ಗುರುಗಳಿಗೆ ಗೌರವ ಹೆಬ್ಬಳ್ಳಿ ಗ್ರಾಮದ ಶಾಲಾಭಿವೃದ್ದಿ ಸಮಿತಿಗಳಿಂದ ಗ್ರಾಮದ ಶಿಕ್ಷಕರಿಗೆ ಗೌರವಿಸುವ
ವಿನೂತನ ಕಾರ್ಯಕ್ರಮ..
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಎಲ್ಲಾ ಶಾಲೆಗಳ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯವರು, ಗ್ರಾಮ ಮಟ್ಟದ ಶಿಕ್ಷಕರ ದಿನವನ್ನು ಆಚರಿಸಿ, ಗ್ರಾಮದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ಸತ್ಕರಿಸಿ, ಗೌರವಿಸುವ ವಿನೂತನ ಕಾರ್ಯಕ್ರಮವನ್ನು ಇದೇ ಶನಿವಾರ 16-9-2023 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿರುತ್ತಾರೆ, ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಹಾಗೂ ಜನತಾ ಪ್ಲಾಟನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯವರು, ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ, ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಪ್ಲಾಟ, ನೆಹರೂ ಪ್ರೌಢಶಾಲೆ ಹಾಗೂ ನೇಹರೂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ, ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ, ಈ ಎಲ್ಲಾ ಶಾಲೆಗಳ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಈ ವರ್ಷದಿಂದ ಗ್ರಾಮದ ಎಲ್ಲಾ ಶಾಲೆ, ಕಾಲೇಜುಗಳ ಶಿಕ್ಷಕರುಗಳನ್ನು ಗೌರವಿಸಿ ಸತ್ಕರಿಸುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ, ಗುರುಗಳನ್ನು ಸತ್ಕರಿಸಿ ಗೌರವಿಸುವ ಗುರು ಪರಂಪರೆಗೆ ಹೆಸರಾಗಿರುವ ಹೆಬ್ಬಳ್ಳಿ ಗ್ರಾಮದ ಜನತೆಯ ಅದರಲ್ಲೂ ಹಿರಿಯರು, ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಜರುಗಲಿರುವ ಈ ಸಮಾರಂಭವನ್ನು, ಧಾರವಾಡ ನಗರದ ಪ್ರತಿಷ್ಠಿತ ವೈಶುದೀಪ ಪೌಂಡೇಶನ ಮುಖ್ಯಸ್ಥರು ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ನಿಂಗಪ್ಪ ಮೊರಬದ. ಉಪಾಧ್ಯಕ್ಷರಾದ ಸುಸೀಲವ್ವ ಸಾಲಿ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಎಲ್ಲಾ ಶಾಲೆಗಳ ಶಾಲಾಭಿವೃದ್ದಿ ಹಾಗು ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರು ಉಪಾಧ್ಯಕ್ಷರು ಸರ್ವಸದಸ್ಯರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಜರುಗಲಿದೆ, ಎಂದು ಕಾರ್ಯಕ್ರಮದ ಸಂಚಾಲಕ ಶಾಲಾಭಿವೃದ್ದಿ ಸಮಿತಿಯ ಸದಸ್ಯ ಚಂದ್ರಶೇಖರ ಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದರು.