ಹೆಬಸೂರ ಗ್ರಾಮದಲ್ಲಿ ಅಂತರ್ ರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ..
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ರಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಘನ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಮಂತ್ರಾಲಯ ವಿಧಾಯಿ ಇಲಾಖೆಯು ಪ್ರಕಟಿಸಿರುವ ಸಂವಿಧಾನ ಪೀಠಿಕೆಯ ಮಾದರಿ ಅನುಸಾರ ಸಂವಿಧಾನ ಬದ್ಧ ಸಂವಿಧಾನ ತತ್ವಾದರ್ಶಗಳನ್ನು ಮೌಲ್ಯಗಳನ್ನು ಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಕುರಿತು ಶಾಲಾ ಪ್ರಾರ್ಥನಾ ಸಮಯದಲ್ಲಿ ಪ್ರತಿಜ್ಞೆಗೈಯುವ ಕಾರ್ಯಕ್ರಮ ಜರುಗಿತು. ನಾವೆಲ್ಲರೂ ನಡೆದಾಡುವ ಭೂಮಿ ಒಂದೇ ಕುಡಿಯುವ ನೀರು ಒಂದೇ ಉಸಿರಾಡುವ ಗಾಳಿ ಒಂದೇ ಸುಡುವ ಸೂರ್ಯ ಒಂದೇ ಎಂದು ಕಿರು ಭಾಷಣ ಮಾಡಿದ ವಿದ್ಯಾರ್ಥಿ ನಿ ಕುಮಾರಿ ಪ್ರಿಯಾ ಮ.ಹೂಗಾರ ಇವಳ ಭಾಷಣ ಮಾರ್ಮಿಕವಾಗಿತ್ತು .
ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ.ಎಸ್.ಡಿ.ಎಮ್.ಸಿ.ಪದಾಧಿಕಾರಿಗಳಾದ ವೆಂಕಣ್ಣ ತಳವಾರ ಲಾಡಸಾಬ ಶೇಖಸನದಿ ರಾಜೇಸಾಬ ನಾಯ್ಕರ.ವೀಣಾ.ಈಟಿ. ಪೀರಖಾನವರ ಪ್ರ.ಗು.ಲತಾ ಗ್ರಾಮಪುರೋಹಿತ.ದೇವೇಂದ್ರ ಪತ್ತಾರ.ದ್ರಾಕ್ಷಾಯಿಣಿ ಕೊರಗರ.ಶಾರದಾ ಕಂಬಳಿ.ಸುವರ್ಣ ಮಡಿವಾಳರ ಸುಧಾ.ಕೊಣ್ಣೂರ.ಗೀತಾ ಕೆಂಚರಡ್ಡಿ ಉಪಸ್ಥಿತರಿದ್ದರು.