾಭಾವ ಮನಸಲಿ
ಉಸಿರಲ್ಲಿ ಹುದುಗಿರುವ ನಿನ್ನ ನೆನಪು
ಪ್ರೇಮ ಲೋಕದ ಬಾಗಿಲಲಿ
ಕಾಯುತಿರುವೆ ನಿನಗಾಗಿ
ಈ ವಯಸಿಗೊಂದು ಬಯಕೆ
ಆ ಬಯಕೆ ನೀನಾಗಿರುವೆ
ಸೇರು ಬಾ ಎನ್ನನು ಓ ಗೆಳತಿ
ಕಾಯುತಿರುವೆ ನಿನಗಾಗಿ
ಇಲ್ಲಗಳ ನಡುವೆ ಸಾಗಿವೆ
ದಿನಗಳು ಕನಸುಗಳ ಬಿಂಬದೊಳು
ನಿನ್ನ ಸೇರುವ ಕಾತರ
ಏಕೋ ಏನೋ ಕಾಯುತಿಹ
ಬಯಕೆಗಳಲಿ ಆವರಿಸಿರುವ
ನಿರಾಸೆ ಹತಾಶೆ
ಬಂದು ಬಿಡು ಬೆಳಕಿನಂತೆ
ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨
ರೇಖಾಚಿತ್ರಗಳು. ರೇಖಾ ಮೊರಬ
ಹುಬ್ಬಳ್ಳಿ